ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:64/2021 ಕಲಂ: 323, 498A, 504, 506, 34 IPC.

               ನಿವೇದಿತಾ ಗುಡಿಗೇರಿ ಸಾ|| ಮಾಹೂರ ಇವರು ದಿನಾಂಕ: 09/04/2018 ರಂದು ಸವಣೂರ ತಾಲೂಕ ಪೈಕಿ ಮಾಹೂರ  ಗ್ರಾಮದ ರುದ್ರಮುನಿ ಗುಡಿಗೇರಿ ಇವರೊಂದಿಗೆ ಮದುವೆಯಾಗಿದ್ದು ಮದುವೆಯಾದ ಬಳಿಕೆ 1 ವರ್ಷದವರೆಗೂ ನಿವೇದಿತಾ ಇವರನ್ನು  ಚೆನ್ನಾಗಿ ನೋಡಿಕೊಂಡಿದ್ದು ಆ ನಂತರ ದಿನಾಂಕಃ04/02/2019 ರಿಂದ ಸೀಮಂತ ಕಾರ್ಯಾ ವೇಳೆಗೆ ನಿನ್ನ ತವರ ನೆಯಲ್ಲಿ ಹೆಣ್ಣು ಆಸ್ತಿ ಅದೆ ತೆಗೆದುಕೊಂಡು ಬಾ ನಾವು ಸತ್ತ ಮೇಲೆ ತರುತಿಯೇನು  ನಾವು ಹೇಳದಂಗ ಕೇಳು ಇಲ್ಲವಾದರೆ ತಾಳಿ ತೆಗೆದುಕೊಡು ಅಂತಾ ಕಿರುಕುಳ ಕೊಡುತ್ತಾ ಬಂದು ಬಾಯಿಗೆ ಬಂದಂತೆ ಬೋಸಡಿ ಹಾದರಗಿತ್ತಿ ಅರಿಸಿಟ್ಟ ಧರಿದ್ರ  ನಮಗೆ ಇದ್ಯಾಗ ಕುಂತಿದಿ ಅಂತಾ ಹಲ್ಕಟ ಬೇದಾಡುತ್ತಾ ಬಂದು ದಿನಾಂಕಃ06/04/2019 ರಂದು ಜಡಿ ಹಿಡಿದು ಎಳೆದಾಡಿ ಕೈಯಿಂದ ಹೊಡೆ, ಅವಳ ಮೇಲೆ ಸಂಶಯ ಮಾಡುತ್ತಾ ಬಂದು ಹೋಡಿಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:66/2021 ಕಲಂ: 304, 299 IPC.

               ಶೇಖವ್ವ ಸುಭಾಶ ಇಳಗೇರ ಸಾ|| ಮಾರನಬೀಡಾ ಇವರಿಗೆ ಸಂಬಂದಿಸಿದ ಹೊಂಬಳಿ ಗ್ರಾಮದ ರಿ..ನಂ 2 ನೇದರ ಜಮೀನಿನ ಬದುವಿನಲ್ಲಿ ಕಳೆದ ಎರಡು ತಿಂಗಳುಗಳಿಂದ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದು ಈ ಲೈನಗಳನ್ನು ಸರಿ ಮಾಡುವಂತೆ ಶಾಖಾಧಿಕಾರಿಗಳು ಬೆಳಗಾಲಪೇಟೆ ಮತ್ತು ಕ್ಯಾಂಪ ಲೈನಮಾನ ಬೆಳಗಾಲಪೇಟೆ ಶಾಖೆ ಇವರಿಗೆ ಹಲವು ಬಾರಿ ಮೌಖಿಕವಾಗಿ ತಿಳಿಸಿದರು ಸಹ ಹರಿದು ಬಿದ್ದ ವಿದ್ಯುತ್ ಲೈನನ್ನ ಸರಿ ಪಡಿಸದೆ ನಿರ್ಲಕ್ಷವನ್ನು ವಹಿಸಿದ್ದು ಅಲ್ಲದೆ ಶೇಖವ್ವ ಇವರ ಜಮೀನದಲ್ಲಿ ಹರಿದು ಬಿದ್ದ ವಿದ್ಯುತ್ ಲೈನಗೆ ಬೇರೆ ಟಿ.ಸಿ ಯಿಂದ ವಿದ್ಯುತ್ ಸಂಪರ್ಕವನ್ನು ಮಾಡಿ ನಿರ್ಲಕ್ಷತನ ತೋರಿದ್ದು ಅಲ್ಲದೆ ಮಹೇಶ ಇವನು ದಿನಾಂಕ : 24-04-2021 ರಂದು ಮುಂಜಾನೆ 10-00 ಘಂಟೆ ಸುಮಾರಿಗೆ ತನ್ನ ಮೆಣಸಿನ ಬೆಳೆ ಇರುವ ಜಮೀನದಲ್ಲಿ ಎಡೆ ಕುಂಟಿ ಹೊಡೆಯುತ್ತಿರುವಾಗ ಹರಿದು ಬಿದ್ದ ವಿದ್ಯುತ್ ಲೈನ ಇವನ ಎಡಗೈಗೆ ತಾಗಿ ಚಿಕೀತ್ಸೆಗಾಗಿ ನರೇಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹೆಚ್ಚಿನ ಚಿಕೀತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ವಿ಼ಷ ಸೇವಿಸಿ  ವ್ಯಕ್ತಿ ಆತ್ಮಹತ್ಯೆ .

                 ಅಖಿಲೇಶ ತಂದೆ ಪರಸಪ್ಪ ಲಮಾಣಿ. ವಯಾಃ 21 ವರ್ಷ. ಜಾತಿ; ಹಿಂದೂ ಲಮಾಣಿ, ಉದ್ಯೋಗ; ಕೂಲಿ ಕೆಲಸ. ಸಾಃ ಮಾಳಾಪೂರ. ತಾಃ ಹಾನಗಲ್ಲ. ಇತನು ಕಳೆದ 3 ತಿಂಗಳ ಹಿಂದೆ ಯಾವುದೋ ಸ್ಪರ್ದಾತ್ಮಕ ಪರೀಕ್ಷೆಯನ್ನು ಬರೆದಿದ್ದು ಅದರಲ್ಲಿ ತಾನು ನೇಮಕಾತಿ ಆಗುವುದಿಲ್ಲ ಅಂತಾ ಅಂದುಕೊಂಡು ದಿನಾಂಕ: 22-04-2021 ರಂದು ರಾತ್ರಿ 11-00 ಘಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮಲಗಿದ ತಂದೆಯನ್ನು ಎಬ್ಬಿಸಿ ತಾನು ಮನೆಯಲ್ಲಿ ಕ್ರೀಮಿನಾಶಕ ಔಷಧಿಯನ್ನು ಸೇವನೆ ಮಾಡಿದ್ದೇನೆ ಅಂತಾ ತಿಳಿಸಿದ್ದು ಆಗ ತನ್ನ ಸಂಬಂಧಿಕರನ್ನು ಕರೆದುಕೊಂಡು ಚಿಕಿತ್ಸೆಗಾಗಿ ತಿಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅದೆ ದಿವಸ ಹಾವೇರಿ ಜಿಲ್ಲಾ ಆಸ್ಪತ್ರೆಗೆ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಿನಾಂಕ: 23-04-2021 ರಂದು ಮುಂಜಾನೆ 06-00 ಘಂಟೆ ಸುಮಾರಿಗೆ ದಾಖಲಿಸಿ ಉಪಚಾರ ಕೊಡಿಸುತ್ತಿರುವಾಗ ಉಪಚಾರ ಫಲಿಸದೆ ದಿನಾಂಕ: 24-04-2021 ರಂದು ಮುಂಜಾನೆ 04-00 ಘಂಟೆಗೆ ಮೃತ ಪಟ್ಟಿದ್ದು ಮೃತನ ಮರಣದಲ್ಲಿ ಯಾವುದೇ ಸಂಶಯ ಯಾರ ಅಂತಾ  ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 26-04-2021 08:08 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ