ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:34/2021 ಮಹಿಳೆ ಕಾಣೆ.

             ಕುಮಾರಿ: ಶ್ವೇತಾ ತಂದೆ ಆಂಜನೇಪ್ಪ ನಂದಿಗಾವಿ, ವಯಾ:21 ವರ್ಷ ಜಾತಿ: ಹಿಂದೂ ಗಂಗಾಮತ, ಉದ್ಯೋಗ:ಮನೆ ಕೆಲಸ, ವಾಸ:ಕವಲೆತ್ತು, ಇವಳು ದಿನಾಂಕ-26-05-2021 ರಂದು ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯ ನಡುವಿನ ಅವಧಿಯಲ್ಲಿ ಕವಲೆತ್ತು ಗ್ರಾಮದ ವಾಸದ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಹಾಗೂ ಕವಲೆತ್ತು ಗ್ರಾಮದ ಮಹಮ್ಮದ್ ಹುಸೇನ್ ತಂದೆ ಶರೀಪ್ ರಾಠಿ  ಇವನೊಂದಿಗೆ ಹೋಗಿರುವ ಸಂಶಯವಿದ್ದು ಕಾಣೆಯಾದ ತನ್ನ ಮಗಳು ಶ್ವೇತಾ ಇವಳಿಗೆ ಹುಡುಕಿಸಿಕೊಡಬೇಕೆಂದು ಆಂಜನೇಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ  ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:85/2021 ಕಲಂ: INDIAN MOTOR VEHICLES ACT, 1988 (U/s-134(A&B),187); 279,338,304(A)) IPC.

            ಅಬ್ದುಲಖಾದರಜಿಲಾನಿ ತಂದೆ ಮರ್ದಾನಸಾಬ ಜಿಗಳೂರ ವಯಾ-20 ವರ್ಷ, ಜಾತಿ-ಮುಸ್ಲಿಂ, ಉದ್ಯೋಗ- ಟೈಲ್ಸ್ ಕೆಲಸ, ಸಾ: ಕಂಚಿನೆಗಳೂರ, ತಾ: ಹಾನಗಲ್ಲ ಇವನು ದಿನಾಂಕ: 28-05-2021 ರಂದು ಮುಂಜಾನೆ 07-30 ಘಂಟೆ ಸುಮಾರಿಗೆ ತನ್ನ ಬಾಬತ್ತ್ ಮೊಟರ್ ಸೈಕಲ್ ನಂಬರ ಕೆಎ-47/ಕೆ-6892 ನೇದ್ದರಲ್ಲಿ ಬೈಕಿನ ಹಿಂದೆ ಗಾಯಾಳು ಧಾದಾಪೀರ ತಂದೆ ಜಿ ಮಹ್ಮದಸಾಬ ಮುಲ್ಲಾ ವಯಾ-24 ವರ್ಷ, ಜಾತಿ -ಮುಸ್ಲಿಂ, ಉದ್ಯೋಗ- ಕೂಲಿ ಕೆಲಸ, ಸಾ; ಕಂಚಿನೆಗಳೂರ, ಇವನಿಗೆ ಕೂರಿಸಿಕೊಂಡು ಕಂಚಿನೆಗಳೂರ ಗ್ರಾಮದಿಂದ ಅಕ್ಕಿಆಲೂರಗೆ ಟೈಲ್ಸ್ ಕೆಲಸಕ್ಕೆ ಅಂತಾ ಹೊತನಹಳ್ಳಿ ಗ್ರಾಮದ ಅಕ್ಕಿಆಲೂರ -ಬೆಳಗಾಲಪೇಟಿ ರಸ್ತೆ ಮಂಜುನಾಥ ತಂದೆ ದೇವಿಂದ್ರಪ್ಪ ಸಿಮಂಡನವರ ಇವರ ಜಮೀನಿನ ಹತ್ತಿರ ರಸ್ತೆಯ ಎಡ ಬದಿಯಲ್ಲಿ ಬೈಕನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ, ಎದುರುಗಡೆಯಿಂದ ಬಂದ ಟಾಟಾ ಮೀನಿ ಗೂಡ್ಸ್ ಲಾರಿ ನಂಬರ ಕೆಎ;35/7853 ನೇದ್ದರ ಚಾಲಕ ಹೆಸರು ವ ವಿಳಾಸ ತಿಳಿದು ಬಂದಿರುವುದಿಲ್ಲಾ, ಇವನು ತನ್ನ ಲಾರಿಯನ್ನು ಅತೀವೇಗವಾಗಿ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಹಾನಿ ಆಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅಬ್ದುಲಖಾದರಜಿಲಾನಿ ಚಲಾಯಿಸುತ್ತಿದ್ದ ಮೋಟರ್ ಸೈಕಲಗೆ ಡಿಕ್ಕಿಪಡಿಸಿ ಸದರಿಯವನಿಗೆ ತಲೆಯ ಮೇಲಿನ ಬಾಗಕ್ಕೆ ಬಲವಾದ ಪೆಟ್ಟು ಬಿದ್ದು ರಕ್ತ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ, ಬೈಕಿನ ಹಿಂದೆ ಕುಳಿತ ಗಾಯಾಳು ಧಾದಾಪೀರ ಇವನಿಗೆ ಎದೆಗೆ, ಬಲಕಾಲಿಗೆ ಗಾಯ ನೋವು ಆಗುವಂತೆ ಮಾಡಿದ್ದು ಅಲ್ಲದೇ, ಟಾಟಾ ಮಿನಿ ಗೂಡ್ಸ್ ಲಾರಿ ಚಾಲಕನು ಸದರ ಅಪಘಾತದ ಸುದ್ದಿಯನ್ನು ಹತ್ತಿರದ ಠಾಣೆಗೂ ತಿಳಿಸದೆ ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸದೆ ಸ್ಥಳದಲ್ಲಿಯೇ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 06/2021 ಮಹಿಳೆ ಸಾವು.

                  ಗದಿಗೆವ್ವ ಕೋಂ  ಆನಂದಪ್ಪ ಬೆನಕನಕೊಂಡ ವಯಾ- 56 ಸಾಃ ನೇಸ್ವಿ ತಾಃ ರಟ್ಟೀಹಳ್ಳಿ ಇವರು ದಿನಾಂಕ 26/05/2021 ರಂದು ಮಧ್ಯಾಹ್ನ 02-20 ಗಂಟೆ ಸುಮಾರಿಗೆ ನೇಶ್ವಿ ಗ್ರಾಮದ ತನ್ನ ಮನೆಯ ಹಿತ್ತಲದಲ್ಲಿ ಆಕಸ್ಮಿಕವಾಗಿ ತಲೆ ಸುತ್ತು  ಬಂದು ನೆಲಕ್ಕೆ ಬಿದ್ದು ಬಲ ತಲೆಗೆ ಪೆಟ್ಟು ಪಡಿಸಿಕೊಂಡವಳನ್ನು ರಟ್ಟಿಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡಿಸಿಕೊಂಡು ಹೆಚ್ಚಿನ ಉಪಚಾರಕ್ಕೆ ದಾವಣಗೇರಿ ಎಸ್.ಎಸ್.ಐ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ಧಾಖಲಿಸಿ ಉಪಚಾರ ಕೊಡಿಸುವಾಗ ಉಪಚಾರ ಫಲಿಸದೆ ದಿನಾಂಕ28/05/2021 ರಂದು 07-20 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ಅವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ. ಅಂತಾ ಮೃತಳ ತಂದೆ ಆನಂದಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 02-06-2021 04:35 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080