ಅಭಿಪ್ರಾಯ / ಸಲಹೆಗಳು

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ವ್ಯಕ್ತಿ ಸಾವು.

               ವಿಜಯ ತಂದೆ ಸುಖದೇವ ಕಾಂಬಳೆ ವಯಾ- 36 ವರ್ಷ ಜಾತಿ: ಹಿಂದೂ ಆದಿ ಕರ್ನಾಟಕ, ಉದ್ಯೋಗ: ವಿದ್ಯಾಭ್ಯಾಸ (ಪಿ ಎಚ್ ಡಿ), ಸಾ: ಸೋಲಾಪುರ ತಾ: ಹುಕ್ಕೇರಿ ಜಿ- ಬೆಳಗಾವಿ ಹಾಲಿ- .ಪಿ.ಎಮ್. ಸಿ. ಸವಣೂರ ಇವರು ಸವಣೂರದ ಎ.ಪಿ.ಎಮ್. ಸಿ. ಯಲ್ಲಿ ಅಕೌಂಟಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಇವರು ಕಳೆದ 2 ವರ್ಷಗಳಿಂದ ವಿಪರೀತ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಇರುತ್ತದೆ. ಅವರ ಮನೆಯಲ್ಲಿ ಅವನಿಗೆ ಕುಡಿಯುವುದನ್ನು ಬಿಡು, ಚೆನ್ನಾಗಿ ನೌಕರಿ ಮಾಡಿಕೊಂಡು ಹೋಗು ಅಂತಾ ಸಾಕಷ್ಟು ಸಲ ಹೇಳಿದ್ದರು ಅವನು ಕೇಳಿರಲಿಲ್ಲ. ಹೀಗಿರುವಾಗ ದಿನಾಂಕ- 22-05-2021 ರ ರಾತ್ರಿ 8-00 ಗಂಟೆ ಸುಮಾರಿಗೆ ವಿಜಯ ಇವನು ಅವರ ಅಕ್ಕ ಸಾದನಾ ಇವರಿಗೆ ಪೋನ್ ಮಾಡಿ ಮಾತನಾಡಿದ್ದು, ಲಾಕಡೌನ ಮುಗಿದ ಮೇಲೆ ನಾನು ಊರಿಗೆ ಬರುತ್ತೇನೆ ಅಂತಾ ಹೇಳಿದ್ದನು. ನಂತರ ದಿನಾಂಕ- 23-05-2021 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಎ.ಪಿ.ಎಮ್.ಸಿ. ಕಾರ್ಯದರ್ಶಿರವರು ಪೋನ್ ಮಾಡಿ ನಿಮ್ಮ ಅಣ್ಣ ವಿಜಯ ಇವರು ಸವಣೂರದ ಎ.ಪಿ.ಎಮ್.ಸಿ. ಯಾರ್ಡದಲ್ಲಿರುವ ರೈತ ಭವನದ ಎದುರಿಗೆ ಮೃತಪಟ್ಟಿರುತ್ತಾನೆ ಅಂತಾ ಹೇಳಿದರು. ನಂತರ ಅವರು ಸವಣೂರಗೆ ಬಂದು ಶವವನ್ನು ನೋಡಿ ಶವದ ಎಡಗೈ ಮೇಲೆ ತೆರಚಿದ ಗಾಯ ಮತ್ತು ಬಲಗೈ ಮೇಲೆ ಅಲ್ಲಲ್ಲಿ ಕಪ್ಪಾದ ಕಳೆಗಳನ್ನು ನೋಡಿ ಅವರ ಸಾವಿನ ಬಗ್ಗೆ ಸಂಶಯ ಇದೆ ಎಂದು ರಾಜೇಶ ವರದಿ ನೀಡಿದ್ದು ಠಾಣೆಯಲ್ಲಿ  ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 26-05-2021 05:20 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ