ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:33/2021 ಕಲಂ: 454, 457, 380 IPC.

             ದಿನಾಂಕ: 28-03-2021 ರಂದು ಬೆಳಿಗ್ಗೆ 08-30 ಘಂಟೆಯಿಂದ ದಿನಾಂಕ 29-03-2021 ರಂದು ರಾತ್ರಿ 20-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹಾವೇರಿ ಶಹರದ ಗುಡಸಲಕೇರಿಯಲ್ಲಿನ ರವಿಕುಮಾರ ಸಾರ್ಮಾಟಮಲ್ ಇವರ ವಾಸದ ಮನೆಯ ಮುಂದಿನ ಬಾಗಿಲಿನ ಕೀಲಿ ಮುರಿದು ಒಳಗೆ ಹೊಕ್ಕು ಬೆಡ್ ರೂಂ ದಲ್ಲಿದ್ದ ಟ್ರಜುರಿಯ ಮೇಲೆ ಇಟ್ಟಿದ್ದ ಕೀಲಿಯಿಂದ ಟ್ರಜುರಿಯ ಬಾಗಿಲು ತೆಗೆದು ಅದರ ಒಳಗಿನ ಡ್ರಾದಲ್ಲಿದ್ದ ಸುಮಾರು 15,80,000/-ರೂ ಕಿಮ್ಮತ್ತಿನ ನಮೂದ ಸುಮಾರು 390.5 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:45/2021 ಕಲಂ: 379 IPC.

              ದಿನಾಂಕ: 18-03-2021 ರಂದು 23-30 ಗಂಟೆಯಿಂದಾ ದಿನಾಂಕ: 19-03-2021 ರಂದು ಬೆಳಗಿನ ಜಾವ 00-30 ಗಂಟೆಯ ನಡುವಿನ ಅವಧಿಯಲ್ಲಿ ಹೊಲಬಿಕೊಂಡ ಗ್ರಾಮದ ಪುಟ್ಟಪ್ಪ ಬಸವರಾಜಪ್ಪ ಪೂಜಾರ ಸಾ ಹೊಲಬಿಕೊಂಡಾ ಇವರ ವಾಸದ ಮನೆಯ ಮುಂದೆ ನಿಲ್ಲಿಸಿದ್ದ ಒಂದು ಕಪ್ಪು ನೀಲಿ ಬಣ್ಣದ ಹಿರೋ ಸ್ಲೇಂಡರ್ ಪ್ರೋ ಮೋಟಾರ ಸೈಕಲ್ ನಂಬರ್; ಕೆ,ಎ,27/ಡಬ್ಲು-1907 ಇದರ ಇಂಜಿನ್ ನಂ:-HA10EHBHJ05845 ಮತ್ತು ಚಾಸ್ಸಿ ನಂ; MBLHA10ADBHJ05364 ಇದರ ಅ:ಕಿ : 15,000/-ರೂನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:46/2021 ಮಹಿಳೆ ಕಾಣೆ.

              ಕುಃ ಆಲಿಯಾ ತಂದೆ ರಿಯಾಜಅಹ್ಮದ್ ಶಿಕಾರಿಪುರ ವಯಾ: 18 ವರ್ಷ, 07 ದಿನಗಳು ಜಾತಿ: ಮುಸ್ಲಿಂ, ಉದ್ಯೋಗ: ಮನೆಗೆಲಸ, ಸಾ: ಹಿರೇಕೆರೂರ ಆಜಾದನಗರ, ತಾ:ಹಿರೇಕೆರೂರ ಇವಳು ದಿನಾಂಕ: 28-03-2021 ರಂದು 15-00 ಗಂಟೆಗೆ ಹಿರೇಕೆರೂರ ನಗರದ ತನ್ನ ವಾಸದ ಮನೆಯಿಂದ ಬಟ್ಟೆ ಹೊಲೆಸಲು ಹೋಗುತ್ತೇನೆ ಅಂತಾ ಹೇಳಿ ಹೋದವಳು ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಆಲಿಯಾ ಶಿಕಾರಿಪುರ ಇವಳು ದುಂಡುಮುಖ, ನೀಟಾದ ಮೂಗೂ, ಗೋದಿ ಮೈಬಣ್ಣ ಎತ್ತರ 5 ಅಡಿ ಹೊಂದಿದ್ದು ಮನೆಯಿಂದ ಹೋಗುವಾಗ ನೀಲಿಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದು ಕಾಣೆಯಾಗಿ ಹೋದ ನನ್ನ ಮಗಳನ್ನು ಪತ್ತೆ ಮಾಡಿ ಕೊಡಬೇಕೆಂದು ತಂದೆ ರಿಯಾಜಅಹಮದ್ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-03-2021 06:19 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080