ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:17/2021 ಕಲಂ: 379 IPC. 

              ಹಾವೇರಿ ಶಹರ ಪೊಲೀಸ್ ಠಾಣಾ ಹದ್ದಿ ಪೈಕಿ, ಮೆಹಬೂಬ ನಗರದಲ್ಲಿರುವ ಮೆಹಬೂಬ ಸಾಮಿಲನ ಮನೆಯ ಮುಂದಿನ ಆವರಣದಲ್ಲಿ ದಿನಾಂಕ: 29-11-2020 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 30-11-2020 ರ ಬೆಳಗಿನ 06-00 ನಡುವಿನ ಅವಧಿಯಲ್ಲಿ ಮೊಹಮದಸಾಬ ದೇವಿಹೋಸೂರ ಸಾ:ಹಾವೇರಿ ಇವರ ಹೊಂಡಾ ಸಿಬಿ ಹಾರನೇಟ್ ಕಂಪನಿಯ ಮೋಟರ್ ಸೈಕಲ್ಲ ನಂಬರ ಕೆಎ/27/TMP/2019/6240 ಚೆಸ್ಸಿ ನಂ- ME4KC239KH8047296  ಮತ್ತು ಇಂಜೆನ್ ನಂಬರ KC23E84090811 ಗಾಡಿಯ ಬಣ್ಣ ATHLETIC BLUE METALL ಇದ್ದು ಗಾಡಿಯ ಅಂದಾಜು ಮೌಲ್ಯ ಅಃಕಿಃ 50,000/ ರೂ ಗಾಡಿಯ ಮಾಡಲ್ 2019 ಇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:31/2021 ಕಲಂ: 323, 504, 506, 354(B), 34 IPC. 

              ಬ್ಯಾಡಗಿ ತಾಲೂಕ ಅಗಸನಹಳ್ಳಿ ಗ್ರಾಮದಲ್ಲಿ ಜಯಶಿಲಾ ಅಗಸನಹಳ್ಳಿ ಸಾ ಅಗಸನಹಳ್ಳಿ ಇವರು  ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ಜಯಶಿಲಾ ಇವರ  ಗಂಡ ಮತ್ತು ಮಹೇಶ ಕೊಮಡೊಳ್ಳಿ ಇವರ ನಡುವೆ ಹಣಕಾಸಿನ ವ್ಯವಹಾರವಿದ್ದುಇದೆ ವಿಷಯಕ್ಕೆ ಸಂಬಂದಿಸಿದಂತೆ ಮಹೇಶ ಮನೆಗೆ ಬಂದು ಆಗಾಗ ತಂಟೆ ಮಾಡುತ್ತಾ ಬಂದಿದ್ದು  ಅಲ್ಲದೆ ದಿನಾಂಕ:22-02-2021 ರಂದು ಮುಂಜಾನೆ 09-00 ಗಂಟೆಗೆ ಮಹೇಶ ನಿಂಗಪ್ಪನಿಗೆ ಲೇ ಬೊಸಡಿ ಮಗನಾ, ಹಾದರಗಿತ್ತಿ ಮಗನಾ ಅಂತಾ ಅವಾಚ್ಯೆ ಶಬ್ದಗಳಿಂದ ಬೈದಾಡಿ ನಮಗೆ ಕೊಡಬೇಕಾದ ದುಡ್ಡು ಕೊಡು ಅಂತಾ ಮೈ ಕೈ ಹಿಡಿದು ಎಳೆದಾಡುತ್ತಿದ್ದಾಗ ಬಿಡಿಸಲು ಹೋದ ಜಯಶಿಲಾ ಇವರಿಗೆ ಮಿಂಡ್ರಿ, ಹಾದರಗಿತ್ತಿ ಅಂತಾ ಅವಾಚ್ಯೆ ಶಬ್ದಗಳಿಂದ ಬೈದಾಡಿ ಕೈಹಿಡಿದು ಎಳೆದು ಮೈಮೇಲಿನ ಸಿರೆ ಹಿಡಿದು ಜಗ್ಗಿ ಸಾರ್ವಜನಿಕರ ಮುಂದೆ ಅವಮಾನಪಡಿಸಿದ್ದು ಅಲ್ಲದೆ ಮಹೇಶ ಇವರ ಹೆಂಡತಿ ಜಯಶಿಲಾ ಇವರ ಕೂದಲು ಹಿಡಿದು ನೆಲಕ್ಕೆ ಕೆಡವಿ  ಇಬ್ಬರೂ ಕೈಯಿಂದ ಮೈಮೇಲೆ ಹೊಡೆದು ಜೀವಧ ಬೇದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:43/2021 ಕಲಂ: The SC & ST (Prevention of Atrocities) Amendment Act 2015 (U/s-3(1)(w)(i)(ii)); 504 IPC. 

              ಗಂಗಮ್ಮ ದುರಗಪ್ಪ ಹರಿಜನ ಸಾ ಅಕ್ಕಿಆಲೂರ ಇವರು ಅಕ್ಕಿಆಲೂರ ಸರಕಾರಿ ದವಾಖಾನೆಯಲ್ಲಿ 7-8 ವರ್ಷಗಳಿಂದ ಹೊರಗುತ್ತಿಗೆ ನೌಕರಳಾಗಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದು ಸುಮಾರು ಎರಡು ವರ್ಷಗಳಿಂದ ಕುಬೇರ ಸಾವಂತ ಈತನು ಅಕ್ಕಿಆಲೂರ ದವಾಖಾನೆಯ ಎಕ್ಸರೇ ಟೆಕ್ನೀಷಿಯನ್ ಕೆಲಸ ನಿರ್ವಹಿಸುವ ಕಾಲಕ್ಕೆ ಗಂಗಮ್ಮ ಪರಿಶಿಷ್ಠ ಜಾತಿಗೆ ಸೇರಿದವಳು ಅಂತಾ ಗೊತ್ತಿದ್ದರು ಸಹ ಅವರಿಗೆ ಲೈಂಗೀಕ ಕಿರುಕುಳ ನೀಡುತ್ತಾ ಬಂದಿದ್ದು ಅಲ್ಲದೇ ನಿನ್ನ ಕೀಳು ಜಾತ್ಯಾಗ ಯಾರದು ಇರಲಾರದ್ದು ನಿನಗ ಐತೇನು ಅಂತಾ ಜಾತಿ ನಿಂದನೇ ಮಾಡಿ ಲೈಂಗೀಕ ದೌರ್ಜನ್ಯ ಮಾಡುತ್ತಾ ಬಂದಿದ್ದು ದಿನಾಂಕಃ26/01/2021 ರಂದು ಮುಂಜಾನೆ ಇವತ್ತು ನೀನು ತುಂಬಾ ಚನ್ನಾಗಿ ಕಾಣುತ್ತಿದ್ದಿಯಾ ನೀ ಇವತ್ತು ಇಲ್ಲಿಯೇ ಇರೂ ಯಾರೂ ಇರೋದಿಲ್ಲ ಇವತ್ತು ನಾನು ನೀನು ಸೇರಿಕೊಂಡು ಮಜಾ ಮಾಡೋಣ ಅಂತಾ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021 ವ್ಯಕ್ತಿ ಸಾವು.

                 ಪೆದ್ದಬಾವಿ ಪೆದ್ದನರಸಿಂಹಲು ತಂದೆ ಮಾಸಯ್ಯ, ವಯಸ್ಸು, 62 ವರ್ಷ, ಸಾ|| ತೆಲಂಗಾಣ ಇತನಿಗೆ ಪೀಡ್ಸ ಕಾಯಿಲೆ ಬರುತ್ತಿದ್ದು ಈ ಬಗ್ಗೆ ಆಸ್ಪತ್ರೆಗೆ ತೋರಿಸಿದರೂ  ಗುಣಮುಖವಾಗಿರಲಿಲ್ಲದಿನಾಂಕ, 21-02-2021 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಸದರಿಯವನು ಹಾವೇರಿಯ ದೇವಗಿರಿಯಲ್ಲಾಪೂರ ಹತ್ತಿರ ನಡೆಯುತ್ತಿರುವ ಕೆ ಬಿ ಆರ್ ಕಂಪನಿಯವರ ಕಟ್ಟಡ ಕಾಮಗಾರಿಯ ಸ್ಥಳದಲ್ಲಿದ್ದ ಶೆಡ್ನಲ್ಲಿ ಊಟ ಮಾಡುತ್ತಿರುವಾಗ ಆಕಸ್ಮಿಕವಾಗಿ ಬಿದ್ದಿದ್ದು, ತ್ರಾಸ್ ಮಾಡಿಕೊಳ್ಳುತ್ತಿದ್ದಾಗ ಆತನಿಗೆ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದಾಗ ಸಾಯಂಕಾಲ 7-00 ಗಂಟೆಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 25-02-2021 04:31 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ