ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2021 ಮಹಿಳಾ ಕಾಣೆ.

                ದೀಪಾ ತಂದೆ ಶಿವಾನಂದಪ್ಪ ಮಡಿವಾಳರ, ವಯಾ: 19 ವರ್ಷ 2 ತಿಂಗಳು ಇವಳು ದಿ: 24-03-2021 ದೀಪಾ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಇಲ್ಲಿಯೋ ಹೋಗಿದ್ದು ಕಾಣೆಯಾದ ದೀಪಾ ಇವಳನ್ನು ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ದೀಪಾ ಇವಳನ್ನು ಹುಡುಕಿಕೊಡಬೇಕೆಂದು ಶಿವನಂದಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:45/2021 ಕಲಂ:379 IPC.

                ಅಕ್ಕಮಹಾದೇವಿ ಕೋಂ ಗಣಪತಿ ಬಡಿಗೇರ ವಯಾ-55 ವರ್ಷ. ಜಾತಿ-ಹಿಂದೂ-ಪಾಂಚಾಳ. ಉದ್ಯೋಗ-ಮನೆಕೆಲಸ. ಸಾ-ಅಳಲಗೇರಿ. ತಾ-ಬ್ಯಾಡಗಿ ಹಾಗೂ ಸುಮಾ @ ಸುಭದ್ರವ್ವ ಕೋಂ ನವೀನ ಬಡಿಗೇರ ವಯಾ-28 ವಷ. ಜಾತಿ-ಹಿಂದೂ-ಪಾಂಚಾಳ. ಉದ್ಯೋಗ-ಮನೆಕೆಲಸ. ಸಾ-ಕಾಟೇನಹಳ್ಳಿ, ತಾ-ಬ್ಯಾಡಗಿ ಇಬ್ಬರೂ ತಾಯಿ-ಮಗಳು ಇದ್ದು. ಸುಮಾ ಇವಳನ್ನು ಕಾಟೇನಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು  ಅಳಲಗೇರಿ ಗ್ರಾಮದ ಜಾತ್ರೆಗೆ ಅಂತಾ ತವರು ಮನೆಗೆ ಬಂದಿದ್ದು ಇರುತ್ತದೆ. ತಾಯಿ-ಮಗಳು ಇಬ್ಬರೂ ಸೇರಿ  ದಿನಾಂಕ; 13-03-2021 ರಂದು ಸಂಜೆ ಮನೆಯಿಂದ ಆಸ್ಪತ್ರೆಗೆ ತೋರಿಸಲು ಹಾವೇರಿಗೆ  ಹೋಗುತ್ತೇವೆ ಅಂತಾ ಗಣಪತಿ ಇವರಿಗೆ ಹೇಳಿ ಹೋದವರು  ಈವರೆಗೂ ಮರಳಿ ಮನೆಗೆ ಬಾರದೇ ಇರುವದರಿಂದ  ಇವರಿಗೆ  ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಕಾರಣ ಅಕ್ಕಮಹಾದೇವಿ ಮತ್ತು ಸುಮಾ @ ಸುಭದ್ರವ್ವ  ಇವರು   ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಕಾಣಿಯಾದವರನ್ನು   ಹುಡುಕಿಕೊಡಬೇಕು ಅಂತಾ ಗಣಪತಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:45/2021 ಕಲಂ:379 IPC

              ದಿನಾಂಕ:18-03-2021 ರಂದು 13-40 ಗಂಟೆಯಿಂದ 14-00 ಗಂಟೆಯ ನಡುವಿನ ಅವಧಿಯಲ್ಲಿ ಬಸು ಕಂಬಾಳಿ ಸಾ: ಕಮದೊಡ್ಡ ಇವರು ಬರೋಡಾ ಬ್ಯಾಂಕಿನಿಂದ 1,40,000/- ರೂ ಹಣವನ್ನು ಡ್ರಾ ಮಾಡಿಕೊಂಡು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ತಾನು ತಂದಿದ್ದ ಮೋಟಾರ ಸೈಕಲ್ ಹಿರೋ ಎಚ್.ಎಫ್. ಡಿಲಕ್ಸ್ ಮೋಟಾರ ಸೈಕಲ್ ನಂ: ಕೆಎ-27/ಇಬಿ-2904 ನೇದ್ದರ ಸೈಡ್ ಬ್ಯಾಗಿನಲ್ಲಿ ಇಟ್ಟುಕೊಂಡು ಬಸ್ಟ್ಯಾಂಡ್ ಮಾರ್ಗವಾಗಿ, ಬಸ್ಟ್ಯಾಂಡ್, ಹಲಗೇರಿ ಕ್ರಾಸ್ ದಿಂದ ಉಳಾಗಡ್ಡಿ ಮಾರ್ಕೆಟ್ ಹತ್ತಿರ ಬಂದು ಮಾರ್ಕೆಟ್ ಒಳಗೆ ಇರುವ ಶೌಚಾಗೃಹದ ಹತ್ತಿರ ಹೋಗಿ ಅಲ್ಲಿ ತನ್ನ ಮೋಟಾರ ಸೈಕಲ್ ತರುಬಿ, ಮೂತ್ರ ವಿಸರ್ಜನೆಗೆ ಅಂತಾ ಹೋದಾಗ ಯಾರೋ ಕಳ್ಳರು, ಮೋಟಾರ ಸೈಕಲಿನ ಸೈಡ್ ಬ್ಯಾಗಿನ ಕ್ಲಿಫ್ ತೆಗೆದುಸೈಡ್ ಬ್ಯಾಗಿನ ಒಳಗೆ ಇದ್ದ  1,40,000/- ರೂ ಹಣದ ಪ್ಲಾಸ್ಟಿಕ್ ಚೀಲವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕಾಗಿನೇಲೆ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2021 ವ್ಯಕ್ತಿ ಸಾವು.

                 ದಿನಾಂಕಃ-19-03-2021 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಷಣ್ಮುಖಪ್ಪ ತಂದೆ ಬಸವಣ್ಣೇಪ್ಪ ದೊಡ್ಮನಿ ವಯಾ 46 ವರ್ಷ ಸಾ||ಕೆರವಡಿ ಈತನು ಕಾಗಿನೆಲೆ ಪಿ.ಎಸ್. ಹದ್ದಿ ಪೈಕಿ ಹಂಸಭಾವಿ ಕಡೆಯಿಂದ ಲಿಂಗಾಪೂರ ಕಡೆಗೆ ಹೊಗುವ ರಸ್ತೆಯ ಮದ್ಯೆದಲ್ಲಿರುವ ಎ.ಪಿ.ಎಮ್.ಸಿ.ಎದುರಿಗೆ ತನ್ನ ಮೋಟಾರ ಸೈಕಲ್ಲನ್ನು ನಿಲ್ಲಿಸಿ ಕೆಳೆಗೆ ಇಳಿಯುವಾಗ ಮದ್ಯೆ ಸೇವನೆ ಮಾಡಿದ ಅಮಲಿನಲ್ಲಿ ಜೋಲಿ ಹೋಗಿ ಆಕಸ್ಮಾತ್ ಕೆಳಗೆ ಕಲ್ಲಿನ ಮೇಲೆ ಬಿದ್ದು ತೆಲೆಗೆ ಪೆಟ್ಟಾಗಿದ್ದು ಸದರಿಯವನಿಗೆ ಅಲ್ಲಿಂದ ಕರೆದುಕೊಂಡು ಬ್ಯಾಡಗಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಅಲ್ಲಿಂದ ವೈದ್ಯರ ಸಲಹೆಯಂತೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ತೆಲೆಗೆ ಆದಂತ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ-25-03-2021 ರಂದು ಮುಂಜಾನೆ 8-45 ಗಂಟೆಗೆ ಮೃತ ಪಟ್ಟಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ರೇಣುಕಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕಾಗಿನೇಲೆ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ಮಹಿಳೆ ಸಾವು.

                 ದಿನಾಂಕಃ 25-03-2021 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ ಶ್ರೀಮತಿ ಕಾವ್ಯಾ ಕೊಂ ಮಂಜಪ್ಪ ಸಣ್ಣಹಸಬಿ ಇವಳು ತನ್ನ ಗಂಡನ ಮನೆಯಲ್ಲಿ ವಾಂತಿ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡವಳು, ಹೊಟ್ಟೆ ನೋಯುತ್ತದೆ ಅಂತಾ ಒದ್ದಾಡುತ್ತಿದ್ದವಳಿಗೆ ಉಪಚಾರಕ್ಕೆ ಅಂತಾ ಹಾವೇರಿಯ ವೀರಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಚೆಕ್ ಮಾಡಿ ಲೋ ಬಿ.ಪಿ ಇದೆ ಬೇಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಅಲ್ಲಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಉಪಚಾರಕ್ಕೆ ದಾಖಲು ಮಾಡಿದಾಗ ಮುಂಜಾನೆ 09-30 ಗಂಟೆ ಸುಮಾರಿಗೆ ವೈದ್ಯರು ಚೆಕ್ ಮಾಡಿ ತೀರಿಕೊಂಡಿರುತ್ತಾಳೆ ಅಂತಾ ತಿಳಿಸಿದ್ದು, ಸದರಿಯವಳ ಸಾವಿನಲ್ಲಿ ಯಾವುದೇ ಸಂಶಯವಿರುವದಿಲ್ಲಾ ಅಂತಾ ಚಂದ್ರಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಶಿವಾನಂದಪ್ಪ ತಂದೆ ಲಕ್ಷ್ಮಪ್ಪ ಮಲ್ಲಾಡದ, ವಯಸ್ಸು: 42 ವರ್ಷ, ಜಾತಿ: ಹಿಂದೂ-ಕುರುಬರ, ವೃತ್ತಿ: ವ್ಯವಸಾಯ ಸಾ: ಹಾರೊಗೋಪ್ಪ, ತಾ:ರಾಣೇಬೆನ್ನೂರ ಇವನು ತನ್ನ  ಜಮೀನಿನ ಸಂಬಂಧ ಹಾಗೂ ಮನೆತನದ ಸಂಬಂಧ ಹಿರೇಮಾಗನೂರು ವಿ. ಎಸ್.ಎಸ್ ಬ್ಯಾಂಕಿನಲ್ಲಿ 3,30,000/- ರೂಪಾಯಿ ಸಾಲ ಮತ್ತು ಹಿರೇಮಾಗನೂರು ವಿ. ಎಸ್.ಎಸ್ ಬ್ಯಾಂಕಿನಲ್ಲಿ ಬಿ.ಡಿ.ಪಿ ಸಾಲ 1,44,000/- ರೂಪಾಯಿ ಸಾಲ ಹಾಗೂ ರಾಣೇಬೆನ್ನೂರು ವಿಜಯ ಬ್ಯಾಂಕ್ ನಲ್ಲಿ 7,000/- ರೂಪಾಯಿ ಸಾಲ ಮತ್ತು ಕೈಗಡವಾಗಿ 1,00,000/- ರೂಪಾಯಿ ಸಾಲವನ್ನು ಮಾಡಿದ್ದು ಒಟ್ಟು 5,81,000/- ರೂಪಾಯಿ ಸಾಲ ಮಾಡಿ ಈಗ ಸುಮಾರು 3-4 ವರ್ಷಗಳಿಂದ ಮಳೆಯು ಅತೀ ವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಾವು ಬೆಳೆದ ಗೊವಿನ ಜೋಳ ಹಾಗೂ ಹತ್ತಿ  ಮತ್ತು ಈರುಳ್ಳಿ ಬೆಳೆಗಳು ಸರಿಯಾಗಿ ಬಾರದೆ ಲುಕ್ಷಾಣು ಆಗಿದ್ದರಿಂದ  ತಾನು ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸಿಕ ಮಾಡಿಕೊಂಡು ದಿನಾಂಕ:24-03-2021 ರಂದು ಸಾಯಂಕಾಲ 05-30 ಗಂಟೆಯಿಂದ ದಿನಾಂಕ: 25-03-2021 ರಂದು ಮುಂಜಾನೆ 10-30 ಗಂಟೆಯ ನಡುವಿನ ಅವದಿಯಲ್ಲಿ ನಮ್ಮ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಸೀರೆಯಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ. ಇವರ ಸಾವಿನಲ್ಲಿ ಯಾವುದೆ ಸಂಶಯ ಇರುವದಿಲ್ಲ ಅಂತಾ ಮೃತನ ಪತ್ನಿಯು ವರದಿ ನೀಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 26-03-2021 04:46 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ