ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ಕಲಂ: 379 IPC.

             ಪಿ ಎಸ್ ಐ ಹಾಗೂ ಸಿಬ್ಬಂದಿ ಜನರು ಕೂಡಿ ಪೆಟ್ರೊಲಿಂಗ ಕುರಿತು ದಿನಾಂಕ 27-05-2021 ರಂದು ಮುಂಜಾನೆ 05-45 ಗಂಟೆಗೆ ಗುತ್ತಲ ಮೈಲಾರ ರಸ್ತೆ ಹಿಡಿದು ಹೊರಟಾಗ  ಮೈಲಾರ ಕಡೆಯಿಂದ ಒಂದು ಟಿಪ್ಪರ್  ಲಾರಿ ನಿಲ್ಲಿಸಿ ವಿಚಾರಣೆ ಮಾಡಿದಾಗ ತನ್ನ ಹೆಸರು ಬಸವರಾಜ ಮಲ್ಲಪ್ಪ ಬುಳ್ಳಮ್ಮನವರ ಸಾ:ಸೋಮನಕಟ್ಟಿ, ತಾ: ಹಾವೇರಿ ಅಂತಾ ಹೇಳಿದ್ದು. ಟಿಪ್ಪರ್ ಲಾರಿಯನ್ನು ಪರೀಶಿಲಿಸಲಾಗಿ ಅದರಲ್ಲಿ ಸುಮಾರು 06 ಕ್ಯೂಬಿಕ್ ಮೀಟರ್ ಮರಳು ಇದ್ದು ಅ:ಕಿ 5400/- ರೂಗಳು ಆಗಬಹುದು. ಸದರಿ ಟಿಪ್ಪರ್ ಲಾರಿ ಚಾಲಕನಿಗೆ ಮರಳನ್ನು ತುಂಬಿಕೊಂಡು ಹೋಗಲು ಪಾಸ್ ಇದೇಯೇ ಅಂತಾ ವಿಚಾರಿಸಿದಾಗ ಪಾಸ್ ಪಮೀಟ್ ಇರುವುದಿಲ್ಲ ಅಂತಾ ಹೇಳಿದ್ದು ಟಿಪ್ಪರ್ ಲಾರಿ ನಂಬರ ಪರೀಶಿಲಿಸಲಾಗಿ ಕೆ,ಎ 27 ಬಿ. 3628 ಅಂತಾ ಇದ್ದು ಆಗ ಠಾಣೆಗೆ ತೆಗೆದುಕೊಂಡು ಬಂದು ಕಾನೂನು ರಿತ್ಯ ಕ್ರಮ ಜರುಗಿಸಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:53/2021 ಕಲಂ: 379 IPC.

             ಪಿ ಎಸ ಐ ಗುತ್ತಲ್ ಇವರು ಗುತ್ತಲ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರನ್ನು ಕರೆದುಕೊಂಡು ದಿನಾಂಕ 27-05-2021 ರಂದು ಮುಂಜಾನೆ 07-15 ಗಂಟೆಗೆ ಠಾಣೆಯಿಂದ ಮಾಹಿತಿ ಬಂದ ಸ್ಥಳ ಕಂಚಾರಗಟ್ಟಿ ಕ್ರಾಸ ಹತ್ತಿರ 07-30 ಗಂಟೆಗೆ ಹೋದಾಗ ಮೈಲಾರ ಕಡೆಯಿಂದ ಒಂದು ಟ್ಯಾಕ್ಟರ ಬಂದಿದ್ದು ಅದನ್ನು  ನಿಲ್ಲಿಸಿ ವಿಚಾರಣೆ ಮಾಡಿ ಪರೀಶಿಲಿಸಿದಾಗ ಅದರಲ್ಲಿ ಸುಮಾರು 02 ಕ್ಯೂಬಿಕ್ ಮೀಟರ್ ಮರಳು ಇದ್ದು ಅ:ಕಿ 1800/- ರೂಗಳು ಆಗಬಹುದು. ಸದರಿ ಟ್ಯಾಕ್ಟರ ಚಾಲಕನಿಗೆ ಮರಳನ್ನು ತುಂಬಿಕೊಂಡು ಹೋಗಲು ಪಾಸ್ ಇದೇಯೇ ಅಂತಾ ಕೇಳಿದಾಗ ಚಾಲಕನು ಮರಳಿನ ಬಗ್ಗೆ ಯಾವುದೇ ಪಾಸ್ ಪಮೀಟ್ ಇರುವುದಿಲ್ಲ ಅಂತಾ ಹೇಳಿದ್ದು ಟ್ಯಾಕ್ಟರ ಇಂಜಿನ್ ನಂಬರ ನೋಡಲಾಗಿ ಕೆಎ- 27- ಟಿ,ಬಿ ಅಂತಾ ಮಾತ್ರ  ಇರುತ್ತದೆ. ಟೇಲರಿಗೆ ನೋಂದಣಿ ನಂಬರ ಇರುವುದಿಲ್ಲಾ ಸಿಕ್ಕ ಟ್ಯಾಕ್ಟರನ್ನು ಠಾಣೆಗೆ ತೆಗೆದುಕೊಂಡು ಬಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ಪಕ್ಷಪ್ಪ ಚನ್ನಪ್ಪ ಜೊಳದ ಸಾ|| ತಿಮ್ಮಾಪುರ ಇವರು ಬಾಯಿ ಕ್ಯಾನ್ಸರ ಹುಣ್ಣಿನಿಂದ ಬಳಲುತ್ತಿದ್ದನು. ಅವನಿಗೆ ಹುಬ್ಬಳ್ಳಿಯ ನವನಗರದಲ್ಲಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದರೂ ಸಹ ಅವನಿಗೆ ಕ್ಯಾನ್ಸರ್ ಹುಣ್ಣು ಗುಣವಾಗಿರಲಿಲ್ಲಾ. ಒಮ್ಮೊಮ್ಮೆ ಕ್ಯಾನ್ಸರ್ ಹುಣ್ಣಿನ ನೋವಿನಿಂದ ಬಹಳ ತ್ರಾಸ ಮಾಡಿಕೊಳ್ಳುತ್ತಿದ್ದನು. ಅದನ್ನೆ ಮನಸ್ಸಿಗೆ ಬೇಜಾರ ಮಾಡಿಕೊಂಡು ದಿನಾಂಕ: 24/05/2021 ರಂದು ರಾತ್ರಿ 10-00 ಘಂಟೆಯ ಸುಮಾರು ನೋವಿನ ಬಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೆ ತಿಮ್ಮಾಪೂರ ಗ್ರಾಮದ ತಮ್ಮ ವಾಸದ ಮನೆಯಲ್ಲಿದ್ದ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿದ್ದು, ಅವನಿಗೆ ಉಪಚಾರಕ್ಕೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲ ಮಾಡಿದಾಗ ಉಪಚಾರ ಫಲಿಸದೇ ದಿನಾಂಕ: 27/05/2021 ರಂದು ಬೆಳಗಿನ ಜಾವ 03-00 ಘಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 01-06-2021 04:59 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080