ಅಭಿಪ್ರಾಯ / ಸಲಹೆಗಳು

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:133/2021 ಕಲಂ: 323,307,376,511,34 IPC.

            ದಿನಾಂಕ: 26-06-2021 ರಂದು ಮಧ್ಯಾಹ್ನ 12-45 ಗಂಟೆ ಸುಮಾರಿಗೆ ಶ್ರೀಮತಿ ಕಸ್ತುರೆವ್ವ ಹಡಗಲಿ ವಯಾ: 32 ವರ್ಷ ಸಾ|| ಹಿರೆಮೆರಳಿಹಳ್ಳಿ ಇವರು ಹಿರೆಮರಳಿಹಳ್ಳಿ ಗ್ರಾಮದಲ್ಲಿ ತಮ್ಮ ಜಮೀನದ ಬದುವಿನ ಹತ್ತಿರ ನೀಲಗಿರಿ ತೋಪಿನ ಹತ್ತಿರ ದನಗಳನ್ನು ಮೇಯಿಸುತ್ತಿರುವಾಗ ಅದೇ ವೇಳೆಗೆ ಬಸವರಾಜ ಗಾಳೆಪ್ಪ ದಂಡಿನ ಇವನು ಕಸ್ತುರೆವ್ವ ಇವರ ಜಮೀನಿಗೆ ಬಂದು ನೀನು ನಮ್ಮೊಂದಿಗೆ ಸಹಕರಿಸು ಅಂತಾ ಅನ್ನುತ್ತಾ ಮೈಮೇಲಿನ ಸೀರೆಯನ್ನು ಕಳೆದಿದ್ದು, ಆಗ ಕಸ್ತುರೆವ್ವ ಓಡಿ ಹೋಗಲು ಪ್ರಯತ್ನಿಸಿದಾಗ ಎದುರಿಗೆ ಪರಶುರಾಮ ತಮ್ಮಣ್ಣ ಹತ್ತಿ ಇವನು ಸಹ ಬಂದಿದ್ದು, ಇಬ್ಬರೂ ಕಸ್ತುರೆವ್ವಗೆ ಕೆಳಗೆ ನೆಲದ ಮೇಲೆ ಕೆಡವಿ ಅವಳಿಗೆ ಕೈಯಿಂದ ಕಪಾಳಕ್ಕೆ ಹೊಡಿಬಡಿ ಮಾಡಿ, ಅವಳ ಮೈಮೇಲಿನ ಲಂಗವನ್ನು ಕಳಚಿ ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ಕೊಸರಾಡುತ್ತಾ ದೂಡಾಡಿದಾಗ ಅವರಿಬ್ಬರೂ ಸೇರಿ ಇವಳು ನಮಗೆ ಸಹಕರಿಸುತ್ತಿಲ್ಲ ಇವಳಿಗೆ ಕೊಲೆ ಮಾಡಿ ಬಿಡೋಣ ಅಂತಾ ಅನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ ಅವಳ ಕುತ್ತಿಗೆಗೆ ಕೈಹಾಕಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:29/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಬಸವರಾಜ ತಂದೆ ಕರಬಸಪ್ಪ ಲಕ್ಕಣ್ಣನವರ. ವಯಾ-66 ವರ್ಷ. ಜಾತಿ-ಹಿಂದೂ-ಲಿಂಗವಂತಉದ್ಯೋಗ-ಶೇತ್ಕಿ ಕೆಲಸ  ಸಾ-ಮೊಟೇಬೆನ್ನೂರ. ತಾ-ಬ್ಯಾಡಗಿ ಇವರು ತಮ್ಮ ಹೆಸರಿನಲ್ಲಿ ಮೊಟೇಬೆನ್ನೂರ ಗ್ರಾಮದ ರಿ..ನಂ. 179/1, ಕ್ಷೇತ್ರ 2 ಎಕರೆ, 20 ಗುಂಟೆ ಜಮೀನಿಗೆ ಬಿತ್ತನೆ ಮಾಡುವ ಸಂಬಂಧ ಮೊಟೇಬೆನ್ನೂರ ಕೆ.ವಿ.ಜಿ ಬ್ಯಾಂಕಿನಲ್ಲಿ 2,00,000/- ರೂ ಸಾಲ ಅಲ್ಲಲ್ಲಿ ಕೈಗಡ 1,00,000/- ರೂ.ಗಳ ಸಾಲವನ್ನು ಮಾಡಿದ್ದು ಈಗ 2-3 ವರ್ಷಗಳಿಂದ ಅತೀಯಾದ ಮಳೆಯಾಗಿದ್ದರಿಂದ  ಜಮೀನಿನಲ್ಲಿ ಬಿತ್ತಿದ ಪೀಕು ಬಾರದೇ ಮಳೆಗೆ ಲುಕ್ಷಾನ್ ಆಗಿದ್ದರಿಂದ ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸುವದು ಹೇಗೆ ಅಂತಾ ಮಾನಸಿಕ ಮಾಡಿಕೊಂಡಿದ್ದು ಸಾಲದ ಬಗ್ಗೆ ಚಿಂತೆ ಮಾಡುತ್ತಾ ಬಂದಿದ್ದು ಅದೇ ಚಿಂತೆಯಲ್ಲಿ ತನ್ನಷ್ಟಕ್ಕೆ ತಾನೇ ದಿನಾಂಕ:-26-06-2021 ರಂದು ಸಾಯಂಕಾಲ 5-00 ಘಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯಲ್ಲಿ ನೇಣು ಹಾಕಿಕೊಂಡಿದ್ದು ಅವನು ಬದಕಬಹುದು ಅಂತಾ ಆಸ್ಪತ್ರೆಗೆ ಕರೆದುಕೊಂಡು ಹೊದಾಗ ವೈದ್ಯರು ಪರೀಕ್ಷಿಸಿ ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದ್ದು. ನನ್ನ ತಂದೆಯ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ ಅಂತಾ ಮೃತನ ಮಗಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 04-07-2021 11:21 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ