ಅಭಿಪ್ರಾಯ / ಸಲಹೆಗಳು

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:40/2021 ಕಲಂ: EPIDEMIC DISEASES ACT, 1897 (U/s-3); THE DISASTER MANAGEMENT ACT, 2005 (U/s-51); 323, 341, 188,0020353, 504, 506, 34 IPC.

                ದಿನಾಂಕ: 27-03-2021 ರಂದು ರಾತ್ರಿ 11-00 ಗಂಟೆಗೆ ಕರ್ಜಗಿ ಗ್ರಾಮದ ಭರಮದೇವರ ಗುಡಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ,ಮಾಲತೇಶ ಪ್ರಕಾಶ ವಡ್ನಿಕೊಪ್ಪ ಹಾಗೂ ಅವರ ಸಹಚರರು ಸೇರಿ ಹಲಗಿ ಬಾರಿಸುತ್ತಾ ಕೇಕೆ ಹಾಕುತ್ತಿದ್ದಾಗ ಕರ್ತವ್ಯದ ಮೇಲೆ ಇದ್ದ ಶಿವರಾಜ ಕಾಡಣ್ಣನವರ ಹಾಗೂ ಹೆಚ್ಸಿ-1427 ವ್ಹಿ ಪಿ ವಾದೋನಿ ಇವರು ತಡರಾತ್ರಿಯಾದ ಬಗ್ಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ನಿಷೇದಾಜ್ಞೆ ಆದೇಶದ ಬಗ್ಗೆ ತಿಳಿಸಿ ಮನೆಗಳಿಗೆ ಹೋಗುವಂತೆ ಎಚ್ಚರಿಕೆ ನೀಡಿದಾಗ್ಯೂ ಸಹ, ಮಾಲತೇಶ ಹಾಗೂ ಅವರ ಸಹಚರರು ಸೇರಿ ಯಾವ ಡಿಸಿ ಆದೇಶ, ಬೋಸಡಿ ಮಕ್ಕಳು ಮ್ಯಾಲೆ ಕುತಗೊಂಡ ಆದೇಶ ಮಾಡಿದರ ನಾವು ನೀವು ಹೇಳಿದಂಗ ಕೇಳಬೇಕಾ, ಯಾವನ ಮಾತು ಕೇಳಂಗಿಲ್ಲ ಏನು ಮಾಡಿಕೊಳ್ಳುತ್ತಿರೋ ಮಾಡಿ ನೀವು ಕರ್ಜಗಿ ಪೊಲೀಸ್ ಠಾಣೆಯಲ್ಲಿ ಹೆಂಗ ನೌಕರಿ ಮಾಡಿತಿರೋ ನೋಡಿಕೊಳ್ಳುತ್ತೆವೆ ಅಂತಾ  ವಾಗ್ವಾದ ಮಾಡುತ್ತ  ಬೈದಾಡುತ್ತ ತಂಟೆ ತೆಗೆದು, ಇಲಾಖೆಯ ಬಗ್ಗೆ ಅವಾಚ್ಯವಾಗಿ ಬೈದಾಡಿ ಸಮವಸ್ರ್ತ ಹಿಡಿದು ಎಳೆದಾಡಿ ಕೈಯಿಂದ ಹೋಡಿ ಬಡಿ ಮಾಡಿ ದುಃಖಾಪತ್ಪಡಿಸಿ ಕರ್ತವ್ಯಕ್ಕೆ ಅಡತಡೆ ಮಾಡಿದ್ದಲ್ಲದೇ ಒಂದು ದಿವಸ ಕರ್ಜಗಿ ಪೊಲೀಸ್ ಸ್ಟೇಷನ್ ಸುಟ್ಟು ಹಾಕುತ್ತೇವೆ ಅಂತಾ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:44/2021 ಮಹಿಳೆ ಕಾಣೆ.

              ಶ್ರೀಮತಿ: ನೇತ್ರಾ ವಸಂತ ಬಣಕಾರ ವಯಾ: 27 ವರ್ಷ ಜಾತಿ: ಹಿಂದೂ-ಕುರುಬರ, ವೃತ್ತಿ: ಮನೆಗೆಲಸ ಸಾ: ಯಲಬಡಗಿ ಇವಳು ತನ್ನ ಮಗಳಾದ ದೀಕ್ಷಾ ವಸಂತ ಬಣಕಾರ ವಯಾ: 3 ½  ವರ್ಷ ಇವಳನ್ನು ಕರೆದುಕೊಂಡು ದಿನಾಂಕ: 28-03-2021 ರಂದು 17-00 ಗಂಟೆ ಸುಮಾರಿಗೆ ತನ್ನ ಗಂಡನ ಮನೆಯಿಂದ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಾರದೇ ಇದ್ದುದರಿಂದ 18-15 ಗಂಟೆಯ ಸುಮಾರಿಗೆ ಹೋಗಿ ನೋಡಲು ಎಲ್ಲೂ ಸಿಗದೇ ಇದ್ದು ರಸ್ತೆಯ ಮೇಲೆ ಇದ್ದ ಸಣ್ಣ ಹುಡುಗರು ಕಾಣೆಯಾದವಳು ತನ್ನ ಮಗುವಿನೊಂದಿಗೆ ಒಂದು ಕಾರಿನಲ್ಲಿ ಹತ್ತಿದ್ದು ಕಾರ ಹಲಗೇರಿ ಕಡೆಗೆ ಹೋಗಿದ್ದು ಇರುತ್ತದೆ ಅಂತಾ ತಿಳಿಸಿದ್ದು ತನ್ನ ಪತ್ನಿಯು ತನ್ನ ಮಗಳೊಂದಿಗೆ ಯಾವುದೋ ಕಾರಿನಲ್ಲಿ ಹೋಗಿರುವ ಬಗ್ಗೆ ಅನುಮಾನ ಇರುತ್ತದೆ ನನ್ನ ಪತ್ನಿ ಮತ್ತು ಮಗಳನ್ನು ಹುಡುಕಿಕೊಡಲು ವಸಂತ ಫಿರ್ಯಾದಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ಮಂಜುನಾಥ ತಂದೆ ಚನ್ನಬಸಪ್ಪಕುಪ್ಪೆಲೂರ ವಯಸ್ಸು: 32 ವರ್ಷ ಸಾ: ನಿಟ್ಟೂರ ಇವನು ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಕಳೆದ ವರ್ಷ ಅವನಿಗೆ ಮೆದುಳಿನಲ್ಲಿ ಗಡ್ಡೆಯಾಗಿ ಉಪಚಾರ ಹೊಂದಿದ್ದು ಅದನ್ನೂ ಕೂಡಾ ಮನಸ್ಸಿಗೆ ಹಚ್ಚಿಕೊಂಡು ಹೆಚ್ಚಿನ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ದಿನಾಂಕ: 27-03-2021 ರ ಸಂಜೆ 7-00 ಗಂಟೆಯಿಂದ 7-30 ಗಂಟೆಯ ನಡುವಿನ ಅವಧಿಯಲ್ಲಿ ಸಾರಾಯಿ ಕುಡಿದ ಮತ್ತಿನಲ್ಲಿ ನಮ್ಮ ಮನೆಯ ಹಿಂದೆ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣೆ ಕುಡಿದು ಅಸ್ವಸ್ಥಾನಾದಾಗ ಅವನಿಗೆ ರಾಣೇಬೆನ್ನೂರ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ದಾವಣಗೆರೆಯಲ್ಲಿ ದಾಖಲಿಸಿದ ಕಾಲಕ್ಕೆ ಉಪಚಾರ ಫಲಿಸದೇ ಮರಣ ಹೊಂದಿದ್ದು ಇರುತ್ತದೆ ವಿನಃ ಬೇರೆ ಏನೂ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತನ ತಾಯಿ ವರದಿ ನೀಡಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-03-2021 06:16 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ