ಅಭಿಪ್ರಾಯ / ಸಲಹೆಗಳು

 ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:76/2021 ಕಲಂ: 379 IPC.

               ಅಶೋಕ ಚನ್ನಪ್ಪ ಅರಿಕಟ್ಟಿ ಸಾ|| ಬಸರಿಹಳ್ಳಿ ಇವರು ದಿನಾಂಕಃ10-04-2021 ರಂದು 16-00 ಗಂಟೆಯಿಂದ 16-30 ಗಂಟೆಯ ಮದ್ಯದ ಅವಧಿಯಲ್ಲಿ ದೇವರಗುಡ್ಡ ಗ್ರಾಮದ ರಣದಮ್ಮನ ದೇವಸ್ಥಾನದ ಹತ್ತಿರ ಇಟ್ಟಿದ್ದ ಸುಮಾರು 50,000/- ಬೆಲೆ ಬಾಳುವ ಸಿ.ಟಿ. 100 ಮೋಟರ ಸೈಕಲ ನಂಬರ ಕೆಎ-68/ಜೆ-4832 ಅದರ ಇಂಜನ್ ನಂಬರ DUYWJD88316 ಚೆಸ್ಸಿ ನಂಬರ MD2A18AY5JWD79299 ನೇದ್ದನ್ನು ಯಾರು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:28/2021 ಮಹಿಳೆ ಕಾಣೆ .

               ವಿದ್ಯಾಶ್ರೀ ಗಂಡ ವೀರಣ್ಣ ಮಲ್ಲಾಪುರ ವಯಾ: 22 ವರ್ಷ ಸಾ|| ಕಾಕೊಳ ಇವಳು ದಿನಾಂಕ;23-04-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ;24-04-2021 ರ ಬೆಳಗಿನ 01-00 ಗಂಟೆ ನಡುವಿನ ಅವಧಿಯಲ್ಲಿ. ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ಮನೆಯಲ್ಲಿ ಯಾರಿಗೂ ಹೇಳದೆ ಮನೆಯಿಂದ ಹೋದವಳು ಮನೆಗೆ ಮರಳಿ ಬಾರದೇ ಎಲ್ಲಿಯೊ ಕಾಣೆಯಾಗಿ ಹೋದ ಬಗ್ಗೆ ಖಾತ್ರಿಯಾಗಿದ್ದರಿಂದ, ಕಾಣೆಯಾದ ತಮ್ಮ ಮಗಳನ್ನು ಹುಡಿಕಿಕೊಡಬೇಕು ಅಂತಾ ವೀರಣ್ಣ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು  ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:17/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ .

                 ಕರಿಯಪ್ಪ ಉಜ್ಜಪ್ಪ ಗುಂಡಣ್ಣನವರ ವಯಾ-34 ವರ್ಷ. ಜಾತಿ-ಹಿಂದೂ-ಕುರುಬ. ಉದ್ಯೋಗ-ವ್ಯವಸಾಯಸಾ-ಅಳಲಗೇರಿ. ತಾ-ಬ್ಯಾಡಗಿ  ಇವರು ತಮ್ಮ ತಾಯಿಯ ಹೆಸರಿನಲ್ಲಿ ಇರುವ ಅಳಗೇರಿ ಗ್ರಾಮದಲ್ಲಿರುವ  04-00 ಎಕರೆ ಜಮೀನಿಗೆ ಹಾಗೂ ಜಮೀನಿನ ಬಾಜು ಇರುವ ಮೋಟೆಬೆನ್ನೂರ ಗ್ರಾಮದ 04-00 ಎಕರೆ ಜಮೀನನ್ನು ಲಾವಣಿ ಹಾಕಿಸಿಕೊಂಡಿದ್ದು ಈ ಜಮೀನುಗಳಿಗೆ ಬಿತ್ತನೆ ಮಾಡುವ ಸಂಬಂಧ ಹೆಂಡತಿಯ ಹೆಸರಿನಲ್ಲಿ  ರತ್ನಾಕರ ಬ್ಯಾಂಕ್ ರಾಣೇಬೆನ್ನೂರಿನಲ್ಲಿ 40,000/- ರೂ, ಧರ್ಮಸ್ಥಳ ಸಂಘದಲ್ಲಿ 30,000/- ರೂ, ಬಿ.ಎಸ್.ಎಸ್, ಪೈನಾನ್ಸ್ ಹಾವೇರಿಯಲ್ಲಿ 50,000/- ರೂ, ನವಚೇತನ ಬ್ಯಾಡಗಿಯಲ್ಲಿ 30,000/- ರೂ, ಹಾಗೂ ಗ್ರಾಮೀಣ ಕೂಟದಲ್ಲಿ 70,000 /- ರೂ ಸಾಲವನ್ನು ತೆಗೆದುಕೊಂಡಿದ್ದು ಅಲ್ಲದೇ ಅಲ್ಲಲ್ಲಿ ಕೈಗಡ ಅಂತಾ 2,00,000/- ರೂ ಸಾಲವನ್ನು  ಮಾಡಿದ್ದು ಈಗ 2-3 ವರ್ಷಗಳ ಹಿಂದೆ ಮಳೆಯೂ ಬಾರದೇ ಈ ವರ್ಷ ಅತೀಯಾದ ಮಳೆಯಾಗಿದ್ದರಿಂದ  ಜಮೀನಿನಲ್ಲಿ ಬಿತ್ತಿದ ಪೀಕು ಬಾರದೇ ಮತ್ತು ಬೆಳೆದ ಪೀಕು ಮಳೆಗೆ ಲುಕ್ಷಾನ್ ಆಗಿದ್ದರಿಂದ ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸುವದು ಹೇಗೆ ಅಂತಾ ಮಾನಸಿಕ ಮಾಡಿಕೊಂಡಿದ್ದು ಈ ವಿಷಯದ ಬಗ್ಗೆ ಮನೆಯವರು ಮತ್ತು ಸಂಬಂಧಿಕರು ಬುದ್ಧಿವಾದ ಹೇಳಿದರೂ ಸಹ ಮಾಡಿದ ಸಾಲದ ಬಗ್ಗೆ ಚಿಂತೆ ಮಾಡುತ್ತಾ ಬಂದಿದ್ದು ಅದೇ ಚಿಂತೆಯಲ್ಲಿ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೇ ದಿನಾಂಕ: ದಿನಾಂಕ:-22-04-2021 ರಂದು ರಾತ್ರಿ 08-30 ಘಂಟೆಯಿಂದ ದಿನಾಂಕ:23-04-2021 ರಂದು ಮುಂಜಾನೆ 08-00 ಘಂಟೆ ನಡುವಿನ ಅವಧಿಯಲ್ಲಿ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ ವಿನಃ ಅವನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 26-04-2021 08:05 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ