ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:85/2021 ಕಲಂ: The Scheduled Castes and the Scheduled Tribes (Prevention of Atrocities) Amendment Bill, 2015 (U/s-3(1)(W)(i)(ii),3(2)(va)); 376 IPC

                  ರತ್ನವ್ವ ಸೊಮಲೆಪ್ಪ ಲಮಾಣಿ ವಯಾ: 55 ಸಾ|| ಸೇವಾನಗರ ತಾಂಡಾ ಕಲ್ಲೇದೆವರು ಇವಳು ಪರಶಿಷ್ಟ ಜಾತಿಗೆ ಸೇರಿದ ಲಂಬಾಣಿ ಜನಾಂಗದವರು ಇದ್ದು ಶಿವಮೂರ್ತಿ ನಾಗಪ್ಪ ಕಾಡಮ್ಮನವರ ಸಾ|| ಕಲ್ಲೇದೆವರು ಇವನು ಕುರಬ ಜಾತಿಗೆ ಸೇರಿದವನು ಇದ್ದು ಕುರಿಕಾಯುವ ಕೆಲಸ ಮಾಡಿಕೊಂಡಿದ್ದು, ರತ್ನವ್ವ ಇವಳು ದಿನಾಂಕ: 21-06-2021 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಕಲ್ಲೇದೆವರ ಗ್ರಾಮದ ಅಡವಿಯಲ್ಲಿ ಕುರಿಗಳನ್ನು ಕಾಯುತ್ತಿದ್ದಾಗ ಶಿವಮೂರ್ತಿ ಸಹಾ ಕುರಿಗಳನ್ನು ಮೇಯಿಸುತ್ತಾ ರತ್ನವ್ವ ಇವರ ಕುರಿಗಳ ಹಿಂಡಿನಲ್ಲಿ ಸೇರಿಸಿ ಅವಳು ಒಬ್ಬಳೇ ಇರುವದನ್ನು ನೋಡಿ ಬಾ ಅಂತಾ ಕರೆದಿದ್ದು, ಆಗ ಯಾಕಪ್ಪ ಎದಕ್ಕೆ ಬರಬೇಕು ಅಂತಾ ಕೇಳಿದಾಗ ಶಿವಮೂರ್ತಿ  ಇವನು ಕೈಯಿಂದ ರತ್ನವ್ವ ಇವರ ಬಾಯಿಯನ್ನು ಹಿಡಿದು ನೆಲಕ್ಕೆ ಕೆಡವಿದಾಗ, ರತ್ನವ್ವ ಹೊಯ್ಕೊ ಬಡಕೋ ಮಾಡಿ ಅವನಿಂದ ತಪ್ಪಿಸಿಕೊಳ್ಳಲು ಹೊದಾಗ ಬಿಗಿಯಾಗಿ ಹಿಡಿದು ಕೊಂಡು ಮೈಮೇಲಿನ ಜಂಪರನ್ನು ಹಿಡಿದು ಜಗ್ಗಿ ಹರಿದು ಮೈಕೈ ಮುಟ್ಟಿ ಹಿಚುಕಾಡುತ್ತಾ ಸೀರೆಯನ್ನು ಎತ್ತಿ ಬಲತ್ಕಾರ ಸಂಭೋಗ ಮಾಡಿದ್ದು ಚಿರಾಡುವ ಸಪ್ಪಳ ಕೇಳಿ ನಾಗರಾಜ ಪೀರಪ್ಪ ಲಮಾಣಿ ಇವನು ಬೈದಾಡುತ್ತಾ ಓಡಿ ಬಂದಾಗ ಶಿವಮೂರ್ತಿ ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ಣೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:100/2021 ಬೈಕ್ ಕಳ್ಳತನ.

                  ದಿನಾಂಕ:11-06-2021 ರಂದು 21-00 ಗಂಟೆಯಿಂದ ದಿನಾಂಕ:12-06-2021 ರಂದು ಬೆಳಿಗ್ಗೆ 07-00  ಗಂಟೆಯ ನಡುವಿನ ಅವಧಿಯಲ್ಲಿ ಕಿರಣ ಮಡಿವಾಳರ ಸಾ||ರಾಣೆಬೇನ್ನೂರ ಇವರು ತನ್ನ ಸ್ನೇಹಿತ  ರಾಜು ಬೂದನೂರ ಇವನ ಮನೆಯ ಮುಂದೆ ನಿಲ್ಲಿಸಿದ ಬಜಾಜ್ ಪಲ್ಸರ್ ಎನ್.ಎಸ್.-200  ಮೋಟಾರ ಸೈಕಲ್ ನಂ:ಕೆಎ-68/-8358 ಇದರ ಇಂಜಿನ ನಂಬರ:JLYCJL15707 ಚಾಸ್ಸೀಸ್ ನಂಬರ: MD2A36FY4JCL15731  ನೇದ್ದು ಅ:ಕಿ:50,000/-ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:85/2021 ಕಲಂ: INDIAN MOTOR VEHIC LES ACT, 1988 (U/s-134(A&B),187) ; 279,304A IPC

                  ಅರೆಹುಚ್ಚನಂತಿದ್ದ 45 ವರ್ಷದ ಗಂಡಸು ದಿನಾಂಕ: 20/06/2021 ರಂದು 22-00 ಗಂಟೆಗೆ ರಸ್ತೆಯನ್ನು ದಾಟುತ್ತಿರುವಾಗ ಹೂಲಿಹಳ್ಳಿ ಕ್ರಾಸ್ ಹತ್ತಿರ ಭಾರತ ಪೆಟ್ರೋಲ್ಬಂಕ ಎದುರಿನ ರಾಣೇಬೆನ್ನೂರ ಕಡೆಗೆ ಬರುವ ರಾಷ್ಟ್ರೀಯ ಹೆದ್ದಾರಿ ನಂ: 48 ರಸ್ತೆಯ ಮೇಲೆ ಯಾವುದೋ ಕಾರಿನ ಚಾಲಕನು ಅವನ ಕಾರನ್ನು ನಿರ್ಲಕ್ಷ್ಯತೆಯಿಂದ ನಡೆಸಿಕೊಂಡು ರಸ್ತೆಯನ್ನು ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿಪಡಿಸಿ ತಲೆಗೆ ಭಾರೀಗಾಯವನ್ನುಂಟು ಮಾಡಿ ಪ್ರಜ್ಞಾಹೀನನಾಗುವಂತೆ ಮಾಡಿದ್ದು ಉಪಚಾರಕ್ಕೆ ರಾಣೇಬೆನ್ನೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಉಪಚಾರ ಕೊಡಿಸಿದರೂ ಉಪಚಾರದಿಂಗ ಗುಣವಾಗದೇ ದಿ21/06/2021 ರಂದು 21-00 ಗಂಟೆಗೆ ಮರಣಹೊಂದುವಂತೆ ಮಾಡಿದ್ದಲ್ಲದೇ ಸದರೀ ಅಪಘಾತಪಡಿಸಿದ ವಾಹನವನ್ನು ನಿಲ್ಲಿಸದೆಯೇ ಅಪಘಾತಕ್ಕೆ ಒಳಗಾದವರಿಗೆ ಉಪಚಾರಕ್ಕೂ ಕೊಡಿಸದೆ ಹಾಗೂ ಅಪಘಾತದ ವಿಷಯವನ್ನು ಪೊಲೀಸ್ ಠಾಣೆಗೂ ತಿಳಿಸದೇ ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:18/2021 ಮಹಿಳೆ ಸಾವು.

                  ದ್ಯಾಮವ್ವಾ ಶಿವಲಿಂಗಪ್ಪ ಹಡಪದ ವಯಾ:60 ಸಾ|| ಹನಮಾಪೂರ ಇವರು ದಿನಾಂಕ 17-06-2021 ರಂದು ಮುಂಜಾನೆ 5-30 ಗಂಟೆಯ ಸುಮಾರಿಗೆ ಮನೆಯಲ್ಲಿ ಗ್ಯಾಸಿನ ಮೇಲೆ ಚಹಾ ಮಾಡಲು ಅಂತಾ ಗ್ಯಾಸನ ಸ್ಟೋವನ್ನು ಚಾಲು ಮಾಡಿ ಕಡ್ಡಿ ಪೆಟ್ಟಿಗೆಯನ್ನು ನೋಡಲು ಸಿಗದೇ ಇದ್ದಾಗ ಅದನ್ನು ಹುಡುಕಿ ಕಡ್ಡಿ ಕೇರಿದು ಹಚ್ಚಲು ಹೋದಾಗ ಬೆಂಕಿ ಒಮ್ಮೇಲೇ ಬೋಗ್ಗನೇ ಎದ್ದು ಉಟ್ಟುಕೊಂಡ ಸೀರೆಗೆ ಹತ್ತಿ ಅದು ಮೈಯೆಲ್ಲಾ ಆವರಿಸಿಕೊಂಡು ಭಾರೀ ದುಃಖಾಪತ್ ಹೊಂದಿದ್ದು ಅವಳಿಗೆ ಉಪಚಾರಕ್ಕೆ ಗುಡಿಹೊನ್ನತ್ತಿ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಉಪಚಾರ ಪಡೆದುಕೊಂಡುಹೆಚ್ಚಿನ ಉಪಚಾರಕ್ಕೆ ರಾನೆಬೆನ್ನೂರ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹುಬ್ಬಳ್ಳಿಕಿಮ್ಸ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುವ ಕಾಲಕ್ಕೆ ಉಪಚಾರ ಫಲಕಾರಿಯಾಗದೇ ದಿನಾಂಕ 22-06-2021 ರಂದು ಮುಂಜಾನೆ 7-00 ಗಂಟೆಯ ಸುಮಾರಿಗೆ ಮೃತ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:20/2021 ವಿಷ ಸೇವಿಸಿ ವ್ಯಕ್ತಿ ಆತ್ಮ ಹತ್ಯೆ.

                  ಚನ್ನಬಸಪ್ಪ ತಂದೆ ಚಿದಾನಂದಪ್ಪ ಅಕ್ಕಿ, 30 ವರ್ಷ, ಸಾ: ಭೂ-ಕೊಡಿಹಳ್ಳಿ, ತಾ: ಹಾವೇರಿ, ಈತನು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ತನ್ನ ಮನಸ್ಸಿನಲ್ಲಿ ಯಾವುದೋ ಕಾರಣ ಇಟ್ಟುಕೊಂಡು ಸರಾಯಿ ಕುಡಿದ ಅಮಲಿನಲ್ಲಿ ದಿನಾಂಕ: 21-06-2021 ರಂದು ಮದ್ಯಾಹ್ನ 3-00 ಗಂಟೆಗೆ ಭೂ ಕೊಡಿಹಳ್ಳಿ ಗ್ರಾಮದ ತನ್ನ ಜಮೀನದಲ್ಲಿ ವಿಷ ಸೇವನೆ ಮಾಡಿದ್ದು ಸದರಿಯವನಿಗೆ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಿಂದ ಗುಣಮುಖನಾದೇ ದಿನಾಂಕ: 22-06-2021 ರಂದು ಬೆಳಗಿನ ಜಾವ 06-15 ಗಂಟೆಗೆ ಮೃತಪಟ್ಟಿದ್ದು ಈತನ ಮರಣದಲ್ಲಿ ಯಾರ ಮೇಲೂ ಸಂಶಯ ಇರುವುದಿಲ್ಲಾ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:28/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮ ಹತ್ಯೆ.

                  ಮಹೇಶಪ್ಪ ತಂದೆ ಹನಮಂತಪ್ಪ ಪೂಜಾರ. ವಯಾ-36 ವರ್ಷ. ಜಾತಿ-ಹಿಂದೂ-ಲಿಂಗವಂತಉದ್ಯೋಗ-ಶೇತ್ಕಿ ಕೆಲಸ  ಸಾ-ಕುಡಪಲಿ. ಹಾ:ಬ್ಯಾಡಗಿ ಗುತ್ತೇಮ್ಮನ ಗುಡಿ ಹತ್ತೀರ ಇವರು ತಮ್ಮ ತಂದೆ- ತಾಯಿಹೆಸರಿನಲ್ಲಿ ಇರುವ ಕುಡಪಲಿ ಮತ್ತು ಯಡಗೊಡ ಗ್ರಾಮದ ರಿ..ನಂ. 124/3, 73/4 ಕ್ಷೇತ್ರ 4 ಎಕರೆ, ಜಮೀನಿಗೆ ಬಿತ್ತನೆ ಮಾಡುವ ಸಂಬಂಧ ಕುಡಪಲಿ ಮತ್ತು ಬ್ಯಾಡಗಿಯಲ್ಲಿ ಅಲ್ಲಲ್ಲಿ ಕೈಗಡ 2,50,000/- ರೂ.ಗಳ ಸಾಲವನ್ನು ಮಾಡಿದ್ದು ಈಗ 2-3 ವರ್ಷಗಳಿಂದ ಅತೀಯಾದ ಮಳೆಯಾಗಿದ್ದರಿಂದ  ಜಮೀನಿನಲ್ಲಿ ಬಿತ್ತಿದ ಪೀಕು ಬಾರದೇ ಮಳೆಗೆ ಲುಕ್ಷಾನ್ ಆಗಿದ್ದರಿಂದ ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸುವದು ಹೇಗೆ ಅಂತಾ ಮಾನಸಿಕ ಮಾಡಿಕೊಂಡಿದ್ದು ಸಾಲದ ಬಗ್ಗೆ ಚಿಂತೆ ಮಾಡುತ್ತಾ ಬಂದಿದ್ದು ಅದೇ ಚಿಂತೆಯಲ್ಲಿ ತನ್ನಷ್ಟಕ್ಕೆ ತಾನೇ ದಿನಾಂಕ:-22-06-2021 ರಂದು ಬೆಳಗಿನ ಜಾವ 4-00 ಘಂಟೆಗೆ  ತನ್ನ ಬಾಡಿಗೆ ವಾಸದ ಮನೆಯಲ್ಲಿ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ ವಿನಃ ಅವನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ ಅಂತಾ ಮೃತನ ತಂದೆ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

ಇತ್ತೀಚಿನ ನವೀಕರಣ​ : 27-06-2021 11:50 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ