ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:113/2021 ಮಹಿಳೆ ಕಾಣೆ.

                     ಯಲ್ಲಮ್ಮ ಕೋಂ ನಾಗನಗೌಡ ಮೂಕನಗೌಡ್ರು ವಯಾ: 21 ವರ್ಷ ಜಾತಿ: ಹಿಂದೂ ರಡ್ಡಿ, ಉದ್ಯೂಗ: ಮನೆಕೆಲಸ, ಸಾ:ಕುಸಗೂರು ತಾ:ರಾಣೇಬೆನ್ನೂರ ಇವಳು ದಿನಾಂಕಃ21-08-2021 ರಂದು 11-00 ಗಂಟೆ ಸುಮಾರಿಗೆ ಹಲಗೇರಿ ಗ್ರಾಮದ ಬಸ್ ನಿಲ್ದಾಣದಿಂದ ಕುಪ್ಪೇಲೂರಿ ಗ್ರಾಮದಲ್ಲಿ ಇರುವ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ಬರುತ್ತೇನೆಂದು ಹೇಳಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿ ಕಾಣೆಯಾದವಳ ಚಹರೆಃ ಎತ್ತರ 4 ಅಡಿ 9 ಇಂಚು, ಕೂಲು ಮುಖ, ಸಾಧಾರಣ ಮೈಕಟ್ಟು, ಸಾದಾ ಕಪ್ಪು ಮೈಬಣ್ಣ, ನೀಟಾದ ಮೂಗು, ತಲೆಯಲ್ಲಿ ಸುಮಾರು 7' ಇಂಚು ಉದ್ದ ಕಪ್ಪು ಕೂದಲು ಇರುತ್ತವೆ. ಹೋಗುವಾಗ ಹಳದಿ ಬಣ್ಣದ ಚೂಡಿದಾರ ಹಾಗೂ ಕೆಂಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ, ಬಾಷೆಯನ್ನು ಮಾತನಾಡುತ್ತಾಳೆ. ಕಾಣಿಯಾದವಳ ಆದಾರ ಕಾರ್ಡ ನಂ: 514842818467 ಮತ್ತು ರೇಷನ್ ಕಾರ್ಡ ನಂ 170500229891 ಅಂತಾ ಇರುತ್ತದೆ. ಈ ರೀತಿ ಚಹರೆಪಟ್ಟಿಯುಳ್ಳ ಯಲ್ಲಮ್ಮ ಕೋಂ ನಾಗನಗೌಡ ಮೂಕನಗೌಡ್ರು ಸಾ:ಕುಸಗೂರು ಇವಳನು ಹುಡುಕಿಕೊಡಲು ವಿನಂತಿ ಅಂತಾ ಹನುಮಂತಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:116/202 ಮಹಿಳೆ ಕಾಣೆ.

                     ಸೌಪರ್ಣಿಕ  ತಂದೆ ಆರ್ ಮುಗಂ ಚಟ್ಟಿಯಾರ್  ವಯಾ-20 ವರ್ಷ. ಜಾತಿ-ಹಿಂದೂ-ತೆಲುಗು ಶೆಟ್ಟಿ, ಉದ್ಯೋಗ-ವಿದ್ಯಾಬ್ಯಾಸ, ಸಾ:ಬೆಂಗಳೂರ ಹಾಲಿವಸ್ತಿ ಬ್ಯಾಡಗಿ ಕದರಮಂಡಲಗಿ ರಸ್ತೆ ಸಂತೆ ಮಾರ್ಕೇಟ್  ಹತ್ತಿರ  ಇವಳು ದಿನಾಂಕ;26-08-2021 ರಂದು ರಾತ್ರಿ 11-45 ಘಂಟೆಯಿಂದ  ದಿನಾಂಕ:27-08-2021 ರಂದು ಮದ್ಯರಾತ್ರಿ 02-45 ಘಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಎಲ್ಲಿಯೋ ಹೋಗಿ  ಕಾಣೆಯಾಗಿದ್ದು ಕಾಣಿಯಾದ ಸೌಪರ್ಣಿಕ ಇವಳನ್ನು ಹುಡುಕಿಕೊಡಬೇಕು ಅಂತಾ ಮಂಜುನಾಥ ಚಟ್ಟಿಯಾರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನುತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:25 /2021ಕಲಂ:279,337,338, 304A  IPC.

                    ಕೋಟೆಪ್ಪ ಪ್ರಕಾಶ ಬೂಧಗಟ್ಟಿ ವಯಾ: 21 ಸಾ|| ಚಿಕ್ಕಹುಲ್ಲಾಳ ಇವರು  ಒಕ್ಕಲುತನ ಮಾಡುತ್ತಾ ಉಪಜೀವನ ಸಾಗಿಸುತ್ತಿದ್ದು ಈ ವರ್ಷ ಮಳೆ ಬೆಳೆ ಸರಿಯಾಗಿ ಬಾರದ್ದರಿಂದ ಒಕ್ಕಲುತನದ ಉದ್ದೇಶಕ್ಕೆ ಕೆನರಾ ಬ್ಯಾಂಕ ರಾಣೇಬೆನ್ನೂರದಲ್ಲಿ 5,00,000/- ರೂ ಹಾಗೂ ಅವರಿವರಿಂದ ಕೈಗಡ ಸಾಲವನ್ನು ಮಾಡಿದ್ದು ಅದನ್ನು ತೀರಿಸುವದು ಆಗಲಿಲ್ಲ ಅಂತಾ ಜೀವನದಲ್ಲಿ ಜಿಗುಪ್ಸೆಹೊಂದಿ ದಿ:27-08-2021 ರಂದು 01-00 ಗಂಟೆಯಿಂದ 09-00 ಗಂಟೆ ಮಧ್ಯದಲ್ಲಿ ಚಿಕ್ಕಅರಳಹಳ್ಳಿ ಗ್ರಾಮದ ತನ್ನ ಜಮೀನ ಸರ್ವೆ ನಂ: 6/6 ರಲ್ಲಿನ ಬದುವಿನಲ್ಲಿರುವ ಬನ್ನಿಕಟ್ಟೆಯಲ್ಲಿನ ಬೇವಿನಗಿಡದ ಟೊಂಗೆಗೆ ಹಗ್ಗವನ್ನು ಕಟ್ಟಿಕೊಂಡು ಕುತ್ತಿಗೆಗೆ ನೇಣುಹಾಕಿಕೊಂಡು ಮರಣಹೊಂದಿರುತ್ತಾನೆ ಸದರೀಯವನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ

 

ಇತ್ತೀಚಿನ ನವೀಕರಣ​ : 03-09-2021 01:48 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ