ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 45/2021 ಮಹಿಳೆ ಕಾಣೆ.

               ಸಂಗೀತಾ ತಂದೆ ನಿಜಲಿಂಗಪ್ಪ ಕಾಶಂಬಿ, ವಯಾ: 18 ವರ್ಷ 1 ತಿಂಗಳು ಇವಳು ದಿನಾಂಕ : 21-07-2021 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಊಟ ಮಾಡಿ ತನ್ನ ತಂಗಿಯ ಜೊತೆ ಮಲಗಿದ್ದವಳು, ರಾತ್ರಿ 11-30 ಗಂಟೆ ಸುಮಾರಿಗೆ ಸಂಗೀತಾ ಇವರ ಅಣ್ಣ ನೀರು ಕುಡಿಯಲು ಅಡುಗೆ ಮನೆಗೆ ಹೋಗಿ ಬರುತ್ತಿರುವಾಗ, ಮಲಗಿದ್ದವಳು ಎಲ್ಲಿಯೊ ಕಾಣೆಯಾಗಿ ಹೋದ ಬಗ್ಗೆ ಖಾತ್ರಿಯಾಗಿದ್ದರಿಂದ,ಕಾಣೆಯಾದ ತಮ್ಮ ತಂಗಿಯನ್ನು ಹುಡಿಕಿಕೊಡಬೇಕು ಅಂತಾ ದೇವರಾಜ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 134/2021 ಕಲಂ: 399, 402 IPC.

               ದಿನಾಂಕ:-22/07/2021 ರಂದು ಬೆಳಗಿನ ಜಾವ 04-00 ಘಂಟೆಯ ಸುಮಾರಿಗೆ ಹಾನಗಲ್ಲ ತಾಲೂಕ ನಾಲ್ಕರ ಕ್ರಾಸ್ ಮತ್ತು ಹಿರೂರ ಕ್ರಾಸ್ ಮದ್ಯದಲ್ಲಿ ರಸ್ತೆಯ ಮೇಲೆ ನಾಗರಾಜ ಮಾಜುರೆಪ್ಪ ಹರಿಜನ ಹಾಗೂ ಆತನ 7ಜನ ಸಹಚರರು ಸೇರಿ ತಮ್ಮ ತಮ್ಮ ಕೈಗಳಲ್ಲಿ ಕಬ್ಬಿಣದ ರಾಡಗಳು, ಕ್ರಿಕೇಟ್ ಸ್ಟಿಕಗಳನ್ನು ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಹೋಗುವ ಮತ್ತು ಬರುವ ವಾಹನಗಳನ್ನು ನಿಲ್ಲಿಸಲು ಒಂದು ಆಟೋ ರಿಕ್ಷಾ ಮತ್ತು ಮೋಟಾರ್ ಸೈಕಲ್ಲನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿಕೊಂಡು ವಾಹನಗಳಿಗೆ ಕಾಯುತ್ತಾ ದರೋಡೆ ಮಾಡುವ ಇರಾದೆಯಲ್ಲಿ ಇದ್ದಾಗ ಪೊಲೀಸ್ ಸಿಬ್ಬಂದಿ ಜನರು ಸೇರಿ ದಾಳಿಮಾಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 20/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

               ವಿರೇಶ ಶಿವಂದಪ್ಪ ಜ್ಯೋತಿ ವಯಾ : 33 ಸಾ|| ಉದಗಟ್ಟಿ ಇವನು ಹೊಲ ಮನಿಯ ಸಂಭಂದ ರಾಣೆಬೆನ್ನೂರ ಎ ಡಿ ಬಿ ಬ್ಯಾಂಕದಲ್ಲಿ ಬೆಳೆ ಸಾಲ ಅಂತಾ 70000/- ರೂಗಳನ್ನು ಹಾಗೂ ಅವರಿವರ ಕಡೆಗೆ ಕೈ ಗಡಾ ಅಂತಾ 3-4 ಲಕ್ಷದಷ್ಟು ಸಾಲ ಮಾಡಿದ್ದು 2-3 ವರ್ಷದಿಂದಾ ಸರಿಯಾಗಿ ಬೆಳೆ ಬಾರದೇ ಇದ್ದುದರಿಂದಾ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ 22-07-2021 ರಂದು ಮದ್ಯಾನ್ನ 2-30 ಗಂಟೆಯಿಂದಾ 5-00 ಗಂಟೆಯ ನಡುವಿನ ಅವದಿಯಲ್ಲಿ ತನ್ನ ಮನೆಯ ಬೆಡರೂಂದಲ್ಲಿ ಆರ್ ಸಿ ಸಿ ಗೆ ಹಾಕಿದ ಹುಕ್ಕಿಗೆ ನೂಲಿನ ಹಗ್ಗದಿಂದಾ ಕುತ್ತಿಗಿಗೆ ಉರಲು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ರಿತಿಯ ಸಂಶಯ ವಗೈರೆ ಇರುವುದಿಲ್ಲ ಅಂತಾ ಮಂಜಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 23/2021 ವ್ಯಕ್ತಿ ಸಾವು.

                 ಕಿರಣ ಅಶೋಕ ನಾಗೊಜಿ ಸಾ|| ಕೊಪ್ಪರಸಿಕೊಪ್ಪ ಇವರ ಬಾಬತ್ ಜಮೀನು ರಿಸ ನಂಬರಃ151/3 ನೇದ್ದರ 02-02 ಗುಂಟೆ ಜಮೀನಿನಲ್ಲಿ ಬೆಳೆದ ಶುಂಠಿಯ ಬೆಳೆಯಲ್ಲಿ ದಿನಾಂಕಃ21/07/2021 ರಂದು ಕಿರಣ ಹಾಗೂ ಅವರ ತಂದೆಯಾದ ಅಶೋಕ ನಾಗೋಜಿ ಕೂಡಿಕೊಂಡು ಕೆಲಸ ಮಾಡುತ್ತಿದ್ದಾಗ ಸಾಯಂಕಾಲಃ06-00 ಗಂಟೆಯ ಸುಮಾರಿಗೆ ಯಾವುದೋ ವಿಷಕಾರಕ ಹಾವು ಬಲಗಾಲು ಹೆಬ್ಬರಳಿನ ಹತ್ತಿರ ಕಡಿದಿದ್ದು ನಂತರ  ಉಪಚಾರಕ್ಕೆ ಗಾಂವಟಿ ಔಷಧಿಯನ್ನು ಕೊಡಿಸಲು ಅಂತಾ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹಾನಗಲ್ಲ ತಾಲೂಕ ಬಸಾಪೂರ ಗ್ರಾಮಕ್ಕೆ ಕರೆದುಕೊಂಡು ಬಂದು ಉಪಚಾರ ಕೊಡಿಸಿ ನಂತರ ಕಫ ಗಟ್ಟಿಯಾಗುತ್ತಿದ್ದು ಉಪಚಾರಕ್ಕೆ ಶಿಗ್ಗಾಂವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಿಗ್ಗಾಂವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿದಾಗ ರಾತ್ರಿಃ09-00 ಗಂಟೆಯ ಸುಮಾರಿಗೆ ಹಾವು ಕಡಿತದಿಂದ ಗುಣಮುಖರಾಗದೇ ಮೃತಪಟ್ಟಿದ್ದು ನನ್ನ ತಂದೆಯ ಸಾವಿನಲ್ಲಿ ಬೇರೆ ಏನೂ ಸಂಶಯ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ಇದರಲ್ಲಿಯ ಮೃತನ ಮಗ ವರದಿ ಕೊಟ್ಟಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 25/2021 ಹಾವು ಕಡಿತದಿಂದ ಮಹಿಳೆ ಸಾವು.

                 ರೇಣವ್ವ ಕೋಂ ದಿಳ್ಳೆಪ್ಪ ಮಟ್ಟಿ ವಯಾ 46 ವರ್ಷ, ಜಾತಿ ಕುರಬರ. ವೃತ್ತಿ ಹೊಲ ಮನಿ ಕೆಲಸ, ಸಾ|| ಹಾವನೂರ. ತಾ|| ಹಾವೇರಿ. ಇವಳಿಗೆ ದಿನಾಂಕ 09-07-2021 ರಂದು ಮದ್ಯಾಹ್ನ 03-00 ಗಂಟೆ ಸುಮಾರಿಗೆ ಹಾವನೂರ ಗ್ರಾಮ ಹದ್ದಿಯಲ್ಲಿನ ನೆಗಳೂರ ರಸ್ತೆ ಬದಿಯಲ್ಲಿನ ತಮ್ಮ ಜಮೀನದಲ್ಲಿ ಬದುವಿನಲ್ಲಿನ ಕಸ ಕಿಳುತ್ತಿರುವಾಗ ಯಾವುದೋ ವಿಷಕಾರಕ ಹಾವು ಬಲಗೈ ಮುಂಗೈಗೆ ಕಡಿದಿದ್ದು ಅವಳಿಗೆ ಅದೆ ದಿನ ಹೊಸರಿತ್ತಿ ಗುದ್ದಲಿಸ್ವಾಮಿ ಮಠಕ್ಕೆ ಕರೆದುಕೊಂಡು ಹೋಗಿ ಹರಳು ಹಚ್ಚಿಸಿಕೊಂಡು ಬಂದಿದ್ದು ಇತ್ತು. ದಿನಾಂಕ; 11-07-2021 ರಂದು ಮುಂಜಾನೆ ತ್ರಾಸ್ ಆಗಿದ್ದರಿಂದ ರೇಣವ್ವಳಿಗೆ ಗುತ್ತಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಮಾಡಿಸಿ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆಂದು ದಿನಾಂಕ 12-07-2021 ರಂದು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಉಪಚಾರ ಫಲಿಸಿದೆ ದಿನಾಂಕ 22-07-2021 ರಂದು ಮುಂಜಾನೆ 11-55 ಗಂಟೆಗೆ ಮೃತಪಟ್ಟಿರುತ್ತಾಳೆ ವಿನಃ ಮೃತಳ ಸಾವಿನಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಮೃತಳ ಗಂಡ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

 

ಇತ್ತೀಚಿನ ನವೀಕರಣ​ : 28-07-2021 01:06 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080