ಅಭಿಪ್ರಾಯ / ಸಲಹೆಗಳು

ಹಿರೆಕೇರೂರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                  ಶಿವಪ್ಪ ತಂದೆ ದ್ಯಾವಪ್ಪ ಮರಿಗೌಡ್ರ ವಯಾ: 78 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ಮನೆ ಕೆಲಸ ಸಾ:  ಬುರಡಿಕಟ್ಟಿ ತಾ: ಹಿರೇಕೆರೂರ ಈತನು ಈತ್ತೀಚಿಗೆ ಮದ್ಯ ಸೇವನೆ ಮಾಡುವ ಚಟಕ್ಕೆ ಅಂಟಿಕೊಂಡು ಅದನ್ನು ಬಿಡುವುದು ಆಗದೇ ಬೇಸರ ಮಾಡಿಕೊಂಡು ದಿನಾಂಕ:23-08-2021 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದಾಗ ತನ್ನಷ್ಟಕ್ಕೆ ತಾನು ಯಾವುದೋ ವಿಷ ಸೇವನೆ ಮಾಡಿ ಒದ್ದಾಡುತ್ತಿದ್ದವನಿಗೆ ಉಪಚಾರಕ್ಕೆ ಹಿರೇಕೆರೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದಾಗ ಉಪಚಾರದಿಂದ ಚೇತರಿಸಿಕೊಳ್ಳದೇ ದಿ:23-08-2021 ರಂದು ಸಂಜೆ 5-15 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಮೃತನ ಸಾವಿನಲ್ಲಿ ಯಾವುದೇ ರೀತಿಯ ಸಂಶೆಯ ಇರುವುದಿಲ್ಲ ಅಂತಾ ಯುವರಾಜ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:22/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮ ಹತ್ಯೆ.

                  ಶಂಕರ್‌ ಮಂಜಪ್ಪ ಕುರುವತ್ತಿ ವಯಾ:28 ಸಾ|| ಯತ್ತಿನಹಳ್ಳಿ ಇತನು ತನ್ನ ಮನೆತನದ ಸಮಸ್ಯಯ ಸಲುವಾಗಿಯೋ ಅಥವಾ ವಯಕ್ತಿಕ ವ್ಯವಹಾರಗಳ ಸಲುವಾಗಿಯೋ ಏನೋ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ: 22-08-2021 ರಂದು ಮುಂಜಾನೆ 11-30 ಗಂಟೆಯಿಂದ ದಿನಾಂಕ: 23-08-2021 ರ ಮುಂಜಾನೆ 10-00 ಗಂಟೆಯ ನಡುವಿನ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅವನ ಸಾವಿನಲ್ಲಿ ಯಾರ ಮೇಲು ಸಂಶಯ ವಗೈರೆ ಇರುವುದಿಲ್ಲ ಅಂತಾ ಶಿವಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:22/2021 ಅನಾಮಧೇಯ ವ್ಯಕ್ತಿ ಸಾವು.

                     ದಿನಾಂಕ; 23-08-2021 ರಂದು ಮದ್ಯಾಹ್ನ 3-45 ಗಂಟೆಗೆ ಪರಮೇಶಪ್ಪ ತಂದೆ ಬಸವರಾಜಪ್ಪ ಚೌಟಿ ಸಾ; ಚಿಕ್ಕೇರೂರ ಯಲ್ಲಾಪುರ ಇವರು ಠಾಣೆಗೆ ಹಾಜರಾಗಿ ತಮ್ಮ ವರದಿಯನ್ನು ಕೊಟ್ಟಿದ್ದರಲ್ಲಿ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅನಾಮದೇಯ ಗಂಡಸು ತನಗಿದ್ದ ಯಾವುದೋ ಖಾಯಿಲೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ದಿನಾಂಕ; 23-08-2021 ರಂದು ಮದ್ಯಾಹ್ನ 3-00 ಗಂಟೆಗಿಂತ ಮೊದಲು ಚಿಕ್ಕೇರೂರ ಗ್ರಾಮದ ಶೆಟ್ಟರ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಆತನು ಯಾರು? ಎಲ್ಲಿಯವನು? ಅವನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ ಅಂತಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ರಿತ್ಯ ಕ್ರಮ ಜರುಗಿಸಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:24/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ .

                     ಸುಮನ ತಂದೆ ಕನ್ನಪ್ಪ ಹನಕನಹಳ್ಳಿ. ವಯಾ:20 ವರ್ಷ ಜಾತಿ ಹಿಂದೂ ಕುರುಬರ. ಉದ್ಯೋಗ : ಶೇತ್ಕಿ ಕೆಲಸ ಸಾ. ನಿಸ್ಸೀಮಆಲದಕಟ್ಟಿ. ತಾ ಹಾನಗಲ್.ಇತನು ತನ್ನ ತಂದೆಗೆ 2019 ನೇ ಇಸ್ವೀಯಲ್ಲಿ ಬೆನ್ನೂ ನೋವಿನ ಸರ್ಜರಿ ಆದಾಗಿನಿಂದ ಮನೆಯ ಖರ್ಚುವೆಚ್ಚಗಳನ್ನು ಹಾಗೂ ಶೇತ್ಕಿ ಕೆಲಸವನ್ನು ತಾನೇ ಮಾಢಿಕೊಂಡು ಹೋಗುತ್ತಿದ್ದನು. ಮನೆಯ ಖರ್ಚುವೆಚ್ಚದ ಸಲುವಾಗಿ ಹಾಗೂ ವ್ಯವಸಾಯದ ಸಲುವಾಗಿ ತನ್ನ ತಂದೆಯ ಹೆಸರಿನಲ್ಲಿ ರಿ.ಸ.ನಂ: 127/2 ನೇದ್ದರಲ್ಲಿ 5 ಎಕರೆ 4 ಗುಂಟೆ ಜಮೀನಿನ ಮೇಲೆ ಆಲದಕಟ್ಟಿ ಕೆನರಾ ಬ್ಯಾಂಕಿನಲ್ಲಿ 1.50.000/- ರೂ ಸಾಲ. ಹಾಗೂ ಬಜಾಜ್ ಕಂಪನಿಯಲ್ಲಿ ಮೋಟರ್ ಸೈಕಲ್ ಮೇಲೆ 40.000/- ರೂ ಸಾಲ ಹಾಗೂ ಹಾವೇರಿ ಎಲ್ ಅಂಡ್ ಟಿ ಪೈನಾನ್ಸ್ನಲ್ಲಿ 5.00.000/- ರೂ ಟ್ಯಾಕ್ಟರ್ ಸಾಲವನ್ನು ಪಡೆದುಕೊಂಡಿದ್ದು ಇತ್ತು. ಆದರೆ ಅತೀಯಾದ ಮಳೆಯಿದಾಗಿ ಬೆಳೆ ಲುಕ್ಸಾನು ಆಗಿದ್ದರಿಂದ ಮಾಡಿದ ಸಾಲವನ್ನು ತೀರಿಸುವುದು ಹೇಗೆ ಅಂತಾ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಬೇಜಾರ ಮಾಡಿಕೊಂಡು ಯಾವುದೋ ಕ್ರೀಮಿನಾಶಕ ಔಷಧಿಯನ್ನು ಸೇವನೆ ಮಾಡಿದ್ದು ಕೂಡಲೇ ಉಪಚಾರಕ್ಕಾಗಿ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ, ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಯಾರಮೇಲು ಇರುವುದಿಲ್ಲ ಅಂತಾ ಮಾರುತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 30-08-2021 06:50 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ