ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:29/2021 ಮಹಿಳೆ ಕಾಣೆ.

               ಭಾಗ್ಯಾ ತಂದೆ ರಾಯಪ್ಪ ತಳವಾರ, ವಯಾ: 21 ವರ್ಷ 3 ತಿಂಗಳು ಇವಳು ದಿನಾಂಕ : 23-04-2021 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ತನ್ನ ತಾಯಿಯ ಮುಂದೆ ಆಫೀಸ್ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು, ರಾತ್ರಿ 7-30 ಗಂಟೆ ಆದರೂ ತಮ್ಮ ಮಗಳು ಮನೆಗೆ ಮರಳಿ ಬಾರದೇ ಎಲ್ಲಿಯೊ ಕಾಣೆಯಾಗಿ ಹೋದ ಬಗ್ಗೆ ಖಾತ್ರಿಯಾಗಿದ್ದರಿಂದ, ಕಾಣೆಯಾದ ತಮ್ಮ ಮಗಳನ್ನು ಹುಡುಕಿಕೊಡಬೇಕೆಂದು ರಾಯಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವ್ಯಕ್ತಿ ಸಾವು.

               ಅರುಣ ಶಂಕರಗೌಡ ಕುರವತ್ತಿಗೌಡ್ರ ಇವನು ದಿನಾಂಕ: 23/04/2021 ರಂದು ಬೆಳಿಗ್ಗೆ 09-00 ಗಂಟೆಗೆ ಮನೆಯಿಂದ ಕೃಷಿ ಕೆಲಸದ ಸಲುವಾಗಿ ತಮ್ಮ ಹೊಲಕ್ಕೆ ಹೋಗಿದ್ದು ಅವರ ಹೊಲದ ಪಕ್ಕದ ಶೇಖಪ್ಪ ಮಹದೇವಪ್ಪ ಕಾಗಿನೆಲೆ ಇವರ ಜಮೀನಿನಲ್ಲಿ ಇರುವ ಹಳೆಯ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಈ ದಿವಸ ದಿನಾಂಕ: 25/04/2021 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಶೇಖಪ್ಪ ಮಹದೇವಪ್ಪ ಕಾಗಿನೆಲೆ ಇವರು ಬಾವಿ ಹತ್ತಿರ ಹೋದಾಗ ಮೃತ ದೇಹ ಕಂಡಿದ್ದು, ಅರುಣ ಇವನು ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮರಣ ಹೊಂದಿದ್ದು  ವಿನಃ ನನ್ನ ಮಗನ ಮರಣದಲ್ಲಿ ಬೇರೆ ಏನು ಸಂಶಯ ಇರುದಿಲ್ಲ, ಕಾನೂನು ರಿತ್ಯ ಕ್ರಮ ಜರುಗಿಸಬೇಕು ಅಂತಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿ಼ಷ ಸೇವಿಸಿ  ಯುವಕ ಮತ್ತು ಯುವತಿ ಆತ್ಮಹತ್ಯೆ .

                  ವಿದ್ಯಾಶ್ರೀ ತಂದೆ ಶಿವಪ್ಪ ಗಾಳಿ, ವಯಸ್ಸು: 22 ವರ್ಷ, ಉದ್ಯೋಗ: ಮನೆ ಕೆಲಸ, ಸಾ: ನಾಗನೂರ, ತಾ: ಜಿ: ಹಾವೇರಿ. ಇರ್ಷಾದಅಹ್ಮದ ತಂದೆ ಮರ್ದಾಬಸಾವ  ಕುಡಚಿ, ವಯಸ್ಸು: 23 ವರ್ಷ, ಜ್ಯಾತಿ: ಮುಸ್ಲಿಂ, ಉದ್ಯೋಗ: ಖಾಸಗಿ ಪಶು ಚಿಕಿತ್ಸಕರು, ಸಾ: ನಾಗನೂರ, ತಾ, ಜಿ: ಹಾವೇರಿ. ಇವರು ಒಬ್ಬರಿಗೊಬ್ಬರು ಪ್ರೀತಿಸುತ್ತಾ ಬಂದು ತಮ್ಮ ಪ್ರೀತಿಗೆ ಮನೆಯವರು ಒಪ್ಪಿಗೆ ಕೊಡುತ್ತಾರೋ ಇಲ್ಲವೋ ಅಂತಾ ತಮ್ಮಷ್ಟಕ್ಕೆ ತಾವೇ ಮನನೊಂದುಕೊಂಡು ದಿನಾಂಕ; 24-04-2021 ರಂದು ಬೆಳಗಿನ ಜಾವ 01-00 ಗಂಟೆಯಿಂದ ದಿನಾಂಕ: 25-04-2021 ರಂದು ಮುಂಜಾನೆ 07-00 ಗಂಟೆಯ ನಡುವಿನ ಅವಧಿಯಲ್ಲಿ ನಾನಗೂರ ಗ್ರಾಮದ ಮರ್ದನಸಾಬ ಹಜರೇಸಾಬ ಕುಡಚಿ ಇವರ ಜಮೀನದಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 26-04-2021 08:10 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ