ಅಭಿಪ್ರಾಯ / ಸಲಹೆಗಳು

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:57/2021 ಕಲಂ: 457,380 IPC.

                     ಕಾಗಿನೆಲೆ ಪೊಲೀಸ್ ಠಾಣೆ ಹದ್ದಿ ಪೈಕಿ, ಹೆಡಿಗ್ಗೊಂಡ ಗ್ರಾಮದಲ್ಲಿರುವ ಕಲ್ಮೇಶ್ವರ ದೇವಸ್ಥಾನದಲ್ಲಿ ದಿನಾಂಕಃ 27-08-2021 ರಂದು ಸಾಯಂಕಾಲ 6-00 ಗಂಟೆಯಿಂದ  ಬೆಳಗಿನ ಜಾವ 5-45 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಲ್ಮೇಶ್ವರ ದೇವಸ್ಥಾನದ ಬಾಗಿಲ ತೆಗೆದು ಒಳಗೆ ಹೋಗಿ ದೇವಸ್ಥಾನದ ಆವರಣದಲ್ಲಿದ್ದ ವಿರಭದ್ರೆಶ್ವರ ದೇವರ ಗರ್ಭಗುಡಿ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಮುರಿದು ಒಳಗೆ ಹೋಗಿ, ಅಲ್ಲಿಟ್ಟಿದ್ದ ಟ್ರಜುರಿಯಲ್ಲಿದ್ದ ಒಂದು ಕಬ್ಬಿಣದ ರಾಡು ಮತ್ತು ಒಂದು ಕಟ್ಟಿಗೆಯ ಸುತ್ತಿಗೆ ತೆಗೆದುಕೊಂಡು ಅವುಗಳಿಂದ ದೇವಸ್ಥಾನದ ಆವರಣದಲ್ಲಿರುವ ಕಾಣಿಕೆ ಹುಂಡಿಯ ಬಾಗಿಲಿಗೆ ಹಾಕಿದ್ದ ಲಾಕರನ್ನು ಮೀಟಿ ಮುರಿದು ಅದರೊಳಗೆ ಇದ್ದ ಸುಮಾರು 30,000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:129/202 ಕಲಂ: 380,454,457 IPC.

                     ದಿನಾಂಕ:24-08-2021 ರಂದು ಸಾಯಂಕಾಲ 18-00 ಗಂಟೆಯಿಂದ ದಿನಾಂಕ:27-08-2021 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ಅವಧಿಯಲ್ಲಿ ರಾಣೆಬೆನ್ನೂರು ಶಹರದ ವಿದ್ಯಾ ನಗರ ಅಂಬೇಡ್ಕರ ಸ್ಕೂಲ ಹತ್ತಿರ  ಎಸ್‌ ಡಿ ಕೊಮಲಾಕ್ಷೀ ಸಾ|| ವಿಧ್ಯಾನಗರ ರಾಣಿಬೇನ್ನೂರ ಇವರ ವಾಸದ ಮನೆಯ ಮುಂದಿನ ಬಾಗಿಯಲನ್ನು ಯಾರೋ ಕಳ್ಳರು ಬಲವಾಗಿ ಒತ್ತಿ, ಬಾಗಿಲ ಇಂಟರ್ ಲಾಕಿನ ಕೊಂಡಿಯನ್ನು ಹಾರಿಸಿ ಮನೆಯ ಒಳಗೆ ಪ್ರವೇಶ ಮಾಡಿ ಬೆಡ್ ರೂಮಿನಲ್ಲಿ ಇದ್ದ ಕಬ್ಬಿಣದ ಟ್ರಜರಿಯ ಲಾಕರನ್ನು ಓಫನ್ ಮಾಡಿ, ಬಟ್ಟೆ ಬರೆಗಳನ್ನು ಕೆಳಗೆ ಬಿಳಿಸಿ ಲಾಕರದಲ್ಲಿ ಇಟ್ಟಿದ್ದ  1)  ಎರಡು ಎಳೆಯ ಬಂಗಾರದ  ಚೈನ್ 15 ಗ್ರಾಂ ಅ:;ಕಿ: 52,500/- ರೂ ಗಳು 2) ಎರಡು ಸಿಂಗ್ ಎಳೆಯ ಬಂಗಾರ ಚೈನ್ 15 ಗ್ರಾಂ ಅ:ಕಿ:52,500/- ರೂ ಗಳು 3) ಎರಡು ಬಂಗಾರದ ಉಂಗುರ 6 ಗ್ರಾಂ ಅ:ಕಿ:21,000/- ರೂ ಗಳು 4) ಒಂದು ಜೊತೆ ಬಂಗಾರದ ಕಿವಿ ಒಳೆ 4 ಗ್ರಾಂ ಅ:ಕಿ: 14,000/- ರೂ ಗಳು 5)  ಸಣ್ಣ ಬಂಗಾರದ ಕಿವಿ ಓಲೆ ಒಂದು ಜೊತೆ 2 ಗ್ರಾಂ ಅ:ಕಿ:7000/- ರೂ ಗಳು  ಇವೆಲ್ಲವುಗಳ ಅ:ಕಿ: 1,47,000=00 ರೂ ಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2021 ವ್ಯಕ್ತಿ ಸಾವು.

                    ದಿನಾಂಕ; 27-08-2021 ರಂದು ಮುಂಜಾನೆ 10-00 ಗಂಟೆಗೆ ನಾಗರಾಜ ತಂದೆ ರಾಮಪ್ಪ ಹಾದ್ರಿಹಳ್ಳಿ ವಯಾ-38 ವರ್ಷ, ಜಾತಿ-ಹಿಂದೂ ಉಪ್ಪಾರ, ಉದ್ಯೋಗ-ಕೂಲಿ ಕೆಲಸ, ಸಾ; ಕೋಡ, ತಾ; ಹಿರೇಕೆರೂರ. ಇವನು ಕೋಡ ಗ್ರಾಮದಲ್ಲಿ ಕೆ. ಜಿ ಪ್ರತಾಪಕುಮಾರ ಪಾಟೀಲ ಸಾ; ಹಿರೇಕೆರೂರ ಇವರು ಕಟ್ಟಡ ಕೆಲಸಕ್ಕೆ ಹೋಗಿದ್ದು ನಂತರ ಸಂಜೆ 6-30 ಗಂಟೆಯ ನಡುವಿನ ಅವದಿಯಲ್ಲಿ ಕೆ.ಜಿ. ಪ್ರತಾಪಕುಮಾರ ಇವರ ಕಟ್ಟಡದ ಪಕ್ಕದಲ್ಲಿನ ತಗಡಿನ ಶಡ್ಡಿನಲ್ಲಿ ಮೃತ ಪಟ್ಟಿದ್ದು ಇರುತ್ತದೆ, ಮೃತನು ಯಾವಕಾರಣಕ್ಕೆ ಮೃತಪಟಿದ್ದಾನೆ ಅನ್ನುವದು ತಿಳಿದು ಬಂದಿರುವದಿಲ್ಲ ಆದ ಕಾರಣ ಮೃತ ಸಾವಿನ ಬಗ್ಗೆ ತನಿಖೆ ಮಾಡಲು ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 03-09-2021 01:50 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ