ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:102/2021 ಮಹಿಳೆ ಕಾಣೆ.

            ಶ್ರೀಮತಿ, ಸುನಂದಾ ಕೋಂ ನಾಗಪ್ಪ ಹರಿಜನ ವಯಾ- 28 ವರ್ಷ, ಜಾತಿ - ಹಿಂದೂ ಮಾದರ, ಉದ್ಯೋಗ - ಕೂಲಿ ಕೆಲಸ, ಸಾ; ಮಾಸನಕಟ್ಟಿ, ತಾ; ಹಾನಗಲ್ಲ ಇವಳು ದಿನಾಂಕ: 23-06-2021 ರಂದು ಮುಂಜಾನೆ 07-00 ಘಂಟೆಯಿಂದ ಮದ್ಯಾಹ್ನ 03-00 ಘಂಟೆಯ ನಡುವಿನ ಅವದಿಯಲ್ಲಿ ಮನೆಯಲ್ಲಿ ಯಾರು ಇಲ್ಲದೇ ಇರುವಾಗ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವಳಿಗೆ ಎಲ್ಲಾ ಕಡೆಗೆ ಹುಡುಕಿದರು ಸಿಕ್ಕಿದ್ದು ಇರುವುದಿಲ್ಲಾ ಕಾರಣ ಕಾಣೆಯಾದ ಸುನಂದಾ ಇವರನ್ನು ಹುಡುಕಿಕೊಡಬೇಕೆಂದು ನಾಗಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:106/2021 ಮಹಿಳೆ ಕಾಣೆ.

            ಕು: ಸಾನಿಯಾ ಕೋಂ ಮಹ್ಮದರಫೀಕ ಶೇಖಸನದಿ ವಯಾ: 13 ವರ್ಷ. ಜಾತಿ: ಮುಸ್ಲಿಂ, ಉದ್ಯೋಗ: ವಿದ್ಯಾರ್ಥಿ ಸಾ: ಹಿರೇಕೆರೂರ-ಬಸವೇಶ್ವರ ನಗರ 02 ನೇ ಕ್ರಾಸ್ ತಮ್ಮ ವಾಸದ ಮನೆಯಿಂದ ದಿನಾಂಕ: 23/06/2021 ರಂದು 15-30 ಗಂಟೆಗೆ ಸುಮಾರಿಗೆ ಸಾನಿಯಾ ಅವರ ಶಾಲೆಯಲ್ಲಿ ರೇಶನ್ ಕೊಡುತ್ತಾರೆ, ಇಸಿದುಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ, ಶಾಲೆಗೆ ಹೋಗಿ, ಶಾಲೆಯಲ್ಲಿ ರೇಶನ್ ಇಸಿದುಕೊಂಡು ಮನೆಗೆ ಬಂದು ರೇಶನ್ ಇಟ್ಟು, ನಂತರ ಸುಮಾರ 16-00 ಗಂಟೆಗೆ ಸಾನಿಯಾ ಇವಳು ಅವರ ಪ್ರೇಂಡ್ಸ್ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು. ಸ್ನೇಹಿತ ಮನೆಗೂ ಹೋಗದೇ, ವಾಪಾಸ್ಸು ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸಾನಿಯಾ ಇವಳು ಅಲ್ಪವಹಿ ಅಂತಾ ಗೊತ್ತಿದ್ದರು ಯಾರೋ ಅವಳಿಗೆ ಯಾವುದೋ ಆಶೆ ಆಮಿಷ್ಯ ತೋರಿಸಿ ಯಾವುದೋ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಮಹಮದರಪೀಕ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:130/2021 ಬೈಕ್ ಕಳ್ಳತನ.

            ದಿನಾಂಕ 02/06/2021 ರಂದು ಮದ್ಯಾಹ್ನ 02-00 ಗಂಟೆಯಿಂದ 03-00 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ತಿಪ್ಪಣ್ಣ ಬಂಕಾಪೂರ ಸಾ|| ಸವಣೂರ ಇವರ ಯಮಹಾ ಎಪ್,ಜೆಡ, ಎಸ್ ಮೊಟಾರ್ ಸೈಕಲ್ ನೊಂದಣಿ ಸಂಖ್ಯೆ ಕೆಎ27/ಇಕ್ಯೂ6407, ಚೆಸ್ಸಿ ನಂಬರ ME1RG6611M0089385,, ಇಂಜಿನ್ ನಂಬರ G3N3E0091269 ನೇಧು ಅ ಕಿ 48000 (ನಾಲವತ್ತೆಂಟ ಸಾವಿರ) ರೂಫಾಯಿ ಮೌಲ್ಯದ  ಮೊಟಾರ ಸೈಕಲ್ಲನ್ನು ತಿಪ್ಪಣ್ಣ ಇವರ ವಾಸದ ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕುಮಾರಪಟ್ಟಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:02/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಲೋಕೆಶ ತಂದೆ: ಬಸವರಾಜಪ್ಪ ಎಲಿಗಾರ ವಯಾ: 23  ವರ್ಷ ಇವನಿಗೆ ಸರಾಯಿ ಕುಡಿಯುವ ಅಭ್ಯಾಸವಿದ್ದು ಲಾಕ್ಡೌನ್ ಸಮಯದಲ್ಲಿ ಯಾವುದೇ ಕೆಲಸ ಇಲ್ಲದಿದ್ದರಿಂದ ಸರಾಯಿ ಕುಡಿಯಲು ಹಣ ಸಿಗದ್ದರಿಂದ ಅದನ್ನೆ ಮನಸ್ಸಿಗೆ ಬೆಜಾರ ಮಾಡಿಕೊಂಡು ಮನೆಯಲ್ಲಿ ಯಾರೋ ಇಲ್ಲದೆ ಸಮಯದಲ್ಲಿ ದಿನಾಂಕ:24/06/2021 ರಂದು  ಸಂಜೆ 07-00 ಗಂಟೆಯಿಂದ 07-30 ಗಂಟೆಯ ನಮ್ಮ ವಾಸದ ಮನೆಯ ಮೇಲ್ಚಾವಣಿಯಲ್ಲಿರುವ ಕಟ್ಟಿಗೆ ತೊಲೆಗೆ ಟವಲಿನಿಂದ ಕೊರಳಿಗೆ ಉರುಲು ಹಾಕಿಕೊಂಡಿದ್ದು, ಹಾಕಿಕೊಂಡ ಟವಲ್ಲನ್ನು ಬಿಚ್ಚಿ ಉಪಚಾರ ಕುರಿತು ಹರಿಹರ ಸರಕಾರಿ ಆಸ್ಪತ್ರೆಗೆ  ಕರೆದಿಕೊಂಡು ಹೋದಾಗ ಉಪಚಾರ ಪಲಿಸಿದೆ ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ತಮ್ಮನ ಸಾವಿನಲ್ಲಿ ಬೇರೆ ಸಂಶಯ ಇರುವುದಿಲ್ಲಾ ಅಂತಾ ಮೃತನ ಅಣ್ಣ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ವ್ಯಕ್ತಿ ಸಾವು.

            ರವಿ ತಂದೆ ಮಲ್ಲೇಶಪ್ಪ ದುಂಡಶಿ, ವಯಾ- 35 ವರ್ಷ, ಜಾತಿ- ಹಿಂದೂ ಲಿಂಗವಂತ, ಉದ್ಯೋಗ- ರಾಣೆಬೆನ್ನೂರ ಕೆಇಬಿಯಲ್ಲಿ ಗ್ರಿಡ್ ಆಫರೇಟರ್ ಕೆಲಸ, ಸಾ: ನೀರಲಗಿ, ತಾ: ಶಿಗ್ಗಾಂವ ಇವನು ದಿನಾಂಕ: 24/06/2021 ರಂದು ಸಾಯಂಕಾಲ 6-00 ಘಂಟೆಯ ಸುಮಾರು ನೀರಲಗಿ ಗ್ರಾಮದಲ್ಲಿ ತೇರಿನ ಮನೆಯ ಮುಂದೆ ನಡೆದುಕೊಂಡು ಹೊರಟಾಗ ಶಿದ್ದಪ್ಪ ಪರಸಪ್ಪ ಕರೆಪ್ಪನವರ ಸಾ: ನೀರಲಗಿ ಇವರು ತಮ್ಮ ಎತ್ತುಗಳಿಗೆ ನೀರು ಕುಡಿಸಲು ಕೆರೆ ಹೊಡೆದುಕೊಂಡು ಹೋಗುವಾಗ ಎತ್ತುಗಳು ಚಿನ್ನಾಟ ಬಿದ್ದು, ರವಿ ದುಂಡಶಿ ಇವನಿಗೆ ದೂಡಿ ಕೆಡವಿ ಅವನ ಎದೆಯ ಮೇಲೆ ಕಾಲು ಇಟ್ಟು ಹೋಗಿದ್ದರಿಂದ ಭಾರಿ ಗಾಯಪೆಟ್ಟು ಆಗಿ, ಉಪಚಾರಕ್ಕೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ಕರೆದುಕೊಂಡು ಹೋದಾಗ ಕಿಮ್ಸ ಆಸ್ಪತ್ರೆ ಮುಟ್ಟುತ್ತಿದ್ದಂತೆ ದಿನಾಂಕ: 24/06/2021 ರಂದು ರಾತ್ರಿ 7-55 ಘಂಟೆಗೆ ಮರಣ ಹೊಂದಿದ್ದು ನನ್ನ ಗಂಡನ ಮರಣದಲ್ಲಿ ಬೇರೆ ಏನು, ಹಾಗೂ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 30-06-2021 06:11 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080