ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:03/2021 ಮಹಿಳೆ ಸಾವು.

            ಸುಮಾರು 45 ರಿಂದ 50 ವರ್ಷ ವಯಸ್ಸಿನ ಅನಾಮಧೇಯ ಹೆಂಗಸು ದಿನಾಂಕ:26/06/2021 ರಂದು ಸಂಜೆ 16-30 ಗಂಟೆಯಿಂದ 18-30 ಗಂಟೆಯ ನಡುವಿನ ಅವಧಿಯಲ್ಲಿ  ಕೋಡಿಯಾಲ ಹೊಸಪೇಟೆ ತುಂಗಭದ್ರಾ ನದಿಯಲ್ಲಿ ತನ್ನಷ್ಟಕ್ಕೆ ತಾನೇ ಬಟ್ಟೆ ತೋಳೆಯಲು ಅಥವಾ ನದಿಯಲ್ಲಿ ಸ್ನಾನ ಮಾಡಲು ಅಂತಾ ತುಂಗಭದ್ರಾ ನದಿಯಲ್ಲಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದು ಉಸುರುಗಟ್ಟಿ ಮೃತಪಟ್ಟು ನೀರಿನ ಸೆಳವಿಗೆ ಸಿಲುಕಿ ತುಂಗಭದ್ರಾ ನದಿಯ ನೀರಲ್ಲಿ ತೇಲುತ್ತಾ ಬಂದು ಕೋಡಿಯಾಲ ಹೋಸಪೆಟೆ ಗ್ರಾಮದ ತುಂಗಭದ್ರ  ಸೇತುವೆಯ ಕೆಳಬಾಗದ ನೀರಿನಲ್ಲಿ ಮೃತಳ ಶವವನ್ನು ನೋಡಿದಾಗ ಮೇಲ್ನೋಟಕ್ಕೆ ಕಂಡು ಬರುತ್ತದೆ. ಸದರಿ ಮೃತಳ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ. ಸದರಿಯವಳ ಮೈಮೇಲೆ ಕಪ್ಪು ಬಣ್ಣದ ಲಂಗ ಮಾತ್ರ  ಇರುತ್ತದೆ ಮೃತಳು ಸುಮಾರು 05 ಫೂಟು  ಎತ್ತರ ಇದ್ದು, ದುಂಡು ಮುಖ, ಗೋದಿ ಗೆಂಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ ಸುಮಾರು 10 ರಿಂದ 12 ಇಂಚು ಕಪ್ಪು ಕೂದಲು ಇದ್ದು, ಕಿವಿಯಲ್ಲಿ ಪಾಸಿಯ ನಮೂನೆಯ ಬಿಳಿ ಹರಳಿನ ಬೆಂಡವಾಲೆ, ಎರಡು ಕೈ ಯಲ್ಲಿ ಪಾಸಿಯ ನಮೂನೆಯ  ಬಳೆ ಇದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ನಾಗರಾಜ ತಂದೆ ಕನ್ನಪ್ಪ ಬಸಕ್ಕನವರ @ ತಳವಾರ ವಯಸ್ಸು: 28 ವರ್ಷ ಜಾತಿ: ಹಿಂದೂ ವಾಲ್ಮಿಕಿ ಉದ್ಯೋಗ: ಒಕ್ಕಲುತನ ಸಾ: ನಿಟ್ಟೂರು ತಾ:ರಾಣೇಬೆನ್ನೂರ ಇವನು ನಮ್ಮ  ಜಮೀನ    ಸಾಗುವಳಿ ಸಂಬಂದ ಮತ್ತು ಮನೆತನದ ಸಂಬಂದ 1) ಕುಪ್ಪೆಲೂರ ಕೆ ವಿ ಜಿ ಬ್ಯಾಂಕಿನಲ್ಲಿ 1.30.000/- ರೂ 2)ಚನ್ನೇಶ್ವರ ಬ್ಯಾಂಕ ರಾಣೇಬೆನ್ನೂರ ದಲ್ಲಿ 2.00000/- ರೂಪಾಯಿ 3)ಏಕಲವ್ಯ ಬ್ಯಾಂಕ ರಾಣೇಬೆನ್ನೂರದಲ್ಲಿ 20.000/-ರೂಪಾಯಿ ಸಾಲ ಮತ್ತು ನಾಗರಾಜ ಇವನು ತನ್ನ ಹೆಸರಿನಲ್ಲಿ 4)ಧರ್ಮಸ್ಥಳ ಸಂಘದಲ್ಲಿ 2.25.000/-ರೂಪಾಯಿ 5) ಪೀಡ್ ಬ್ಯಾಂಕ ರಾಣೇಬೆನ್ನೂರ ದಲ್ಲಿ ಬಂಗಾರದ ಸಾಲವನ್ನು 5000/-  ರೂಪಾಯಿ  ಒಟ್ಟು 5.80.000/- ರೂಪಾಯಿ ಸಾಲ ಮಾಡಿದ್ದು. ಈಗ ಸುಮಾರು 3-4 ವರ್ಷಗಳಿಂದ ಮಳೆಯು ಅತೀ ವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾವು ಬೆಳೆದ ಬೆಳೆಯು ಸರಿಯಾಗಿ ಬಾರದೆ ಲುಕ್ಷಾಣು ಆಗಿದ್ದು ಮತ್ತು ಈ ವರ್ಷ ನಮ್ಮ ಜಮೀನದಲ್ಲಿ ಬಿತ್ತಿದ ಗೋವಿನ ಜೋಳವು ಸಹ ಸರಿಯಾಗಿ ಹುಟ್ಟದೆ ಇರುವದರಿಂದ  ಮತ್ತು ನಾವು ಬೆಳೆದ ತರಕಾರಿಯು ಸಹ  ಲಾಕಡೌನ್ ಇರುವದರಿಂದ ಲುಕ್ಷಾಣು ಆಗಿದ್ದರಿಂದ  ನನ್ನ ಮಗ ನಾಗರಾಜನು ನಾನು ಮಾಡಿದ ಸಾಲವನ್ನು ತೀರಿಸಲು ಆಗುವದಿಲ್ಲ ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ದಿನಾಂಕ: 25-06-2021 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನಮ್ಮ ಜಮೀನದಲ್ಲಿ ಬೆಳೆಗಳಿಗೆ ಹೊಡೆಯುವ ಯಾವುದೋ ವಿಷಕಾರಕ ಎಣ್ಣಿ ಕುಡಿದು ಉಪಚಾರಕ್ಕೆ ರಾಣೇಬೆನ್ನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಉಪಚಾರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ರಾಣೇಬೆನ್ನೂರ ಸರಕಾರಿ ಆಸ್ಪತ್ರೆಯ ಗೇಟ್ ಹತ್ತಿರ ದಿನಾಂಕ: 25-06-2021 ರಂದು  ರಾತ್ರಿ 8-30  ಗಂಟೆ ಸುಮಾರಿಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 04-07-2021 11:17 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080