ಅಭಿಪ್ರಾಯ / ಸಲಹೆಗಳು

ಹಾವೇರಿ ಸಂಚಾರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:09/2021 ಕಲಂ: 279, 337, 304(A) IPC. 

              ದಿನಾಂಕ 21-02-2021   ರಂದು ಸಂಗಮೇಶ ಕೆಂಚಣ್ಣನವರ ಸಾ:ನಾಗನೂರ ಇತನು ತನ್ನ ಮೋಟಾರ ಸೈಕಲ್ ನಂ.ಕೆಎ.21/J.6982. ನೇದ್ದನ್ನು ಹಳೆ ಪಿಬಿ ರಸ್ತೆಯ ಮೇಲೆ ಆರ್‌‌ಟಿಓ ಆಫೀಸ್ ಕಡೆಯಿಂದ ಹಾವೇರಿ ಶಹರದ ಕಡೆಗೆ ಬಹಳ ಜೋರಿನಿಂದ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ಹಳೆ ಪಿಬಿ ರಸ್ತೆಯನ್ನು ದಾಟುತ್ತಿದ್ದ ನಿಂಗಪ್ಪ ತಂದೆ ಮಲ್ಲೇಶಪ್ಪ ಕೊಪ್ಪದ ವಯಾ ೩೩ ವರ್ಷ ಸಾಃ ಸವಣೂರ ಹಾಲಿಃ ಹಾವೇರಿ ಶಿವಾಜಿನಗರ ಇವರಿಗೆ ಅಪಘಾತಪಡಿಸಿ ರಸ್ತೆಯ ಮೇಲೆ ಕೆಡವಿ ಅವರಿಗೆ ತೆಲೆಗೆ ಮುಖಕ್ಕೆ ಹಾಗೂ ಇತರೆ ಕಡೆಗೆ ಗಾಯ ದುಃಖಾಪತ್ ಪಡಿಸಿದ್ದಲ್ಲದೆ ತಾನೂ ಕೂಡ ಮೋಟಾರ ಸೈಕಲ್ ಹಾಕಿಕೊಂಡು ರಸ್ತೆಯ ಮೇಲೆ ಬಿದ್ದು ತನಗೂ ತೆಲೆಗೆ ಹಾಗೂ ಮುಖಕ್ಕೆ ಕೈ ಕಾಲುಗಳಿಗೆ ಗಾಯ ಮತ್ತು ದುಃಖಾಪತ್ ಪಡಸಿಕೊಂಡಿದ್ದು ಇಬ್ಬರಿಗೂ ಕೂಡಲೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಕೊಡಸಿ ಇಲ್ಲಿಯೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕೆ ಇಬ್ಬರಿಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ್ ಮಾಡಿದ್ದು ಇಬ್ಬರು ಕಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಪಲಿಸಿದೆ ಒಬ್ಬ ಗಾಯಾಳು ಸಂಗಮೇಶ ಬಸಪ್ಪ ಕೆಂಚಣ್ಣನವರ ವಯಾ 28 ವರ್ಷ ಸಾಃ ನಾಗನೂರ ಇವರು ದಿಃ 23-02-2021ರಂದು ಮುಂಜಾನೆ 6-15 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:10/2021 ಮಹಿಳೆ ಕಾಣೆ

              ಶ್ರೀಮತಿ ರಂಜಿತಾ ಗಂಡ ಮಂಜುನಾಥ ಗುಮಕಾರ, ವಯಾ: 23 ವರ್ಷ ಇವಳು ವರದಿಗಾರರ ಮನೆಯಲ್ಲಿ ದಿನಾಂಕ: 17-02-2021 ರಂದು ರಾತ್ರಿ ಊಟ ಮಾಡಿ ಮಂಜುನಾಥ ತನ್ನ ಹೆಂಡತಿ ಹಾಗೂ ಮಗನ ಜೊತೆಗೆ ಮಲಗಿಕೊಂಡಿದ್ದು ದಿನಾಂಕ: 18-02-2021 ರಂದು ಬೆಳಗಿನ ಜಾವ 5-00 ಗಂಟೆ ಸುಮಾರಿಗೆ ಮಂಜುನಾಥಗೆ ಎಚ್ಚರವಾಗಿದ್ದು ಪಕ್ಕದಲ್ಲಿ ಮಲಗಿದ್ದ ಹೆಂಡತಿ ರಂಜಿತಾ ಹಾಗೂ ಒಂದು ತಿಂಗಳ ಗಂಡು ಮಗು ಕಾಣಲಿಲ್ಲ. ಕಾಣೆಯಾದವರನ್ನು ಈವರಗೆ ತಮಗೆ ತಿಳಿದ ಕಡೆಯಲ್ಲಾ ಹುಡುಕಲಾಗಿ ಎಲ್ಲೂ ಸಿಗದಿದ್ದ ಕಾಲಕ್ಕೆ ಮಂಜುನಾಥ ಕಾಣೆಯಾದ ನನ್ನ ಹೆಂಡತಿ ಹಾಗೂ ಮಗುವನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:18/2021 ಕಲಂ:379 IPC. 

             ಮಂಜಪ್ಪ ನಿಂಗಪ್ಪ ಬಾರ್ಕಿ ಸಾ:ಹಿರೆಮುಗದೂರ ಇವರು ದಿನಾಂಕ: 23-02-2021 ರಂದು ಮದ್ಯಾನ್ಹ: 03-30 ಗಂಟೆಯಿಂದ ಮದ್ಯಾನ್ಹ: 04-15 ಗಂಟೆಯ ನಡುವಿನ ಅವಧಿಯಲ್ಲಿ ಹಾವೇರಿ ಎಲ್..ಸಿಯಿಂದ ಬಸ್ ನಿಲ್ದಾಣದ ಕಡೆಗೆ ಬರುವ ರಸ್ತೆಯಲ್ಲಿ ಲಕ್ಕಿ ಸೇಲೂನ್ ಅಂಗಡಿಯ ಮುಂದೆ ನಿಲ್ಲಿಸಿದ ಕಾರ ನಂ: ಕೆಎ-27/ಎನ್-0427 ನೇದ್ದರಲ್ಲಿ ಮಂಜಪ್ಪ ನಿಂಗಪ್ಪ ಬಾರ್ಕಿ ಇವರ 50 ರೂ ಮುಖ ಬೆಲೆಯ 2,00,000/-ರೂ ಹಣವನ್ನು ಯಾರೋ ಕಳ್ಳರು ಕಾರಿನ ಬಲಗಡೆಯ ಹಿಂದಿನ ಡೋರಿನ ಸಣ್ಣ ಗ್ಲಾಸನ್ನು ಒಡೆದು ಹಿಂದಿನ ಡೋರ ತೆಗೆದು ಡಿಕ್ಕಿ ಬಟನ್ ಓಪನ್ ಮಾಡಿ ಹಣವನ್ನು ಕಳ್ಳತನಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 25-02-2021 04:34 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ