ಅಭಿಪ್ರಾಯ / ಸಲಹೆಗಳು

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 94/2021 ಮಹಿಳೆ ಕಾಣೆ.

               ಶ್ರೀಮತಿ ಹಾಲಮ್ಮ ಕೊಂ ಚನ್ನಬಸಪ್ಪ ಹಿತ್ತಲಮನಿ, ವಯಸ್ಸು- 30 ವರ್ಷ, ಜಾತಿ-ಹಿಂದೂ ಲಿಂಗವಂತ, ಉದ್ಯೋಗ- ಹೊಲಮನಿ ಕೆಲಸ, ಸಾಃ ಪುರ್ತಗೇರಿ, ತಾ: ರಟ್ಟಿಹಳ್ಳಿ. ಇವಳು ದಿನಾಂಕ: 13/07/2021 ರಂದು ಹೊನ್ನಾಳ್ಳಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಅಂತಾ ಮುಂಜಾನೆ 11-30 ಗಂಟೆ ಸುಮಾರಕ್ಕೆ ಹಳ್ಳೂರ ಗ್ರಾಮದ ಬಸ್ಟ್ಯಾಂಡದಿಂದ ಬಸ್ಸಿನಲ್ಲಿ ಹತ್ತಿ ಹೋದವಳು ವಾಪಾಸ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಚನ್ನಬಸಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಸಂಚಾರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 28/2021 ಕಲಂ: 279,338,304(A) IPC.

               ದಿನಾಂಕ: 21/07/2021 ರಂದು 17-40 ಗಂಟೆಯ ಸುಮಾರಿಗೆ ಗಣೆಶಪ್ಪ ಶಿವಪ್ಪಹರಿಹರ ಸಾ||  ರಾಣೆಬೇನ್ನೂರ ಇವರು ತನ್ನ ಬಾಬತ್ ಟಿ ವಿ ಎಸ್ ಎಕ್ಸೆಲ್  ಮೋಟಾರ ಸೈಕಲ್ ನಂ; ಕೆಎ-68ಹೆಚ್-4233 ನೆದ್ದರ ಹಿಂದಿನ ಶೀಟಿನಲ್ಲಿ ತನ್ನ ಹೆಂಡತಿಯಾದ ಸಾವಿತ್ರಮ್ಮ ಕೋಂ ಗಣೇಶಪ್ಪ ಹರಿಹರ ವಯಾ:59 ಇವರಿಗೆ ಕೂಡ್ರಿಸಿಕೊಂಡು ರಾಣೆಬೆನ್ನೂರ ಸಂಗಮ್ ಸರ್ಕಲ್ ದಿಂದ ದೊಡ್ಡಪೇಟೆ ಕಡೆಗೆ  ಅತೀ ಜೋರಿನಿಂದ , ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನೇ ಮೋಹನ್ ಲಾಲ್ ಸಂಗವಿ ಇವರ ಕಾಂಪ್ಲೆಕ್ಸ್ ಎದುರಿನ ರಾಣೇಬೆನ್ನೂರಿನ ಸಂಗಮ್ ಸರ್ಕಲ್ - ದೊಟ್ಟಪೇಟೆ ರಸ್ತೆ ಮೇಲೆ ಹೋಗುತ್ತಿದ್ದ ಯಾವುದೋ ಒಂದು ಹಂದಿ ಅಡ್ಡ ಬಂದಿದ್ದರಿಂದ ಅದಕ್ಕೆ ತಾಕುತ್ತದೆ ಅಂತಾ ತಿಳಿದು ಎಡಗಡೆ ಸೈಡಿಗೆ ತೆಗೆದುಕೊಂಡಾಗ ಗಾಡಿ ಸ್ಕಿಡ್ಡ್ ಮಾಡಿ ಕೊಂಡು ಅಪಘಾತಪಡಿಸಿದಾಗ ಹಿಂದೆ ಕುಳಿತ ಸಾವಿತ್ರಮ್ಮ  ಇವರಿಗೆ ನೆಲಕ್ಕೆ ಕೆಡವಿ ಅವರ ತಲೆ  ಹಿಂಭಾಗಕ್ಕೆ ಭಾರಿ ಒಳಪೆಟ್ಟು ಮಾಡಿದ್ದು ಇವರಿಗೆ ಉಪಚಾರಕ್ಕೆ ಅಂತಾ  ರಾಣೆಬೆನ್ರ್ನರ ಓಂ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಉಪಚಾರಕ್ಕೆ ದಾವಣಗೇರಿ ಎಸ್ ಎಸ್ ಆಸ್ಪತ್ರೆಗೆ  ದಾಖಲಿಸಿ ನಂತರ ದಿನಾಂಕ;25-08-2021 ರಂದು ಮುಂಜಾನೆ 8-00 ಗಂಟೆಗೆ ಮರಣ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 21/2021 ಮಹಿಳೆ ಸಾವು.

               ಚೈತ್ರಾ ತಂದೆ ಶಿವಪ್ಪ ಕಲ್ಲಜ್ಜರ ವಯಾ 17 ವರ್ಷ ಸಾಃಐರಣಿ ತಾಃರಾಣೆಬೆನ್ನೂರು ಇವರು ತನ್ನಗಿದ್ದ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ಅಸುಂಡಿ ಗ್ರಾಮದ ತನ್ನ ಚಿಕ್ಕಪ್ಪನಾದ ಮಂಜುನಾಥ ಕೆಂಚಮ್ಮನವರ ಇವರ ಮನೆಯಲ್ಲಿ ದಿನಾಂಕಃ20-07-2021 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಹೊಲಕ್ಕೆ ಹೊಡೆಯುವ ಕ್ರಿಮಿನಾಶಕ ಔಷದಿಯನ್ನು ಕುಡಿದು ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಪಡೆದುಕೊಂಡು ಹೆಚ್ಚಿನ ಉಪಚಾರಕ್ಕೆ ದಾವಣಗೆರೆ ಸಿ.ಜೆ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಪಡೆದುಕೊಳ್ಳುವ ಕಾಲಕ್ಕೆ ಉಪಚಾರ ಫಲಕಾರಿಯಾಗದೇ ದಿನಾಂಕಃ24-07-2021 ರಂದು ರಾತ್ರಿ 10-45 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಇವಳ ಸಾವಿನಲ್ಲಿ ಯಾವುದೆ ರೀತಿಯ ಅನುಮಾನ ಇರುವುದಿಲ್ಲ ಅಂತಾ ಚಿಕ್ಕಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 03-08-2021 01:23 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ