ಅಭಿಪ್ರಾಯ / ಸಲಹೆಗಳು

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ಮಹಿಳೆ ಕಾಣೆ.

            ಕವಿತಾ ತಂದೆ ಬುಜಬಲೆಪ್ಪ ಹೊಸರಾಯಪ್ಪನವರ ವಯಾ 26 ವರ್ಷ ಸಾಃ ಚಿನ್ನಿಕಟ್ಟಿ ಇವಳು ದಿನಾಂಕಃ 21-06-2021 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ, ತನಗೆ ಆರಾಮ ಇಲ್ಲದ್ದರಿಂದ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ಅಂತಾ  ಚಿನ್ನಿಕಟ್ಟಿ ಗ್ರಾಮದ ಮನೆಯಿಂದ ಹೋದವಳು, ವಾಪಸ ಮನೆಗೆ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಕವಿತಾ ಇವರ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು  ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬಂಕಾಪೂರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ಹಾವು ಕಡಿತದಿಂದ ವ್ಯಕ್ತಿ ಸಾವು.

            ನಿಂಗನಗೌಡ ತಂದೆ ಲೋಕನಗೌಡ ಪಾಟೀಲ ವಯಾ: 58 ವರ್ಷ ಜ್ಯಾತಿ: ಹಿಂದೂ ವಾಲ್ಮೀಕಿ ಉದ್ಯೊಗ: ಶೇತ್ಕಿ ಸಾ: ಮಂಚಿನಕೊಪ್ಪ ಇವರಿಗೆ ದಿನಾಂಕ: 23-06-2021 ಮುಂಜಾನೆ 11.30 ಗಂಟೆ ನಮ್ಮ ಜಮೀನದಲ್ಲಿ ಹಾವು ಕಡಿದಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸುತ್ತಿದ್ದಾಗ ಉಪಚಾರ ಫಲಿಸದೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:19/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ನೇಹರು ಚನ್ನಬಸಪ್ಪ ತವರಗುಂದಿ ವಯಾ: 60 ಸಾ|| ಅರೆಮಲ್ಲಾಪುರ ಇವರು ಒಕ್ಕಲುತನ ಮಾಡುತ್ತಾ ಉಪಜೀವನ ಸಾಗಿಸುತ್ತಿದ್ದು ಒಕ್ಕಲುತನದ ಹಾಗೂ ಮನೆತನದ ಉದ್ದೇಶಕ್ಕೆ ಸಾಲವನ್ನು ಮಾಡಿದ್ದು ಅದನ್ನು ತೀರಿಸುವದು ಆಗಲಿಲ್ಲ ಅಂತಾ ಜೀವನದಲ್ಲಿ ಜಿಗುಪ್ಸೆಹೊಂದಿ ದಿ: 23-06-2021 ರಂದು 18-00 ಗಂಟೆಯಿಂದ 19-00 ಗಂಟೆ ಮಧ್ಯದಲ್ಲಿ ಅರೇಮಲ್ಲಾಪುರ ಗ್ರಾಮದ ಕೆರೆ ಬಾಜೂ ಇರುವ ಸರ್ಕಾರಿ ಅರಣ್ಯ ಪ್ರದೇಶದಲ್ಲಿರುವ ನೀಲಗಿರಿ ಗಿಡಕ್ಕೆ ಲುಂಗಿ (ಬಟ್ಟೆ)ಯನ್ನು ಕಟ್ಟಿಕೊಂಡು ನೇಣುಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 30-06-2021 06:07 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ