ಅಭಿಪ್ರಾಯ / ಸಲಹೆಗಳು

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:77/2021 ಮಹಿಳೆ ಕಾಣೆ.

            ರಾಧಿಕಾ ಕೊಂ ಶಶಿಕುಮಾರ ಅಂಗಡಿ, ವಯಾ- 19 ವರ್ಷ, ಜಾತಿ ಹಿಂದೂ ವಾಲ್ಮೀಕಿ, ಉದ್ಯೋಗ- ಮನೆ ಕೆಲಸ ಸಾ: ಆಯನೂರ ಕೋಟೆ ತಾ: ಶಿವಮೊಗ್ಗ ಇವಳನ್ನು ದಿನಾಂಕ: 28/05/2021 ರಂದು ಸಂಪ್ರದಾಯದ ಪ್ರಕಾರ ಆಯನೂರು ಕೋಟೆ ಗ್ರಾಮದ ಶಶಿಕುಮಾರ ವೆಂಕಟೇಶ ಅಂಗಡಿ ಅನ್ನುವನ ಸಂಗಡ ಮದುವೆ ಮಾಡಿ ತನ್ನ ಗಂಡನ ಮನಿಗೆ ಕಳುಹಿಸಿಕೊಟ್ಟಿದ್ದು ನಂತರ ಸದರ ರಾಧಿಕಾಳು ಹುಶಾರ ಇಲ್ಲದ್ದರಿಂದ ದಿನಾಂಕ: 19/06/2021 ರಂದು ಶನಿವಾರ ದಿವಸ ಮೆದೂರ ಗ್ರಾಮದ ತನ್ನ ತವರು ಮನೆಗೆ ಬಂದಿದ್ದು ನಂತರ ದಿನಾಂಕ; 20/06/2021 ರಂದು 20-00 ಗಂಟೆಗೆ ರಾಧಿಕಾಳು ಪೋನಲ್ಲಿ ಮಾತಾಡುತ್ತಾ ಮನೆಯಿಂದ ಹೊರಗೆ ಹೋದವಳು ರಾತ್ರಿ ಆದರೂ ಮನೆಗೆ ವಾಪಾಸ ಬಾರದೇ ಕಾಣೆಯಾಗಿದ್ದು, ಸದರಿಯವಳು ನಾಗವಂದ ಗ್ರಾಮದ ಅನಿಲ ತಂದೆ ಪರಸಪ್ಪ ಸುಣಗಾರ ಈತನ ಸಂಗಡ ಹೋಗಿರಬಹುದು ಅನ್ನುವ ಸಂಶಯ ಇದ್ದು ರಾಧಿಕಾಳನ್ನು ಪತ್ತೆ ಮಾಡಿ ಕೊಡಲು  ಶಿವಮೂರ್ತೆಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ಸಂಜೀವ ತಂದೆ ಸುರೇಶ ಚಲ್ಲಾಳ, ವಯಾ- 44 ವರ್ಷ, ಜಾತಿ -ಹಿಂದೂ ಲಿಂಗವಂತ, ಉದ್ಯೋಗ- ವ್ಯವಸಾಯ, ಸಾ: ನೀರಲಗಿ ತಾ; ಹಾನಗಲ್ಲ ಇವನು ಯಾವುದೋ ವಿಚಾರ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 22-06-2021 ರಂದು ಮುಂಜಾನೆ 08-30 ಘಂಟೆ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿದ್ದು ಇವನಿಗೆ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಿಸದೆ ದಿನಾಂಕ:24/06/2021 ರಂದು ಮುಂಜಾನೆ 09-00 ಘಂಟೆ ಸುಮಾರಿಗೆ ಮರಣ ಹೊಂದಿದ್ದು ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ  ಸುರೇಶ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ಮಹಿಳೆ ಸಾವು.

            ಯಲ್ಲಮ್ಮ ಭೀಮಪ್ಪ ಬಂಡಿವಡ್ಡರ ವಯಾ: 35 ಸಾ|| ಶಿಗ್ಗಾವಿ ಇವರಿಗೆ ಸುಮಾರು ವರ್ಷಗಳಿಂದ ಮೈಯಲ್ಲಿ  ಗಾಳಿ ಶಕ ಆದಂತೆ ಆಗಿ ಅರಾಮ ಇರಲಿಲ್ಲಾ ಅವಳನ್ನು ಶಿಗ್ಗಾಂವ ಸರಕಾರಿ ದವಾಖಾನೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ತೊರಿಸಿದ್ದು ಗುಣ ಆಗಿರಿಲಿಲ್ಲಾಅಲ್ಲದೇ ದೇವರಿಗೆ ಸಹ ಕರೆದುಕೊಂಡು ಹೋಗಿ ಬಂದು ಮಾಡಿದ್ದು ಅವಳು  ಒಮ್ಮೊಮ್ಮೆ  ತನಗೆ ತಿಳಿದಾಗ ಎದ್ದು ಬಂದು ಸವಣೂರ ವೃತ್ತದ ಹತ್ತಿರ ಮೆಹಬೂಬ ಸುಬಾನಿ  ರ್ಗಾ ಹತ್ತಿರ ಬಂದು ಕುಳಿತುಕೊಳ್ಳತ್ತಿದ್ದಳು, ಅವಳನ್ನು ಹುಡಕಾಡಿ ಕರೆದುಕೊಂಡು ಹೋಗುತ್ತಿದ್ದರು, ತನಗೆ ಗಾಳಿ ಶಕ  ಬಂದಾಗ ಸುಮ್ಮನ್ನೆ  ಒಬ್ಬಳೆ ಕೂಡ್ರುವುದು ಮಾಡುತ್ತಿದ್ದಳು, ಯಾರೊಂದಿಗೆ ಮಾತನಾಡುತ್ತಿರಲಿಲ್ಲಾ ಸರಿಯಾಗಿ ಊಟ ಸಹ ಮಾಡುತ್ತಿರಲಿಲ್ಲಾ  ಹೀಗಾಗಿ ನಾವೆ ಅವಳನ್ನು ಚೆನ್ನಾಗಿ ನೋಡಿಕೊಳ್ಳವುದು ಅವಳಿಗೆ ಊಟ ಮಾಡುವಂತೆ ಸಹ ಹೇಳಿತ್ತಿದ್ದವುಹೀಗಿರುವಾಗ ದಿನಾಂಕಃ-24/06/2021 ರಂದು ಮುಂಜಾನೆಃ-07-30 ಗಂಟೆಗೆ ಬಹಿರ್ದಸೆಗೆ ಹೋದವಳು ಶಿಗ್ಗಾಂವದ ಸವಣೂರ ರಸ್ತೆ ಬದಿಯಲ್ಲಿ ಇದ್ದ  ಸಣ್ಣಪ್ಪ ಬುಳಕಣ್ಣನವರ ಇವರ ಜಮೀನದಲ್ಲಿ ಬಾವಿ ನೀರಿನಲ್ಲಿ ತನಗೆ ಇದ್ದ ಗಾಳಿ ಶಕದ ಆ ಒಂದು ವೇದನೆಯಲ್ಲಿ ತನ್ನಷ್ಟಕ್ಕೆ ತಾನೆ ಬಿದ್ದು  ಮುಳಗಿ ಮರಣ ಹೊಂದಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆನು ಏನು  ಸಂಶಯ ಇರುವುದಿಲ್ಲಾ ಅಂತಾ ಹನುಮಂತಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 30-06-2021 06:08 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ