ಅಭಿಪ್ರಾಯ / ಸಲಹೆಗಳು

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 95/2021 ಕಲಂ: 394 IPC.

               ಚಂದನ್ ಎಲ್ ಹಾಗೂ ಸಹ ಕೆಲಸಗಾರ ಚಂದನಕುಮಾರ ಇಬ್ಬರೂ ರಟ್ಟೀಹಳ್ಳಿ ಚೈತನ್ಯ ಪೈನಾನ್ಸದಲ್ಲಿ ಸಾಲಾಧಿಕಾರಿ (ಗ್ರಾಹಕರ ಹಣ ಮರುಪಾವತಿ ಪಡೆದಯುವ) ಕೆಲಸ ಮಾಡುತ್ತಾ ಬಂದಿದ್ದು, ದಿನಾಂಕ: 28/07/2021 ರಂದು ಮುಂಜಾನೆಯಿಂದ ಇಬ್ಬರೂ ಮೆದೂರ, ನಾಗವಂದ, ಅಂಗರಗಟ್ಟಿ ಗ್ರಾಮಗಳಲ್ಲಿ ಪೈನಾನ್ಸದ ಹಣ ಕಲೇಕ್ಟ ಮಾಡಿ ಬ್ಯಾಗಿನಲ್ಲಿ ಇಟ್ಟುಕೊಂಡು ತಮ್ಮ ಬೈಕಿನಲ್ಲಿ ಅಂಗರಗಟ್ಟಿ ಗ್ರಾಮದ ಕಡೆಯಿಂದ ಹಳ್ಯಾಳ ತಾಂಡ ಕಡೆಗೆ ಚಂದನ್ ಇವರು ಚಂದನಕುಮಾರ ಇವರಿಗೆ ಬೈಕ ಹಿಂದೆ ಕೂಡ್ರಿಸಿಕೊಂಡು ತಾನೇ ಬೈಕ ಚಲಾಯಿಸಿಕೊಂಡು ಸ್ವಲ್ಪ ದೂರ ಬಂದಾಗ ಗುಡ್ಡದ ಹತ್ತಿರ ತಮ್ಮ ಫಲ್ಸರ್ ಬೈಕ ನಿಲ್ಲಿಸಿಕೊಂಡು ನಿಂತಿದ್ದ ಯಾರೋ ಇಬ್ಬರು  ಬೈಕಿಗೆ ಕೈ ಮಾಡಿ ಗಾಡಿ ಚಾವಿ ಬೇಕು ಅಂತಾ ಹೇಳಿದಾಗ ಬೈಕ ಸ್ಲೋ ಮಾಡಿದಾಗ ಅಪರಿಚಿತ ವ್ಯಕ್ತಿಗಳು ಬೈಕ ಚಲಾಯಿಸುತ್ತಿದ್ದ ಚಂದನ್ ಮುಖಕ್ಕೆ ಖಾರದ ಪುಡಿ ಉಗ್ಗಿ ಹಾಗೂ ತಲೆ ಹಿಂಭಾಗಕ್ಕೆ ಕೈಯಿಂದ ಹೊಡೆದು ಬೈಕ ಹಿಂಭಾಗದಲ್ಲಿ ಕೂತಿದ್ದ ಚಂದನಕುಮಾರನಿಗೆ ಸಹ ಕೈಯಿಂದ ಹೊಡೆದು ಚಂದನಕುಮಾರನ ಕೈಯಲ್ಲಿದ್ದ ಒಟ್ಟು 1,28,770/ ರೂ ಹಣ ಇದ್ದ ಬ್ಯಾಗನ್ನು ಕಿತ್ತುಕೊಂದು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕಯಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 153/2021 379 IPC.

               ದಿನಾಂಕ: 28-07-2021 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ಕಿರಣ ತಂದೆ ಸುರೇಶ ಕಳ್ಯಾಳ, ವಯಾ: 22 ವರ್ಷ, ಜಾತಿ: ಲಿಂಗಾಯತ, ಉದ್ಯೋಗ: ಟ್ರ್ಯಾಕ್ಟರ್ ವಾಹನ ಚಾಲಕ, ಸಾ: ಸೂರಣಗಿ ತಾ: ಲಕ್ಷ್ಮೇಶ್ವರ ಜಿ: ಗದಗ ಈತನು ಸರಕಾರದ ಯಾವುದೇ ಪಾಸು ವ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಎಲ್ಲಿಂದಲೋ ನೈಸರ್ಗಿಕ ಸಂಪತ್ತಾಗಿರುವ ಮರಳನ್ನು ಕಳ್ಳತದಿಂದ ಸ್ವರಾಜ ಟ್ರ್ಯಾಕ್ಟರ್ ಟ್ರೇಲರದಲ್ಲಿ ತುಂಬಿಕೊಂಡು ಹೋಗುವಾಗ ಸವಣೂರ ಶಹರದ ಲಕ್ಷ್ಮೇಶ್ವರ ನಾಕಾ ಹತ್ತಿರ ರಸ್ತೆಯ ಮೇಲೆ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:24/2021 ವಿಷ ಸೇವಿಸಿ ವ್ಯಕ್ತಿ ಆತ್ಮ ಹತ್ಯೆ.

               ದೇವೆಂಧ್ರಪ್ಪ  ತಂದೆ ವೆಂಕಪ್ಪ ಲಮಾಣಿ  ವಯಾ -44 ವರ್ಷ, ಜ್ಯಾತಿ- ಹಿಂದೂ ಲಮಾಣಿ ಉದ್ಯೋಗ-ಕೂಲಿ  ವಿಳಾಸಃ ಸಾಃ  ಹಾನಗಲ್ಲ, ನವನಗರ, ಹಾನಗಲ್ಲ ತಾಲೂಕ್, ಹಾವೇರಿ ಜಿಲ್ಲೆ ಇವರು ವಿಪರೀತ ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದು ದಿನಾಂಕಃ27/07/2021 ರಂದು ರಾತ್ರಿಃ08-50 ಗಂಟೆಯಿಂದ ರಾತ್ರಿ 09-10 ಗಂಟೆಯ ನಡುವಿನ ಅವದಿಯಲ್ಲಿ ಮನೆಯಿಂದ ಹೊರಗೆ ಹೋಗಿ ಬರುತ್ತೇನೆಂಧು ಹೇಳಿ ಹೋಗಿ ಸರಾಯಿ ಕುಡಿದ ನಶೆಯಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ತನ್ನಷ್ಟಕ್ಕೆ ತಾನೇ ಕುಡಿದಿದ್ದು ಉಪಚಾರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿದ್ದು ಉಪಚಾರದ  ಕಾಲಕ್ಕೆ ದಿನಾಂಕ 27-07-2021 ರಂದು ರಾತ್ರಿ:11-10 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ನನ್ನ ತಂದೆಯ ಸಾವಿನಲ್ಲಿ ನಮಗೆ ಬೇರೆ ಏನೂ ಸಂಶಯವಿರುವುದಿಲ್ಲ ಅಂತಾ ಮೃತನ ಮಗ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

ಇತ್ತೀಚಿನ ನವೀಕರಣ​ : 04-08-2021 12:11 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ