ಅಭಿಪ್ರಾಯ / ಸಲಹೆಗಳು

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 70/2021 ಮಹಿಳೆ ಕಾಣೆ.

               ಕಮಲವ್ವ ಕೊಂ ಫಕ್ಕೀರಪ್ಪ ಗುಳಣ್ಣನವರ ವಯಾ:40 ವರ್ಷ ಜಾತಿ:ಹಿಂದೂ   ಉದ್ಯೋಗ: ಕೂಲಿ ಕೆಲಸ, ಸಾ|| ಬಂಕಾಪೂರ ನೇಕಾರ ಓಣಿ ಇವಳು ದಿನಾಂಕ: 01-08-2019 ರಂದು 19.00 ಗಂಟೆ ಸುಮಾರಿಗೆ ಪೇಟೆಯಲ್ಲಿ ಹೋಗಿ ಗುಳಿಗೆ ಮತ್ತು ಬಟ್ಟೆ ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋದವಳು  ಮನೆಗೆ ಬಾರದೆ ಇಲ್ಲಿಯೊಹೊಗಿದ್ದು ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಶಾರವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 98/2021 ಮಹಿಳೆ ಕಾಣೆ.

               ಶ್ರೀಮತಿ ಪಾರ್ವತಿ ಕೊಂ ಜಗದೀಶಯ್ಯ ಚರಂತಿಮಠ  ವಯಾ-24 ವರ್ಷ. ಜಾತಿ-ಲಿಂಗವಂತ ಉದ್ಯೋಗ-ಮನೆ  ಕೆಲಸ . ಸಾ-ಲಕಮಾಜಿಕೊಪ್ಪ  ತಾ-ಬ್ಯಾಡಗಿ ಇವಳು ದಿನಾಂಕ;25-05-2021 ರಂದು ರಾತ್ರಿ 09-00 ಗಂಟೆಗೆ ಬಹಿದರ್ಶಿಗೆ ಹಿತ್ತಲಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೊದವಳು  ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿ  ಹೋಗಿದ್ದು, ಕಾಣಿಯಾದ ನನ್ನ ಹೆಂಡತಿಯನ್ನು   ಹುಡುಕಿಕೊಡಬೇಕು ಅಂತಾ ಜಗಧೀಶಯ್ಯಾ ಚರಂತಿಮಠ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:120/2021 ಮಹಿಳೆ ಕಾಣೆ.

               ಶ್ರೀಮತಿ ರಾಜೇಶ್ವರಿ ಕೋಂ ಮಾಲತೇಶ ಬಂಗಿ @ ಕಲ್ಲೇದೇವರು ವಯಾಃ 21 ವರ್ಷ, ಜಾತಿ; ಹಿಂದೂ ವಾಲ್ಮೀಕಿ ಉದ್ಯೋಗ; ವಿಧ್ಯಾರ್ಥಿ  ಸಾಃ ಹನುಮನಹಳ್ಳಿ ತಾಃ ಜಿಃ ಹಾವೇರಿ ಹಾಲಿವಸ್ತಿ ನಿಸ್ಸಿಮ ಆಲದಕಟ್ಟಿ ತಾಃ ಹಾನಗಲ್ಲ  ಇವಳು ದಿನಾಂಕ : 26-07-2021 ರಂದು  ಮುಂಜಾನೆ 11-30 ಘಂಟೆ ಸುಮಾರಿಗೆ ನಿಸ್ಸಿಮ ಆಲದಕಟ್ಟಿ ಗ್ರಾಮದ ಮನೆಯಿಂದಾ ಬ್ಯಾಂಕಿಗೆ ಹೋಗಿ ಬರುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವಳಿಗೆ ಎಲ್ಲಾ ಕಡೆಗೆ ಹುಡುಕಿದರು ಸಿಕ್ಕಿದ್ದು ಇರುವುದಿಲ್ಲಾ ಸದರಿಯವಳಿಗೆ ಹುಡುಕಿ ಕೊಡುವಂತೆ ನಿಶಿಮಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:134/2021 ಕಲಂ: 379 IPC.

               ದಿನಾಂಕ;18/07/2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ; 19/07/2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಹಾನಗಲ್ಲ ಶಹರದ ಕೋಟಿಗೇರಿ ಓಣಿಯಲ್ಲಿರುವ ನೂರಹಮದಖಾನ್ ಇಮಾಮಖಾನ್ ನಾಶಿಪುಡಿ ಸಾ|| ಹಾನಗಲ್ಲ ಇವರ ವಾಸದ ಮನೆಯ ಎದುರಿಗೆ ರಸ್ತೆಯ ಮೇಲೆ ನಿಲ್ಲಿಸಿದ್ದ ಇವರ ಬಾಬತ್ತ ಸಿಲ್ವರ ಕಲರ್ ಹೀರೋ ಸ್ಪ್ಲೆಂಡರ್ ಪ್ಲಸ್ ಕಂಪೆನಿಯ ಮೋಟಾರ್ ಸೈಕಲ್ಲ ನಂಬರ ಕೆಎ-31/ಆರ್-9148, ಚೆಸ್ಸಿ ನಂಬರ; MBLHA10EYBHL52479, ಇಂಜಿನ್ ನಂಬರಃ HA10EFBHL43691, ಅ;ಕಿ; 22,000/-ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:18/2021 ವ್ಯಕ್ತಿ ಸಾವು.

               ಪಾಂಡಪ್ಪ ಲಮಾಣಿ ವಯಾ:   40 ಸಾ: ಸುವರ್ಣಗೀರಿ ತಾ|| ಲಕ್ಷ್ಮೇಶ್ವರ ಇವರು ಸುಮಾರು ನಾಲ್ಕು ತಿಂಗಳ ಹಿಂದೆ ದುಡಿಯಲು ಅಂತಾ ಅವರ ಊರಿನಿಂದ ಹೋದವನು ರಾಣೇಬೆನ್ನೂರು ಶಹರದಲ್ಲಿ ಕೂಲಿ ಕೆಲಸ ಮತ್ತು ಚಿಂದಿ ಆಯುವ ಕೆಲಸ ಮಾಡುತ್ತಾ ಬಂದಿದ್ದು ಸದರಿಯವನು ಸರಿಯಾಗಿ ಊಟ ಮಾಡದೇ ವಿಪರೀತ ಮಧ್ಯಪಾನ ಮಾಡುತ್ತಾ ಬಂದಿದ್ದರಿಂದ ಅವನ ಆರೋಗ್ಯದಲ್ಲಿ ಏರುಪೇರಾಗಿ   ದಿನಾಂಕ:26-07-2021 ರಂದು ರಾಣೆಬೇನ್ನೂರ ಶಹರದ ಕುರಬಗೇರಿ ಕ್ರಾಸ್ ಹತ್ತಿರ ಅನಾರೋಗ್ಯದಿಂದ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

 

 

ಇತ್ತೀಚಿನ ನವೀಕರಣ​ : 04-08-2021 12:10 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ