ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:98/2021 ಕಲಂ: 379 IPC.

                     ಟಿಪ್ಪರ ಗಾಡಿ  ನಂ: ಕೆಎ-27/ಸಿ-1533 ನೇದ್ದರ ಚಾಲಕ ಮತ್ತು ಮಾಲಿಕರು ಯಾವುದೆ ಪಾಸ್ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ಟಿಪ್ಪರದಲ್ಲಿ  ಸುಮಾರು 3 ಕ್ಯೂಬಿಕ ಮೀಟರ ಮರಳು ಅಕಿ 2700 ರೂ/- ನೇದ್ದನ್ನು ಲೋಡ ಮಾಡಿಕೊಂಡು ದಿನಾಂಕ 26-08-2021 ರಂದು ಮದ್ಯಾಹ್ನ 12-30 ಗಂಟೆಗೆ ಯಲಗಚ್ಚ ಗ್ರಾಮದಲ್ಲಿ  ರಸ್ತೆ ಮೇಲೆ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಅದರ ಚಾಲಕನು ಓಡಿ ಹೋಗಿದ್ದು. ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:104/2021 ಕಲಂ: 498A,323,313,504,506,149 IPC.

                     ಮಹೇಶಕುಮಾರ ಪಕ್ಕಿರಪ್ಪ ಪುಜಾರ ಸಾ|| ಹರಿಹರ ಇವರೊಂದಿಗೆ ರೋಜಾ ಇವರನ್ನು ಸಂಪ್ರದಾಯದ ಪ್ರಕಾರ ದಿನಾಂಕ: 01/11/2019 ರಂದು ಹರಿಹರ ಭಗೀರಥ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿ ಕೊಟ್ಟಿದ್ದು, ನಂತರ ರೋಜಾ ತನ್ನ ಗಂಡನ ಮನೆಗೆ ಬಾಳ್ವೇಗೆ ಹೋದ ನಂತರ 3-4 ತಿಂಗಳು ಮಾತ್ರ ಚೆನ್ನಾಗಿದ್ದು, ನಂತರ ಗಂಡನು ಒಬ್ಬ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದು ಅದನ್ನು ಕೇಳಿದ್ದಕ್ಕೆ ಮಹೇಶಕುಮಾರ ಅವಳನ್ನು ಇಟ್ಟುಕೊಂಡಿದ್ದೇನೆ ಅವಳನ್ನು ಸಾಯುವ ವರೆಗೆ ಬಿಡುವದಿಲ್ಲ ಅಂತಾ ಹೇಳಿ ರೋಜಾ ಇವಳಿಗೆ ಹೊಡಿ ಬಡಿ ಮಾಡಿದ್ದು, ಹಾಗೂ ಮಹೇಶಕುಮಾರ ಇವರ ಮನೆಯವರು ರೋಜಾಳಿಗೆ ಅವನು ಗಂಡಸು ಇನ್ನೊಂದು ಮದುವೆ ಮಾಡಿಕೊಳ್ಳುತ್ತಾನೆ ಅದನ್ನೇನು ಕೇಳುತಿ ಅಂತಾ ತಂಟೆ ತಗೆದು ಹೊಡಿ ಬಡಿ ಮಾಡಿ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದು, ನಂತರ ರೋಜಾ ಎರಡು ತಿಂಗಳ ಗರ್ಭವತಿಯಾದಾಗ ಮಹೇಶ ಕುಮಾರ ಹಾಗೂ ಅವರ ಮನೆಯವರು ಕೂಡಿಕೊಂಡು ನಿನಗೆ ಈಗಲೇ ಮಕ್ಕಳು ಬೇಡ, ಅದನ್ನು ತಗೆಸು ಅಂತಾ ಒತ್ತಾಯಪೂರ್ವಕವಾಗಿ ಪಪ್ಪಾಯಿ, ಗುಳಿಗೆಗಳನ್ನು ಕೊಟ್ಟು ಗರ್ಭಪಾತ ಮಾಡಿಸಿದ್ದು, ನಂತರ ಇತ್ತೀಚಿಗೆ 6 ತಿಂಗಳ ಹಿಂದೆ ರೋಜಾಳು ಮೂಲವ್ಯಾದಿ ಆಪರೇಶನ್ ಆಗಿದ್ದರಿಂದ ಅವಳು ತನ್ನ ತವರು ಮನೆಯಲ್ಲಿಯೇ ಇದ್ದು, ಈ ಕಾಲಕ್ಕೆ ದಿನಾಂಕ: 27/02/2021 ರಂದು 15-00 ಗಂಟೆಗೆ ಮಹೇಶಕುಮಾರ ರಟ್ಟೀಹಳ್ಳಿಯ ರೋಜಾಳ ತಂದೆಯ ಮನೆಗೆ ಬಂದು ರೋಜಾಳಿಗೆ ಲೇ ಹಾದರಗಿತ್ತಿ, ಮಿಂಡ್ರಿ, ನಿಮ್ಮಪ್ಪಂದು ಎಷ್ಟು ನಾನು ನೋಡಿಕೊಳ್ಳುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ, ರೋಜಾಳಿಗೆ ಎಳೆದುಕೊಂಡು ಬಂದು ಕೈಯಿಂಡ ಹೊಡಿ ಬಡಿ ಮಾಡಿ ಮಾನಸಿಕ ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದು ಅಲ್ಲದೇ ಜೀವದ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:137/2021 ಕಲಂ: 279,337,338,304A IPC.

                     ದರ್ಶನ ಶಿದ್ದಪ್ಪ ಮಲಗುಂದರ ಸಾ|| ಅಗಸನಹಳ್ಳಿ ಮತ್ತು ಕಾರ್ತಿಕ ಜಗದೀಶಪ್ಪ ಮಲಗುಂದರ ವಯಾ: 20 ಸಾ|| ಅಗಸನಹಳ್ಳಿ  ಕೂಡಿಕೊಂಡು ಮೋಟಾರ್ ಸೈಕಲ್ ನಂಬರ್ ಕೆ.ಎ-15 ಇ.ಡಿ-6035 ನೇದನ್ನು ತೆಗೆದುಕೊಂಡು ಹಾವೇರಿಯಿಂದ ಅಗಸನಹಳ್ಳಿ ಗ್ರಾಮಕ್ಕೆ ಅಂತಾ ದಿನಾಂಕ: 25-08-2021 ರಂದು ಸಂಜೆ 19-30 ಘಂಟೆ ಸುಮಾರಿಗೆ ಕುಸನೂರ-ತಿಳುವಳ್ಳಿ ರಸ್ತೆ ಬ್ಯಾತನಾಳ ಗ್ರಾಮದ ಭೂತೇಶ್ವರ ದೇವಸ್ಥಾನದ ಹತ್ತೀರ ರಸ್ತೆಯ ಮೇಲೆ ತಿಳುವಳ್ಳಿ ಗ್ರಾಮದ ಕಡೆಗೆ ಹೋಗುತ್ತೀರುವಾಗ ಕಾರ್ತಿಕ ತಾನು ಚಲಾಯಿಸುತ್ತಿದ್ದ ಮೊಟಾರ್ ಸೈಕಲನ್ನು ರಸ್ತೆಯ ಮದ್ಯದಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ತಿಳುವಳ್ಳಿ ಕಡೆಯಿಂದ ಬಂದತಂತ ಮೋಟಾರ್ ಸೈಕಲ್ ನಂಬರ್ ಕೆ.ಎ-20 ಜೆ-3450 ನೇದರ ಸವಾರ ಸುರೇಶ ತಂದೆ ಗಣೇಶಪ್ಪ ನರೆಗಲ್ ಸಾ.ಮಲಗುಂದ ತಾ.ಹಾನಗಲ್ಲ ಇವನು ಸಹಿತ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ರಸ್ತೆಯ ಮದ್ಯದಲ್ಲಿ ಚಲಾಯಿಸಿಕೊಂಡು ಬಂದಾಗ ಇಬ್ಬರು ಸಹಿತ ತಾವು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತಿ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ತಮ್ಮ ಮೋಟಾರ್ ಸೈಕಲ್ ಸಮೇತ ಮುಖಾ ಮುಕಿಯಾಗಿ ಡಿಕ್ಕಿಪಡಿಸಿಕೊಂಡು ಇಬ್ಬರು ಸಹಿತ ತಲೆಗೆ ಬಲವಾದ ಘಾಯ ನೋವು ಆಗುವಂತೆ ಮಾಡಿಕೊಂಡಿದ್ದು ಅಲ್ಲದೆ ದರ್ಶನ ಇವನಿಗೆ ಮೈ ಕೈ ಮೇಲೆ ಸಣ್ಣ ಪುಟ್ಟ ಘಾಯ ನೋವು ಆಗುವಂತೆ ಮಾಡಿದ್ದು ಚಿಕೀತ್ಸೆಗಾಗಿ ಕಾರ್ತಿಕ ಇವನಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕೀತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕೀತ್ಸೆ ಪಲಕಾರಿಯಾಗದೆ ದಿನಾಂಕ : 25-08-2021 ರಂದು 22-30 ಘಂಟೆ ಸುಮಾರಿಗೆ ಕಾರ್ತಿಕ ಇವನು ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:148/2021 ಕಲಂ: 380,457 IPC .

               ದಿನಾಂಕಃ 26-08-2021 ರಂದು ಬೆಳಗಿನ 01-00 ಗಂಟೆ ಸುಮಾರಿಗೆ ಶಿವನಂದಪ್ಪ ನಿಂಗಪ್ಪ ಹೆಂಡಸಗೇರಿ ಸಾ|| ಹನಮಾಪುರ ಇವರ ಮನೆಯ ಪಕ್ಕದಲ್ಲಿರುವ ದನದ ಮನೆಯಲ್ಲಿದ್ದ 2 ಕುರಿಗಳನ್ನು ಅಂದಾಜ ಕಿಮ್ಮತ್ತು 40000/- ರೂ ಕಿಮ್ಮತ್ತಿನದನ್ನು ಲಕ್ಷ್ಮನ್‌ ರಾಮಪ್ಪ ಕಳಗೊಂಡ ಸಾ|| ಅರಬಗೊಂಡ ಹಾಗೂ ಇತನ 04 ಜನ ಸಹಚರರು ಸೇರಿಕೊಂಡು ಕಳ್ಳತನ ಮಾಡಿಕೊಂಡು ಹೋಗಿ ಹಾವೇರಿ ದನದ ಮಾರ್ಕೇಟದಲ್ಲಿ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ .

               ದುರಗಪ್ಪ ಮರಿಯಪ್ಪ ಹರಿಜನ ವಯಾ 74 ವರ್ಷ ಸಾಃ ಚಪ್ಪರದಹಳ್ಳಿ ಇವನಿಗೆ ಈಗ ಎರಡು ಮೂರು ವರ್ಷಗಳಿಂದ ತಲೆ ಚಕ್ರ ಎದೆ. ಮಂಡಿ ನೋವು ಬರುತ್ತಿದ್ದು ಈ ಬಗ್ಗೆ ರಟ್ಟಿಹಳ್ಳಿ. ದಾವಣಗೇರಿ ಚಿಟಗೇರಿ ಆಸ್ಪತ್ರೆಯಲ್ಲಿ ತೋರಿಸುತ್ತಾ ಬಂದಿದ್ದು ಅದರೂ ಕೂಡ ನೋವು ಕಡಿಮೆ ಆಗದ್ದರಿಂದ ಮೃತನು ಅದನ್ನೆ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೆ ದಿನಾಂಕ 26-08-2021 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಚಪ್ಪರದಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದವನಿಗೆ ಕೂಡಲೆ ರಟ್ಟಿಹಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮೋಪಚಾರ ಕೊಡಿಸಿ ಅಲ್ಲಿಂದ ಹೇಚ್ಚಿನ ಉಪಚಾರಕ್ಕೆ ಅಂಬುಲೆನ್ಸ ಮೂಲಕ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ ಮಾಡಿ ಉಪಚಾರ ಕೊಡಿಸುವಾಗ ಉಪಚಾರ ಫಲಿಸದೆ ಮರಣ ಹೊಂದಿರುತ್ತಾನೆ ವಿನಃ ಅವರ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲ ಅಂತಾ ಬರಮವ್ವ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 03-09-2021 01:47 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ