ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 52/2021 ಕಲಂ:379 IPC.

               ದಿನಾಂಕ: 17-07-2021 ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ: 18-07-2021 ರ ಬೆಳಗಿನ 7-00 ಗಂಟೆಯ ನಡುವಿನ ಅವಧಿಯಲ್ಲಿ ಮಾಕನೂರು ಗ್ರಾಮದ ಚಂದ್ರಾಚಾರಿ ಕಲಾಚಾರಿ ಮಾಯಾಚಾರಿ ಇವರ ವಾಸದ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ನಿಲ್ಲಿಸಿದ್ದ ಓಮಿನಿ ವ್ಯಾನ್ ನಂಬರ್ ಕೆಎ: 17/ಪಿ: 2091 ಅದರ ಚಸ್ಸಿ ನಂಬರ್: MA3EVB11S01529063 ಇಂಜಿನ್ ನಂಬರ್ F8BIN4723795 ನೇದ್ದರ ಅಂದಾಜು ಕಿಮ್ಮತ್ತು 02 ಲಕ್ಷ ಹತ್ತು ಸಾವಿರದ್ದು ಇದ್ದು, ಅದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 74/2021 ಕಲಂ:143,147,148,323,324,326, 307, 504, 506,149 IPC.

               ಶಿವಶಂಕರ ಬಸವರಾಜ ಬಸೆಗಣ್ಣಿ ಸಾ||ಹಾವೇರಿ  ಹಾಗೂ ಆತನ ಸ್ನೇಹಿತರು ದಿ: 23-07-2021 ರಂದು ರಾತ್ರಿ 9-30 ಘಂಟೆಯ ಸುಮಾರಿಗೆ ಊಟ ಮಾಡಲು ಅಂತ  ಹಾವೇರಿಯ ರಾಷ್ಟ್ರೀಯ ಹೆದ್ದಾರಿ ನಂ: 4 ನೇದ್ದರ ಪಕ್ಕದಲ್ಲಿರುವ ರಾಮದೇವ ರಾಜಪುರಿ ರಾಜಸ್ತಾನಿ ಡಾಬಾಕ್ಕೆ ಹೋಗಿ ಒಂದು ಟೇಬಲ್ದಲ್ಲಿ ಕುಳಿತುಕೊಂಡಿದ್ದು ಪಕ್ಕದ ಟೇಬಲ್ದಲ್ಲಿ ಊಟಕ್ಕೆ ಕುಳಿತಿದ್ದ ಮಾಲತೇಶ ಸಿದ್ದಪ್ಪ ಯತ್ತಿನಹಳ್ಳಿ ಸಾ||ಹಾವೇರಿ ಇವನು ಶಿವಶಂಕರ ಸ್ನೇಹಿತನಿಗೆ ಕುರ್ಚೆ ಸರಿಸಿಕೊಂಡು ಕೂಡು ಅಂತ ಹೇಳಿದ್ದು ಶಿವಶಂಕರ ಇವರ ಸ್ವೇಹಿತನು ತನ್ನ ಕುರ್ಚೆಯನ್ನು ಸರಿಸಿಕೊಂಡು ಕುಳಿತುಕೊಂಡರೂ ಸಹ ಪದೇ ಪದೇ ಕುರ್ಚೆ ಸರಿಸಿಕೊಂಡು ಕೂಡು ಅಂತ ಹೇಳಿ ಅವರೊಂದಿಗೆ ತಂಟೆ ತೆಗೆದು ಅವಾಚ್ಯವಾಗಿ ಬೈದಾಡಿದ್ದು, ಶಿಶಂಕರ ಯಾಕೆ ಸುಮ್ಮನೆ ಮೇಲೆ ಬಿದ್ದು ಜಗಳ ಮಾಡ್ರೀರಿ, ನಾವು ಉಂಡು ಹೊಕ್ಕವಿ ಅಂತ ಅಂದಿದ್ದಕ್ಕೆ ಸಿಟ್ಟಾದ  ಮಾಲತೇಶ ಅವಾಚ್ಯವಾಗಿ ಬೈದಾಡಿ ಊಟದ ತಟ್ಟೆಗಳಿಂದ, ಕಬ್ಬಿಣದ ರಾಡುಗಳಿಂದ ಶಿವಶಂಕರ ಇವರ ತಲೆಗೆ, ಮೈಕೈಗಳಿಗೆ ಹೊಡೆದು ಸಾದಾ ವ ಭಾರೀ ಗಾಯಪೆಟ್ಟುಗೊಳಿಸಿದ್ದು ಕೊಲೆ ಮಾಡಬೇಕೆನ್ನುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು ಅಲ್ಲದೆ ಬಿಡಿಸಲು ಬಂದ ಸ್ನೇಹಿತ ಸತೀಶ ಪಾಟೀಲ ಈತನಿಗೂ ಸಹ ಕಬ್ಬೀಣದ ರಾಡಿನಿಂಡ ತೆಲೆಗೆ, ಮೈಕೈಗಳಿಗೆ ಹೊಡೆದು ಸಾದಾ ವ ಭಾರಿ ಗಾಯಪೆಟ್ಟುಗೋಳಿಸಿದ್ದು ಆಗ ಶಿವಶಂಕರ ಮಾಲತೇಶ ಇವನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗ ಮಾಲತೇಶ ಹಾಗೂ ಆತನ ಸ್ನೇಹಿತರು ಬೆನ್ನು ಹತ್ತಿ ಹೋಗಿ ಹಿಡಿರಿಲೇ ಅವನ್ನು ಹೊಡೆದು ಲಾರಿ ಬಾಯಿಗೆ ಹಾಕನು ಅಂತ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 118/2021 ಮಹಿಳೆ ಕಾಣೆ.

               ಕುಮಾರಿ; ನಾಗವೇಣಿ ತಂದೆ ಮಂಜಪ್ಪ ಚವ್ಹಾಣ ವಯಾ- 15 ವರ್ಷ 11 ತಿಂಗಳು 13 ದಿನ ಜಾತಿ- ಹಿಂದೂ ಮರಾಠ, ಉದ್ಯೋಗ- ವಿದ್ಯಾರ್ಥಿ ಸಾ: ಹರನಗಿರಿ ತಾ: ಹಾನಗಲ್ಲ ಇವಳು ದಿನಾಂಕ: 22-07-2021 ರಂದು ಮುಂಜಾನೆ 08-30 ಘಂಟೆ ಸುಮಾರಿಗೆ ಎಸ್,ಎಸ್,ಎಲ್,ಸಿ ಪರೀಕ್ಷೆ ಬರೆಯಲು ಅಂತಾ ಮನೆಯಿಂದ ವರ್ದಿ ಗ್ರಾಮದ ಸರಕಾರಿ ಪ್ರೌಡ ಶಾಲೆಗೆ ಹೋದಳು ಸಂಜೆ 06-00 ಘಂಟೆ ಆದರು ಮನೆಗೆ ವಾಪಸ್ಸು ಬಾರದೆ ಇವಳು ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಅಥವಾ ಯಾರೋ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಆದ್ದರಿಂದ ಕಾಣೆಯಾದ ಕು:ನಾಗವೇಣಿ ಇವಳಿಗೆ ಪತ್ತೆ ಮಾಡಿಕೊಡಬೇಕೆಂದು ಕಾಣೆಯಾದ ನಾಗವೇಣಿ ಇವರ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 15/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

ಬಸವರಾಜ ತಂದೆ ಮಾದೇವಪ್ಪ ನಾಗಪ್ಪನವರ, ವಯಾ- 50 ವರ್ಷ, ಜಾತಿ- ಹಿಂದೂ ಕುರುಬರ, ಉದ್ಯೋಗ- ಹೊಲಮನಿಗೆಲಸ, ಸಾ: ಹಿರೇಬೆಂಡಿಗೇರಿ, ತಾ; ಶಿಗ್ಗಾಂವ, ಇವನು ಕೃಷಿಯ ಸಲುವಾಗಿ ಬ್ಯಾಂಕಿನಲ್ಲಿ ಮತ್ತು ಕೈಗಡ ಸಾಲ ಮಾಡಿದ್ದು, ಈಗ 02 ವರ್ಷಗಳಿಂದ ಮಳೆ ಬಹಳ ಆಗಿ ಬೆಳೆ ಸರಿಯಾಗಿ ಬಾರದ್ದರಿಂದ ಮಾಡಿದ ಸಾಲ ತೀರಿಸುವುದು ಹೇಗೆ ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 24/07/2021 ರಂದು ಮುಂಜಾನೆ 11-00 ಘಂಟೆಯಿಂದ ಮದ್ಯಾಹ್ನ 3-30 ಘಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ಹಗ್ಗದಿಂದ ನೇಣುಹಾಕಿಕೊಂಡು ಮರಣ ಹೊಂದಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಏನು, ಹಾಗೂ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಶಂಕ್ರವ್ವಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

ಇತ್ತೀಚಿನ ನವೀಕರಣ​ : 03-08-2021 01:21 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ