ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:11/2021 ಕಲಂ:306,363 IPC. 

            ಪ್ರವೀಣ ಹನುಮಂತಪ್ಪ ಬಾಗಿಲದ ಸಾ|| ಹಳೆರಿತ್ತಿ ಇತನು ಗಂಗವ್ವ ಸಹದೇವಪ್ಪ ಬಾಳಿಕಾಯಿ ಇವರ ಮಗಳು ನೇತ್ರಾ ವಯಾ: 17ವರ್ಷ 09 ತಿಂಗಳು ಇವಳು ಅಲ್ಪವಹಿ ಇರುತ್ತಾಳೆ ಅಂತಾ ಗೊತ್ತಿದ್ದರು ಕೂಡ ಅವಳನ್ನು ದಿನಾಂಕ 25-02-2021 ರಂದು ಎಲ್ಲಿಂದಲೋ ಪುಸಲಾಯಿಸಿ ಮೋಟಾರ ಸೈಕಲ್ಲದಲ್ಲಿ ಬಸಾಪುರ ಗ್ರಾಮದ ಅರಣ್ಯದಲ್ಲಿ ಕರೆದುಕೊಂಡು ಹೋಗಿ ದಿನಾಂಕ 28-02-2021 ರಂದು ಮದ್ಯಾಹ್ನ 02-00 ಗಂಟೆ ನಡುವಿನ ಅವದಿಯಲ್ಲಿ ನೇತ್ರಾ ಹಾಗೂ ಪ್ರವೀಣ ಇವರು ಯಾವುದೋ ವಿಷಕಾರಕ ಎಣ್ಣೆ ಸೇವಿಸಿ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2021 ಕಲಂ: 394 IPC.

             ಜಮೀಲ ಅಹ್ಮದ ಪಟೇಲ ಸಾ ಬಂಕಾಪೂರ ಇವರು ದಿನಾಂಕ:27-02-2021 ರಂದು ಸಾಯಂ ಕಾಲ ಹುಬ್ಬಳ್ಳಿಯ ಎವರ್ ಗ್ರೀನ್ ಟ್ರಾಸಪೋರ್ಟಗೆ ಹೋಗಿ ಅಲ್ಲಿ ತನಗೆ ಬರಬೇಕಾದ ಒಣ ಮೆಣಸಿನಕಾಯಿ  ವ್ಯವಹಾರದ ಒಟ್ಟು 7,50,000/- ರೂಗಳ ಹಣವನ್ನು ಪಡೆದುಕೊಂಡು ಬಸ್ ಮೂಲಕ ಶಿಗ್ಗಾಂವಕ್ಕೆ ಬಂದು ಅಲ್ಲಿಂದ ತನ್ನ ಮೊಟರ್ ಸೈಕಲ್ ನಂ ಕೆಎ27 ಇಟಿ 4803 ನೇದ್ದನ್ನು ತೆಗೆದುಕೊಂಡು ಅದರಲ್ಲಿ ಹಣ ಇದ್ದ ಬ್ಯಾಗನ್ನು ಇಟ್ಟುಕೊಂಡು ಎನ್ಎಚ್ 4 ರಸ್ತೆ ಹಿಡಿದುಕೊಂಡು ಬರುವಾಗ ಬಂಕಾಪೂರದ ಸಾಯಿ ದಾಬಾ  ಹತ್ತಿರ ಹಿಂದಿನಿಂದ ಮೊಟರ್ ಸೈಕಲ್ದಲ್ಲಿ  ಬಂದವರು  ಬಡಿಗೆಯಿಂದ  ಪಿರ್ಯಾದಿಯ ತಲೆಗೆ  ಹೊಡೆದಿದ್ದು ಆಗ ಗಾಡಿ ನಿಯಂತ್ರಣ ತಪ್ಪಿ ಬಿದ್ದಾಗ ಜಮೀಲ ಇವರ ಬಳಿ ಇದ್ದ ಬ್ಯಾಗನ್ನು ಇಬ್ಬರು  ಕಸಿದುಕೊಳ್ಳಲು ಪ್ರಯತ್ನಿಸಿದ್ದು ಆವಾಗ, ಕೊಡೆದೆ ಹೋದಾಗ ಪುನಃ ಅದೆ ಬಡಿಗೆಯಿಂದ ಮುಂಗೈಗೆ ಹೊಡೆದು ಬ್ಯಾಗದಲ್ಲಿ ಇದ್ದ 7,50,000/- ರೂಗಳನ್ನು  ಕಿತ್ತುಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:27/2021 ಮಹಿಳೆ ಕಾಣೆ.

             ವಿದ್ಯಾ ಕೋಂ ದ್ಯಾಮಪ್ಪ ಹಂಪಣ್ಣನವರ ವಯಾ: 27 ವರ್ಷ ಸಾ: ಕಮದೋಡ ತಾ: ರಾಣೇಬೆನ್ನೂರ  ಇವಳು  ತನ್ನ ಮಗನಾದ  ದರ್ಶನ್ ತಂದೆ  ದ್ಯಾಮಪ್ಪ ಹಂಪಣ್ಣನವರ ವಯಾ: 3 ವರ್ಷ 6 ತಿಂಗಳು ಇವನನ್ನು ಕರೆದುಕೊಂಡು  ದಿನಾಂಕ27-02-2021  ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ವಿದ್ಯಾ ಕೋಂ ದ್ಯಾಮಪ್ಪ ಹಂಪಣ್ಣನವರ ಇವಳು ಈಗ ಸುಮಾರು 2 ವರ್ಷಗಳಿಂದ ವಿದ್ಯಾ ಇವರ ಮನೆ ಕಟ್ಟಿದ ಮೈನುದ್ದಿನ ನಜೀರಸಾಬ ಮುಲ್ಲಾ ಸಾ:ಶಿದ್ದೇಶ್ವರ ನಗರ ರಾಣೇಬೆನ್ನೂರ ಇವನೊಂದಿಗೆ ಸಲುಗೆ ಇರುವದರಿಂದ  ವಿದ್ಯಾಳ ಗಂಡ ಹಾಗೂ ಅವರ ಮನೆಯವರೆಲ್ಲರೂ ಸೇರಿ ಎಚ್ಚರಿಕೆ ನೀಡದರು ಸಹ, ಮೈನುದ್ದಿನ ನಜೀರಸಾಬ ಮುಲ್ಲಾ ಇವನೊಂದಿಗೆ ಹೋಗಿರಬಹುದು ಅಂತಾ ಅನುಮಾನ ಇರುತ್ತದೆ ಕಾರಣ ಕಾಣೆಯಾದವರನ್ನು ಹುಡುಕಿಕೊಡಬೇಕೆಂದು ಪುನಿತ್ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 04-03-2021 12:06 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ