ಅಭಿಪ್ರಾಯ / ಸಲಹೆಗಳು

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:113/2021 ಮಹಿಳೆ ಕಾಣೆ.

             ಶ್ರೀಮತಿ ಸುಮಾ ತಂದೆ ಹೊನ್ನಪ್ಪ ಲಮಾಣಿ ವಯಸ್ಸು: 22 ವರ್ಷ, ಜಾತಿ: ಹಿಂದೂ ಲಮಾಣಿ, ಉದ್ಯೋಗ: ಕೂಲಿಕೆಲಸ, ಸಾ: ಅಲ್ಲಿಪುರ ತಾ: ಸವಣೂರ  ಇವರು  ದಿನಾಂಕ 19-05-2021 ರಂದು ಬೆಳಿಗ್ಗೆ 7-00 ಗಂಟೆಯಿಂದ ಮದ್ಯಾಹ್ನ  02-00 ಗಂಟೆಯ ಒಳಗಿನ ಅವದಿಯಲ್ಲಿ ತಮ್ಮ ಮನೆಯಿಂದ  ಹೋದವಳು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಇವಳು 5 ಪೂಟು 2 ಇಂಚು ಎತ್ತರವಾಗಿದ್ದು, ಗೋದಿ ವರ್ಣ, ಸಾದಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಬಣ್ಣದ ಕೂದಲಗಳು, ದುಂಡನೇಯ ಮೂಗು, ಇರುತ್ತದೆ. ನನ್ನ ಮಗಳು ಹೋಗುವಾಗ ಕೆಂಪು ಬಣ್ಣದ ಸೀರೆ ಬಿಳಿ ಬಣ್ಣದ ಜಂಪರ್ ಧರಿಸಿದ್ದು ಅದೆ. ಇವರು ಕನ್ನಡ, ಲಂಬಾಣಿ ಭಾಷೆಯನ್ನು ಮಾತನಾಡುತಾಳೆ .ಇವಳಿಗೆ ಹುಡುಕಿ ಕೊಡುವಂತೆ ಹೊನ್ನಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ : 15/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ಮಲ್ಲಿಕಾರ್ಜನ ರಾಮಪ್ಪ ಹುಚ್ಚಮ್ಮನವರ ಸಾ||ಮೇಡ್ಲೆರಿ  ಈತನು 1 ವರ್ಷದ ಹಿಂದೆ ಸಾಲ ಮಾಡಿ ಬುಲೇರೋ ಗೂಡ್ಸ ಗಾಡಿಯನ್ನು ತೆಗೆದುಕೊಂಡಿದ್ದು, ಗಾಡಿಯನ್ನು ತೆಗೆದುಕೊಂಡಾಗಿನಿಂದಾ ಕರೋನಾ ರೋಗ ಜಾಸ್ತಿಯಾಗಿದ್ದರಿಂದಾ ಗಾಡಿಯನ್ನು ದುಡಿಸಲು ಆಗದೇ ಅದರ ಸಾಲ ಹೆಚ್ಚಾಗಿ ಸಾಲದ ಹಣವನ್ನು ಕಟ್ಟಲು ಆಗದೇ ಇದ್ದುದರಿಂದಾ , ಗಾಡಿಯ ಸಾಲವನ್ನು ಹೇಗೆ ತೀರಿಸುವುದು ಅಂತಾ ಹೆದರಿ ತನ್ನಷ್ಟಕ್ಕೆ ತಾನೇ ದಿನಾಂಕ 22-05-2021 ರಂದು 17-00 ಗಂಟೆಯ ಸುಮಾರಿಗೆ ಎಲ್ಲಿಯೋ ಯಾವುದೋ ವಿಷ ಸೇವನೆ ಮಾಡಿ ಮನೆಗೆ ಬಂದು ವಾಂತಿ ಮಾಡಿಕೊಳ್ಳುತ್ತಿದ್ದವನಿಗೆ ಉಪಚಾರಕ್ಕೆ ರಾಣೆಬೆನ್ನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲ ಮಾಡಿ ಉಪಚಾರ ಕೊಡಿಸಿದ್ದು ಈ ಕಾಲಕ್ಕೆ ಅವರಸಲಹೆ ಪ್ರಕಾರ ಹೆಚ್ಚಿನ ಉಪಚಾರ ಡಾವಣಗೇರಿಗೆ ಹೋಗಲು ತಿಳಿಸಿದ್ದರ ಪ್ರಕಾರ ಡಾವಣಗೇರಿಗೆ ಹೋಗಿ ಅಲ್ಲಿಯು ಸಹಾ ಉಪಚಾರ ಪಡೆದುಕೊಂಡು ಅಡ್ಮಿಟ್ ಆಗಲು ಬೆಡ್ ಇರದೇ ಇದ್ದುದರಿಂದಾ ಡಾವಣಗೇರಿಯಲ್ಲಿ 4-5 ಆಸ್ಪತ್ರೆಗೆ ಹೋಗಿ ವಿಚಾರಣೆ ಮಾಡಿದರು ಸಹಾ ಎಲ್ಲಿಯೂ ಬೆಡ್ ಸಿಗದೇ ಇದ್ದುದರಿಂದಾ ವಾಪಸ್ಸ ಅರೇಮಲ್ಲಾಪುರ ಸರಕಾರಿ ಆಸ್ಪತ್ರೆಗೆ ಬಂದಿದ್ದು ಅವರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಆದರೆ ನಾವು ರಾಣೆಬೆನ್ನೂರ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಅಲ್ಲಿ ಅವನಿಗೆ ಉಪಚಾರ ಕೊಡಿಸುವ ಕಾಲಕ್ಕೆ ಉಪಚಾರ ಫಲಕಾರಿಯಾಗಧೇ ದಿನಾಂಕ:23-05-2021 ರಂದು 22-3 ಗಂಟೆಗೆ ಮೃತ ಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ : 15/2021 ವ್ಯಕ್ತಿ ಸಾವು.

            ರವೀಂದ್ರ ನಾಗಪ್ಪ ಬೇನ್ನೂರ ವಯಾ: 39 ಸಾ|| ಅರೆಮಲ್ಲಾಪೂರ ಇವರು ರಾಣೇಬೆನ್ನೂರು ಶಹರದ ಕೋರ್ಟನಲ್ಲಿ ಜವಾನ ಅಂತಾ ಕೆಲಸ ಮಾಡಿಕೊಂಡಿದ್ದು, ಸದರಿಯವನಿಗೆ ದಿನಾಂಕ; 23/05/2021 ರಂದು ಸಂಜೆಯಿಂದ ದಿನಾಂಕ; 24/05/2021 ರಂದು ಬೆಳಗ್ಗೆಯವರೆಗೆ ಕೋರ್ಟ ಕಾಯುವ ಕರ್ತವ್ಯವಿದ್ದು ದಿನಾಂಕ; 23/05/2021 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಊಟ ಮಾಡಿ ಒಬ್ಬನೇ 2 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಣೇಬೆನ್ನೂರು ರವರ ನ್ಯಾಯಾಲಯದ ಆಫೀಸ್ ರೂಮದಲ್ಲಿ ಮಲಗಿಕೊಂಡಿದ್ದವನು ತಾನು ಮಲಗಿದ್ದ ಟೇಬಲ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೋ? ಅಥವಾ ಹೃದಯಾಘಾತದಿಂದ ಮೃತಪಟ್ಟಿರುತ್ತಾನೋ ಅಂತಾ ಅವನ ಸಾವಿನ ನಿಖರವಾದ ಕಾರಣ ತಿಳಿದು ಬರುತ್ತಿಲ್ಲ. ಅವನ ಸಾವಿನಲ್ಲಿ ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಚಂದ್ರಗೌಡ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ : 24/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ಹನುಮಂತಪ್ಪ ತಂದೆ ತಿರಕಪ್ಪ ನಾಯ್ಕರ್ ವಯಾ-48 ವರ್ಷ. ಜಾತಿ-ಹಿಂದೂ-ವಾಲ್ಮೀಕಿ. ಉದ್ಯೋಗ-ಮನೆಕೆಲಸ. ಸಾ-ಕದರಮಂಡಲಗಿ.ತಾ-ಬ್ಯಾಡಗಿ ಇವರಿಗೆ ಈಗ 03 ವರ್ಷಗಳ ಹಿಂದೆ ಸೈಕಲ್ ಮೋಟಾರ್ ಅಪಘಾತದಲ್ಲಿ ಬಲಕಾಲಿಗೆ ಗಾಯ-ಪೆಟ್ಟುಗಳು ಆಗಿದ್ದರಿಂದ ಈಗ 02 ವರ್ಷಗಳಿಂದ ಪುನಃ ಕಾಲಿಗೆ ನೋವು ಬರುತ್ತಿದ್ದು ಕಾಲಿನ ನೋವಿನ ಬಾಧೆಯನ್ನು ತಾಳಲಾರದೇ ಮಾನಸಿಕ ಮಾಡಿಕೊಂಡಿ ಕೊರಗುತ್ತಿದ್ದನು .ಈಗ ಕೋವಿಡ್ ಇರುವದರಿಂದ ಆಸ್ಪತ್ರೆಗೆ ಹೋಗಲು ಆಗದೇ ಇರುವದರಿಂದ ಮೃತನು ಕಾಲಿನ ನೋವಿನ ಬಗ್ಗೆ ಚಿಂತೆ ಮಾಡುತ್ತಾ ಅದೇ ಚಿಂತೆಯಲ್ಲಿ ದಿನಾಂಕ:21-05-2021 ರಂದು ಮದ್ಯಾಹ್ನ 03-00 ಘಂಟೆಗೆ ತನ್ನಷ್ಟಕ್ಕೆ ತಾನೇ ಎಲ್ಲಿಯೋ ಯಾವುದೋ ವಿಷವನ್ನು ಕುಡಿದು ಮನೆಗೆ ಬಂದು ಒದ್ದಾಡುತ್ತಿದ್ದಾಗ ಉಪಚಾರಕ್ಕೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಕೋವಿಡ್ ಇದ್ದು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದ್ದರಿಂದ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಬೇಡ್ ಇರುವದಿಲ್ಲ ಅಂತಾ ಹೇಳಿದ್ದರಿಂದ ಪುನಃ ಕದರಮಂಡಲಗಿ ಗ್ರಾಮಕ್ಕೆ  ಕರೆದುಕೊಂಡು ಬಂದು ಮನೆಯಲ್ಲಿ ಉಪಚಾರ ಮಾಡುತ್ತಿದ್ದಾಗ ದಿನಾಂಕ:23-05-2021 ರಂದು ರಾತ್ರಿ 10-00 ಘಂಟೆಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 26-05-2021 05:22 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ