ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:62/2021 ಕಲಂ: 379 IPC.

             ಹಾವೇರಿ ಶಹರ ಪೊಲೀಸ್ ಠಾಣಾ ಹದ್ದಿ ಪೈಕಿನಾಗೇಂದ್ರಮಟ್ಟಿಯ ನೆಹರು ನಗರದಲ್ಲಿ  ದಿನಾಂಕ 19-05-2021 ರಾತ್ರಿ 9 ಗಂಟೆಯಿಂದ  ದಿನಾಂಕ 20-05-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮಹಮದಸಾದಿಕ್ ಮಧರಂಗಿ ಸಾ|| ಹಾವೇರಿ ಇವರ ಮನೆ ಮುಂದೆ ನಿಲ್ಲಿಸಿದ  HF DELUXE SELF DRUM CAST ಕಂಪನಿಯ ಮೋಟರ್ ಸೈಕಲ್ಲ ನಂಬರ KA-27/EN7550 ಚೆಸ್ಸಿ ನಂ- MBLHAW062K5H45221 ಮತ್ತು ಇಂಜೆನ್ ನಂಬರ HA11EPK5H19575 ಗಾಡಿಯ ಬಣ್ಣ BLACK ಇದ್ದು ಗಾಡಿಯ ಅಂದಾಜು ಮೌಲ್ಯ ಅಃಕಿಃ 30,000/- ರೂ ಕಿಮ್ಮತ್ತಿನ ಮೋಟರ ಸೈಕಲ್ಲನ್ನು ಯಾರೋ ಕಳ್ಳರು ಹ್ಯಾಡಲ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ : 19/2021 ನೇಣು ಹಾಕಿಕೊಂಡು  ವ್ಯಕ್ತಿ ಆತ್ಮಹತ್ಯೆ.

            ಮಲ್ಲಪ್ಪ ತಂದೆ ಭರಮಪ್ಪ ಮಣ್ಣಮ್ಮನವರ, 65 ವರ್ಷ, ಸಾ: ಚಿಕ್ಕಲಿಂಗದಹಳ್ಳಿ, ಇವರದು 06 ಎಕರೆ ಜಮೀನು ಇದ್ದು ಈ ಜಮೀನನ್ನ ಇವರೇ ಉಳುಮೆ ಮಾಡುತ್ತಾ ಬಂದಿದ್ದು, ಜಮೀನದ ವ್ಯವಸಾಯದ ಕೆಲಸಗಳಿಗಾಗಿ ಕುರುಬಗೊಂಡ ಗ್ರಾಮದ ಕಾರ್ಪೋರೇಷನ್ ಬ್ಯಾಂಕಿನಲ್ಲಿ 04 ವರ್ಷಗಳ ಹಿಂದೆ ಸುಮಾರು 07 ಲಕ್ಷ ರೂಪಗಾಯಿಗಳಷ್ಟು ಸಾಲ ಮಾಡಿದ್ದು ಈ ಸಾಲವನ್ನ ತೀರಿಸಲಾಗದೇ ಸಾಲದ ಬಗ್ಗೆ ಚಿಂತೆ ಮಾಡಿ ದಿನಾಂಕ: 24-05-2021 ರಂದು ಮದ್ಯಾಹ್ನ 2-00 ಗಂಟೆಯಿಂದ ದಿನಾಂಕ: 25-05-2021 ರಂದು ಮುಂಜಾನೆ 08-00 ಗಂಟೆಯ ನಡುವಿನ ಅವಧಿಯಲ್ಲಿ  ಕಲ್ಲಾಪೂರ ಗ್ರಾಮದ ವ್ಯಾಪ್ತಿಯ ಭರಮಪ್ಪ ಬೆನಕನಹಳ್ಳಿ, ಇವರ ಜಮೀನದ ಬದುವಿನಲ್ಲಿರುವ ಹುಣಸಿಮರದ ಟೊಂಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇವರ ಸಾವಿನಲ್ಲಿ ಬೇರೆ ಯಾರ ಮೇಲೂ ಸಂಶಯ ಇರುವುದಿಲ್ಲಾ ಅಂತಾ ಮೃತನ ಮಗ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 26-05-2021 05:23 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080