ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 30/2021 ಮಹಿಳೆ ಕಾಣೆ.

               ತೇಜಾ ತಂದೆ ಮಲ್ಲಿಕಾರ್ಜುನ್ ವಾಸನದ, ವಯಾ: 21 ವರ್ಷ 2 ತಿಂಗಳು ಇವಳು ದಿನಾಂಕ : 25-04-2021 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಊಟ ಮಾಡಿ ತನ್ನ ತಂಗಿಯ ಜೊತೆ ಮಲಗಿದ್ದವಳು ದಿನಾಂಕ: 26-04-2021 ರಂದು ಬೆಳಗಿನ ಜಾವ 4-30 ಗಂಟೆ ಸುಮಾರಿಗೆ ಮಲಗಿದ್ದವಳು ಎಲ್ಲಿಯೊ ಕಾಣೆಯಾಗಿ ಹೋದ ಬಗ್ಗೆ ಖಾತ್ರಿಯಾಗಿದ್ದರಿಂದ, ಕಾಣೆಯಾದ ತೇಜಾ ಇವಳನ್ನು ಹುಡಿಕಿಕೊಡಬೇಕು ಅಂತಾ ಬಸವರಾಜ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 40/2021 ಕಲಂ: 379 IPC.

          ಸತೀಶ ಲಕ್ಷ್ಮನ ಬಜಂತ್ರಿ ಸಾ|| ಹಾವೇರಿ ಇವರ 2018 ರ ಮಾಡೆಲ್ನ BAJAJ DISCOVER 125 ಕಂಪನಿಯ ಕಪ್ಪು ಬಣ್ಣದ  ಮೋಟರ್ ಸೈಕಲ್ಲ ನಂಬರ KA-27/EM3880 ಚೆಸ್ಸಿ ನಂ- MD2B44BY6JWM08227 ಮತ್ತು ಇಂಜೆನ್ ನಂಬರ JZYWJM09381 ಅಃಕಿಃ 50,000/- ರೂ ನೇದ್ದನ್ನು ನಮ್ಮ ಮನೆಯ ಕಂಪೌಂಡ್ ಒಳಗೆ ಹ್ಯಾಂಡ್‍ ಲಾಕ್‍ ಮಾಡಿ ಇಟ್ಟಿದ್ದನ್ನು ದಿನಾಂಕ: 14-04-2021 ರ ರಾತ್ರಿ 10-00 ಘಂಟೆಯಿಂದ ದಿ: 15-04-2021 ರಂದು ಬೆಳಗಿನ 7-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅದರ ಹ್ಯಾಂಡ್‍ ಲಾಕನ್ನು ಮುರಿದು ಕಳ್ಳತನ ಮಾಡಿಕೊಂಡು  ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 54/2021 ಕಲಂ: 379 IPC.

           ದಿನಾಂಕ:26-04-2021 ರಂದು ಬೆಳಗಿನ ಜಾವ 2-00 ಗಂಟೆ ಸುಮಾರಿಗೆ ಆಲದಕಟ್ಟಿ ಕ್ರಾಸ್ ಹತ್ತಿರ  JOHN DEERE ಕಂಪನಿಯ ಟ್ರ್ಯಾಕ್ಟರ್ ನಂ: KA-27/TV-8784 ಇದರ Engine No: PY39D408147 ಇದರ Chassis No:1PY5042DHGA014109 ನೇದ್ದರ ಟ್ರೈಲರ್ Chassis No 200 ನೇದ್ದರಲ್ಲಿ ಅದರ ಚಾಲಕ ಮತ್ತು ಮಾಲಕನು ಅಕ್ರಮವಾಗಿ ನೈಸರ್ಗಿಕ ಸ್ವತ್ತಾದ ಸುಮಾರು 1800/-ರೂ. ಮೊತ್ತದ 2 ಕ್ಯೂಬಿಕ್ ಮೀಟರ್ ಮರಳನ್ನು ಕೊಟಿಹಾಳ ಗ್ರಾಮದ ಹತ್ತಿರವಿರುವ ತುಂಗಭದ್ರಾ ನದಿಯಲ್ಲಿ ಕಳ್ಳತನ ಮಾಡಿಕೊಂಡು ಯಾವುದೆ ಪಾಸ ವ  ಪರ್ಮಿಟ್ ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 78/2021 ಕಲಂ: 380,454,457 IPC.

           ದಿನಾಂಕ; 25-04-2021 ರಂದು ಸಾಯಂಕಾಲ 07-30 ಘಂಟೆಯಿಂದ ದಿನಾಂಕ; 26-04-2021 ರಂದು ಬೆಳಿಗ್ಗೆ 08-00 ಘಂಟೆಯ ನಡುವಿನ ಅವಧಿಯಲ್ಲಿ ಶಿವಾನಂದಪ್ಪ ಬೀಮಪ್ಪಕಲ್ಲೆರ ಸಾ|| ಹಾನಗಲ್ಲ ಇವರ ಮನೆಯ ಬಾಗಿಲಿಗೆ ಹಾಕಿದ್ದ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ಕೊಂಡಿಯನ್ನು ಮುರಿದು ಬಾಗಿಲನ್ನು ತೆರೆದು ಮನೆಯ ಒಳಗಡೆ ಬಂದು ಮನೆಯ ಒಳಗಡೆ ಇಟ್ಟಿದ್ದ 1) 35 ಬಾಕ್ಸ ಕಾರ್ ಪಾರ್ಕಿಂಗ ಟೈಲ್ಸ ಅ;ಕಿ; 17,500/- ರೂಗಳು, 2) 50 ಬಾಕ್ಸ ಪ್ಯಾಸೇಜ ಪ್ಲೋರಿಂಗ್ ಟೈಲ್ಸ ಅ;ಕಿ; 15,000/- ರೂಗಳು, 3) 05 ಫೈಬರ್ ಬಾಗಿಲುಗಳು ಅ;ಕಿ; 12,500/- ರೂಗಳು, 4) 06 ಸಾಗವಾನಿ ಕಟ್ಟಿಗೆಯ ಕಿಡಕಿಗಳು ಅ;ಕಿ; 24,000/- ರೂಗಳು, 5) 03 ಸೆಟ್ ವಾಶ್ ಬೇಸಿನ್ ಸೆಟಗಳು ಅ;ಕಿ; 15,000/- ರೂಗಳು ಹಾಗೂ 6) 03 ಟೈಲ್ಸ ಕಟ್ ಮಾಡುವ ಮಷೀನಗಳು ಅ;ಕಿ; 18,000/- ರೂಗಳು ಹೀಗೇ ಒಟ್ಟು 1,02,000/- ರೂಗಳು ಕಿಮ್ಮತ್ತಿನ ಮನೆಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಸಂಖ್ಯೆ: 11/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಪ್ರಕಾಶ ರಾಮಪ್ಪ ಸರವಾರಿ ವಯಾ: 26 ಸಾ|| ಗಂಜಿಗಟ್ಟಿ ಇತನಿಗೆ ಈಗ  ಸುಮಾರು ಎರಡು ವರ್ಷಗಳಿಂದ ಮೈಯಲ್ಲಿ ಹುಷಾರು ಇರಲಿಲ್ಲ ಶಿಗ್ಗಾವಿ  ಸರ್ಕಾರಿ ಆಸ್ಪತ್ರೆಗೆ ತೋರಿಸಿ ಉಪಚಾರ ಮಾಡಿಸಿದ್ದು ಹಾಗೂ ಹಿರೆಮಲ್ಲೂರ ಮೈಲಾರಲಿಂಗ ದೇವಸ್ಥಾನಕ್ಕೆ ಅಲ್ಲದೆ ನೆಗಳೂರ ದರ್ಗಾಕ್ಕೆ ಕರೆದುಕೊಂಡು ಹೋಗಿ ದೇವರರಿಗೆ ಸಹ ನಡೆದುಕೊಂಡಿದ್ದು ಇದ್ದು ಈಗ 2-3 ದಿನಗಳಿಂದ ಅವನ ಮೈಯಲ್ಲಿ ಗಾದರಿ(ಗುಳ್ಳೆ) ಎದ್ದು ಮೈತಿಂಡಿ ಬಿಟ್ಟಿದ್ದು ಎಷ್ಟು ತೋರಿಸಿದರು ಆರಾಮ ಆಗಿರಲಿಲ್ಲ ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಸ್ಟಕ್ಕೆ ತಾನೆ  ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿ ಗಂಜಿಗಟ್ಟಿ ಗ್ರಾಮದ ಹದ್ದಿ ಪೈಕಿ ಗುಂಜಳ  ಎಂಬುವರ ಜಮೀನದಲ್ಲಿ ಇದ್ದ ಬೇವಿನ ಮರಕ್ಕೆ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ನನ್ನ ಮಗನ ಮರಣದಲ್ಲಿ ಯಾವುದೇ ಸಂಶಯವಿರುವದಿಲ್ಲ ಅಂತಾ ರಾಮಪ್ಪ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 28-04-2021 06:14 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ