ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:127/2021 ಕಲಂ: 380,454,457 IPC.

                  ದಿನಾಂಕ:21-08-2021 ರಂದು ಬೆಳಿಗ್ಗೆ 11-00 ಗಂಟೆಯಿಂದ ರಾತ್ರಿ 23-00 ಗಂಟೆಯ ನಡುವಿನ ಅವಧಿಯಲ್ಲಿ ರಾಣೆಬೆನ್ನೂರು ಶಹರದ ಮೃತ್ಯುಂಜಯ ನಗರ 8 ನೇ ಮೇನ್ 8 ನೇ ಕ್ರಾಸದ ಮಂಜುನಾಥ ಜಿ ಸಅ || ಮಾತುತಿ ನಗರ ರಾಣೆಬೇನ್ನೂರ ಇವರ ವಾಸದ ಮನೆಯ ಮುಂದಿನ ಬಾಗಿಯಲನ್ನು ಯಾವುದೋ ಬಲವಾದ ಆಯುಧದಿಂದ ಮೀಟಿ ಇಂಟರ್ ಲಾಕ್ ತೆಗೆದು. ಮನೆ ಒಳಗೆ ಪ್ರವೇಶ ಮಾಡಿ ಬೆಡ್ ರೂಮಿನಲ್ಲಿ ಇದ್ದ ಕಬ್ಬಿಣದ ಟ್ರಜರಿಯ ಲಾಕರನ್ನು ಓಫನ್ ಮಾಡಿ, ಬಟ್ಟೆ ಬರೆಗಳನ್ನು ಕೆಳಗೆ ಬಿಳಿಸಿ ಲಾಕರದಲ್ಲಿ ಇಟ್ಟಿದ್ದ  1) ಬಂಗಾರದ ನೆಕ್ಲೇಸ್ 20 ಗ್ರಾಂ ಅ:ಕಿ:70,000/- ರೂ ಗಳು 2) ಎರಡು ಬಂಗಾರದ ಚೈನ್ ಸರ 15 ಗ್ರಾಂ ಅ:ಕಿ:52,500/- ರೂ ಗಳು 3) ಎರಡು ಜೊತೆ ಬಂಗಾರದ ಕಿವಿ ಓಲೆ 8 ಗ್ರಾಂ ಅ:ಕಿ:28,000/- ರೂ ಗಳು 4) ಎರಡು ಬಂಗಾರದ ಉಂಗುರ 8 ಗ್ರಾಂ ಅ:ಕಿ:28,000/- ರೂ ಗಳು  5) ಎರಡು ಸಣ್ಣ ಮಕ್ಕಳ ಉಂಗುರ 2 ಗ್ರಾಂ ಅ:ಕಿ:7000/- ರೂ ಗಳು 6) ಕರೆಮಣಿ ಒಳಗಿನ ತಾಳಿ 4 ಗ್ರಾಂ ಅ:;ಕಿ:14000/- ರೂ ಗಳು 7) ಬಂಗಾರದ ನೆತ್ತಿಯ ಹೂವು 3 ಗ್ರಾಂ ಅ:ಕಿ:10,500 ರೂ ಗಳು ಇವೆಲ್ಲವುಗಳ ಅ:ಕಿ: 2,10,000=00 ರೂ ಗಳು ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:135/2021 ಕಲಂ: 380,454,457 IPC.

                  ಬಸಯ್ಯ ಶಂಕ್ರಯ್ಯ ಹಿರೇಮಠ ಸಾ|| ಕಾಲ್ವೇಯಲ್ಲಾಪೂರ ಇವರು ಹುಬ್ಬಳ್ಳಿಯಲ್ಲಿ ತನ್ನ ಸಹೋದರನ ಮಗಳ ಮನೆಯ ಗೃಹ ಪ್ರವೇಶ ಇರುವದರಿಂದ ತನ್ನ ಹೆಂಡತಿಯನ್ನು ಕರೆದುಕೊಂಡು ದಿನಾಂಕ: 16-08-2021 ರಂದು ಮುಂಜಾನೆ 11-00 ಘಂಟೆ ಸುಮಾರಿಗೆ ಹೋಗಿದ್ದು.ಆದರೆ ದಿನಾಂಕ: 21-08-2021 ರಂದು ಮುಂಜಾನೆ 10-00 ಘಂಟೆ ಸುಮಾರಿಗೆ ತನ್ನ ಮನೆಗೆ ಮರಳಿ ಬಂದು ನೋಡಿದಾಗ ಯಾರೋ ಕಳ್ಳರು ದಿನಾಂಕ: 16-08-2021 ರಂದು ಮುಂಜಾನೆ 11-00 ಘಂಟೆಯಿಂದ ದಿನಾಂಕ: 21-08-2021 ರಂದು ಮುಂಜಾನೆ 10-00 ಘಂಟೆಯ ನಡುವಿನ ಅವದಿಯಲ್ಲಿ ಮನೆಯ ಹಿಂದೂಗಡೆ ಹಂಚುಗಳನ್ನು ತೆಗೆದು ಮನೆಯ ಒಳಗೆ ಬಂದು ಕೋಣೆಯಲ್ಲಿರುವ ಟ್ರಜೂರಿ ಮೇಲಿದ್ದ ಟ್ರಜೂರಿ ಕೀಯನ್ನು ತೆಗೆದುಕೊಂಡು ಟ್ರಜೂರಿಯ ಬಾಗಿಲನ್ನು ತೆಗೆದು ಅದರಲ್ಲಿದ್ದ 1) 59.000/- ರೂ ನಗದು ಹಣ. 2) 5 ಗ್ರಾಂ ಬಂಗಾರದ ಕೈಕಟ್ಟಿನ ಗುಂಡುಗಳು. ಅ.ಕಿ.20.000/- ರೂ. 3) 5 ಗ್ರಾಂ ಬಂಗಾರದ ಬೆಂಡಾಲೆ ಜುಮುಕಿಗಳು. ಅ.ಕಿ.20.000/- ರೂ. 4) 10 ಗ್ರಾಂ ಬಂಗಾರದ ಚೈನ್ಸರ ಅ.ಕಿ. 40.000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:20/2021 ಮಹಿಳೆ ಸಾವು.

                     ಕವಿತಾ ಮಲ್ಲೇಶಪ್ಪ ಹುಬ್ಬಳ್ಳಿ ವಯಾ: 20 ಇವಳು ಶಿಗ್ಗಾಂವ ತಾಲೂಕ ಶೀಲವಂತ ಸೋಮಾಪೂರ ಗ್ರಾಮದವಳಿದ್ದು ಶಿಗ್ಗಾಂವದಲ್ಲಿ ಶಿಗ್ಗಾಂವ ಅಂಕಲಕೋಟಿ ಸರಕಾರಿ ಕಾಲೇಜಿಗೆ ಬಂದು ಹೋಗುತ್ತಿದ್ದು ಆ  ಪ್ರಕಾರ ದಿನಾಂಕ : 23-08-2021 ರಂದು ಮುಂಜಾನೆ 08.30 ಗಂಟೆಗೆ ಕಾಲೇಜಿಗೆ ಹೋಗುತ್ತೇನೆ ಅಂತಾ ಹೋದವಳು ನಂತರ ದಿನಾಂಕ: 23-08-2021 ರಂದು ಮದ್ಯಾಹ್ನ 03.30 ಗಂಟೆ ಸುಮಾರಿಗೆ ಶಿಗ್ಗಾಂವ ಗಂಗಿಭಾವಿ ರಸ್ತೆಯ ಅಡ್ಡಗುಡ್ಡ ಹತ್ತಿರ ರಸ್ತೆ ಬದಿಯ ಒಂದು ನೀರಿನ ಹೊಂಡದಲ್ಲಿ ಬಿದ್ದು ಮರಣ ಹೊಂದಿದ್ದು ಕಾರಣ ಅವಳ ಮರಣದಲ್ಲಿ ನನಗೆ  ಸಂಶಯವಿದ್ದು  ಮುಂದಿನ ಕ್ರಮ ಜರುಗಿಸಲು ವಿನಂತಿ, ಅಂತಾ  ಕವಿತಾ ಇವಳ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2021 ವ್ಯಕ್ತಿ ಸಾವು .

                     ಈರಯ್ಯ ತಂದೆ ಲಿಂಗಯ್ಯ ಹಿರೇಮಠ. ವಯಾ:26 ವರ್ಷ ಜಾತಿ ಹಿಂದೂ ಜಂಗಮ. ಉದ್ಯೋಗ : ಶೇತ್ಕಿ ಕೆಲಸ. ಸಾ-ಹಿರೇಬಾಸೂರ. ತಾ-ಬ್ಯಾಡಗಿ. ಹಾಲಿ ವಸ್ತಿ-ಶ್ಯಾಡಗುಪ್ಪಿ. ತಾ ಹಾನಗಲ್.ಇತನು ದಿನಾಂಕ: 22-08-2021 ರಂದು ಮುಂಜಾನೆ 08-00 ಘಂಟೆ ಸುಮಾರಿಗೆ ತಮ್ಮ ಜಮೀನಿನ ರಿ.ಸ.ನಂ; 124 ನೇದ್ದರ ಜಮೀನದಲ್ಲಿ ಬೆಳೆದಂತಹ ಶೂಂಠಿ ಬೆಳೆಗೆ ನೀರು ಬೀಡಲು ಅಂತಾ ಹೋಗಿ ತಮ್ಮ ಜಮೀನಿನಲ್ಲಿರುವ ಬೋರ್ವೆಲ್ಲ ಅನ್ನು ಸ್ಟಾರ್ಟ ಮಾಡಲು ಅಂತಾ ಹೋದಾಗ ವಿದ್ಯೂತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಯಾರ ಮೇಲೂ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 30-08-2021 06:45 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ