ಅಭಿಪ್ರಾಯ / ಸಲಹೆಗಳು

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                     ದುರಗಪ್ಪ ಮರಿಯಪ್ಪ ಹರಿಜನ ವಯಾ 74 ವರ್ಷ ಸಾಃ ಚಪ್ಪರದಹಳ್ಳಿ ಇವನಿಗೆ ಈಗ ಎರಡು ಮೂರು ವರ್ಷಗಳಿಂದ ತಲೆ ಚಕ್ರ ಎದೆ. ಮಂಡಿ ನೋವು ಬರುತ್ತಿದ್ದು ಈ ಬಗ್ಗೆ ರಟ್ಟಿಹಳ್ಳಿ. ದಾವಣಗೇರಿ ಚಿಟಗೇರಿ ಆಸ್ಪತ್ರೆಯಲ್ಲಿ ತೋರಿಸುತ್ತಾ ಬಂದಿದ್ದು ಅದರೂ ಕೂಡ ನೋವು ಕಡಿಮೆ ಆಗದ್ದರಿಂದ ಅದನ್ನೆ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೆ ದಿನಾಂಕ 26-08-2021 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಚಪ್ಪರದಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದವನಿಗೆ ಕೂಡಲೆ ರಟ್ಟಿಹಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮೋಪಚಾರ ಕೊಡಿಸಿ ಅಲ್ಲಿಂದ ಹೇಚ್ಚಿನ ಉಪಚಾರಕ್ಕೆ ಅಂಬುಲೆನ್ಸ ಮೂಲಕ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ ಮಾಡಿ ಉಪಚಾರ ಕೊಡಿಸುವಾಗ ಉಪಚಾರ ಫಲಿಸದೆ ಮರಣ ಹೊಂದಿರುತ್ತಾನೆ ವಿನಃ ಅವರ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಬರಮವ್ವ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ .

                     ಲಕ್ಷ್ಮಣ ಬುದ್ದಿವಂತಪ್ಪ ಹಳ್ಳಿ ವಯಾ: 70 ಸಾ|| ಅತ್ತಿಗೇರಿ, ಕಳೇದ ವರ್ಷ ಅತೀಯಾದ ಮಳೆಯಿಂದ ಮನೆ ಬಿದ್ದಿದ್ದು ಇದರಿಂದ ಚಪ್ಪೆ ಗಾಯವಾಗಿ ಕೂಂಕುರದಲ್ಲಿ ಚಿಕಿತ್ಸೆ ಪಡೆದಿದ್ದರೂ ಸಹ ಗುಣ ಮುಖವಾಗಿರಲಿಲ್ಲಾ ಮತ್ತು ಮನೆ ಬಿದ್ದಿದ್ದನ್ನು ತನ್ನ ಮನಸ್ಸಿಗೆ ಹಚ್ಚಿಕೊಂಡು ಕೊರುಗುತ್ತಾ ಬಂದಿದ್ದು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ : 25-08-2021 ರಂದು ರಾತ್ರಿ 20.30 ಗಂಟೆಯಿಂದ ದಿನಾಂಕ : 26-08-2021 ರಂದು ಮುಂಜಾನೆ 06.30 ಗಂಟೆ ನಡುವಿನ ಅವದಿಯಲ್ಲಿ ತನ್ನಷ್ಟಕ್ಕೆ ತಾನೆ ವಾಸದ ಮನೆಯ ಕಟ್ಟೆಯ ಮೇಲೆ ಉರುಲು ಹಾಕಿಕೊಂಡು ಮರಣ ಹೊಂದಿದ್ದು ವಿನ: ಅವನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಮುಂದಿನ ಕ್ರಮ ಜರುಗಿಸಬೇಕು ಅಂತಾ ಮೃತನ ಹೆಂಡತಿ ಮಾಳವ್ವಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣಿಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:24/2021 ವ್ಯಕ್ತಿ ಸಾವು .

                     ಹನುಮಂತ ತಂದೆ ಕರಬಸಪ್ಪ ನಿಟ್ಟೂರು ವಯಾ 33 ವರ್ಷ ಇವನು ದಿನಾಂಕಃ26-08-2021 ರಂದು 17-30 ಗಂಟೆ ಸುಮಾರಿಗೆ ತನ್ನ ಹೊಲದಲ್ಲಿ ವಿದ್ಯತ್ ಕಂಬದ ಹತ್ತಿರ ಕುರಿ ಮರಿ ಬಿದ್ದು ಒದ್ದಾಡುತ್ತಿದ್ದನ್ನು ನೋಡಿ ಅದನ್ನು ಎತ್ತಲು ಹೋದಾಗ ಬೋರ್ ವೆಲ್ ಗೆ ಹಾಕಿದ ಮೇಲ್ ಲೈನ್ ದಿಂದ ಸರ್ವಿಸ್ ವಾಯರ್ ಕಟ್ಟಾಗಿ ನೆಲಕ್ಕೆ ಬಿದ್ದು ಮಳೆ ಬಂದು ಹಸಿಯಾಗಿ ತೇವವಾಗಿದ್ದರಿಂದ ಅರ್ಥಿಂಗ ಆಗಿ ಕಾಲಿಗೆ ಆಕಸ್ಮಿಕವಾಗಿ ವಾಯರ್ ತಾಗಿ ಕರೆಂಟ್ ಹೊಡೆದು ಮೃತ ಪಟ್ಟಿದ್ದು ಇರುತ್ತದೆ ಅವರ ಸಾವಿನಲ್ಲಿ ಬೇರೆನು ಸಂಶಯ ವಗೈರೆ ಇರುವುದಿಲ್ಲ ಅಂತಾ ಮಹೇಶ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:32/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                     ನಾಗಪ್ಪ ತಂದೆ ದ್ಯಾಮಣ್ಣ ಕುಲಕರ್ಣಿ ವಯಸ್ಸು: 32 ವರ್ಷ, ಜ್ಯಾತಿ, ಹಿಂದೂ ಲಿಂಗಾಯತ ಉದ್ಯೋಗ: ಮನೆ ಕೆಲಸ ಸಾ, ಕೊಣನತಂಬಿಗಿ  ಇವನು ಈಗ ಕಳೆದ 4 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಅದಕ್ಕೆ ಸಂಬಂಧಿಸದಂತೆ ಧಾರವಾಡ ಆಸ್ಪತ್ರೆಯಲ್ಲಿ ತೋರಿಸಿದರೂ ಸಹ ಗುಣವಾಗದೆ ಇದ್ದುದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಯಾರ ಮಾತಿಗೂ ಬೆಲೆ ಕೊಡದೆ ಸರಾಯಿ ಕುಡಿದು ಊರಲ್ಲಿ ತಿರುಗಾಡುತ್ತಾ ಇದ್ದು ದಿನಾಂಕಃ 22-08-2021 ರಂದು ತನ್ನ ಅಕ್ಕನ ಊರಾದ ಕರ್ಜಗಿ ಗ್ರಾಮಕಕ್ಕೆ ಹೋಗಿ ಅಲ್ಲಿಂದ ಯಾಯಿಗೂ ಹೇಳದೆ ಕೇಳದೆ ದಿನಾಂಕಃ 23-08-2021 ರಂದು ಬೆಳ್ಗಿನ ಜಾವ 5-00 ಗಂಟೆ ಸುಮಾರಿಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೆ ಕುಡಿದ ನಿಷೆಯಲ್ಲಿ ತನ್ನಷ್ಟಕ್ಕೆ ತಾನೇ ದಿನಾಂಕ: 23-08-2021 ರಂದು ಬೆಳಗಿನ ಜಾವ 5-00 ಘಂಟೆ ನಂತರ ದಿನಾಂಕಃ 26-08-2021 ರ ಮದ್ಯಾಹ್ನ 3-00 ಘಂಟೆ ನಡುವಿನ ಅವದಿಯಲ್ಲಿ ಕೊಣನತಂಬಿಗಿ ಗ್ರಾಮದ ವರದಾ ಹೊಳೆಯ ನೀರಿನಲ್ಲಿ ಮುಳಗಿ ಮರಣ  ಹೊಂದಿದ್ದು ಇತನ ಸಾವಿನಲ್ಲಿ ಯಾರ ಮೇಲೂ ಸಂಶಯವಿರುವದಿಲ್ಲ ಅಂತಾ ಮೃತನ ತಾಯಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 03-09-2021 01:45 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ