ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:81/2021 ಕಲಂ: 379 IPC.

                  ಶಿವಬಸಪ್ಪ ಈರಪ್ಪ ಬ್ಯಾಳಹುಣಸಿ ಹಾಗೂ ಶ್ರೀಪತಿ ಕಮ್ಮಾರ ಇವರಿಬ್ಬರು ಕೂಡಿಕೊಂಡು ತಮ್ಮ ಬಾಬತ್ ಟಿಪ್ಪರ ಲಾರಿ ನಂಬರ: ಕೆಎ-27-ಸಿ-2006 ನೇದ್ದರಲ್ಲಿ ತಮ್ಮ ಫಾಯಿದೆಗೋಸ್ಕರ ಹಾವನೂರ ಹತ್ತಿರ ತುಂಗಭದ್ರಾ ನದಿಯ ಪಾತ್ರದಿಂದ ಸುಮಾರು 7000/- ರೂ ಕಿಮ್ಮತ್ತಿನ ಸುಮಾರು 10 ಟನ್ ಮರಳನ್ನು ಕಳ್ಳತನ ಮಾಡಿ ಲೋಡ್ ಮಾಡಿಕೊಂಡು ಮಾರಾಟ ಮಾಡಲು ಅಂತಾ ಹಾವನೂರ ಕಡೆಯಿಂದ ಗುತ್ತಲ ಮಾರ್ಗವಾಗಿ ಹಾವೇರಿ ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ  ದಿ: 21-08-2021 ರಂದು ಮದ್ಯಾಹ್ನ 12-10 ಘಂಟೆಗೆ ಹಾವೇರಿಯ ಹುಕ್ಕೇರಿಮಠದ ಮಹಿಳಾ ಕಾಲೇಜ ಎದುರಿಗೆ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:102/2021 ವ್ಯಕ್ತಿ ಕಾಣೆ.

                  ಶಂಬುಲಿಂಗಪ್ಪ ತಂದೆ ರುದ್ರಗೌಡ ಪರಪ್ಪನವರ ವಯಾ 76 ವರ್ಷ ಇವರು ದಿನಾಂಕ 09-08-2021 ರಂದು ನಾಗವಂದ ಗ್ರಾಮದ ತನ್ನ ಮನೆಯಿಂದ ಎಲ್ಲಿಗೊ ಹೋಗಿ ಕಾಣೆಯಾಗಿದ್ದು ಕಾಣೆಯಾದವನನ್ನು ಈವರೆಗೆ ಹುಡುಕಲಾಗಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ಶಂಬುಲಿಂಗ ಇತನನ್ನು ಹುಡುಕಿಕೊಡಬೇಕೆಂದು ಪಾಲಾಕ್ಷಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:154/2021 ಮಹಿಳೆ ಕಾಣೆ.

                  ಕು.ದೀಪಾ ತಂದೆ ಜಗಧೀಶ ವಾಸನ ವಯಾಃ 17 ವರ್ಷ 02 ತಿಂಗಳು ಉದ್ಯೋಗ-ವಿದ್ಯಾರ್ಥಿ ಜಾತಿ- ಹಿಂದು ವಾಲ್ಮೀಕಿ ಸಾಃ ಯತ್ತಿನಹಳ್ಳಿ(ಎಮ್.ಎ), ತಾಃ ಹಾನಗಲ್ಲ  ಈತಳು  ದಿನಾಂಕಃ19/08/2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯಿಂದ ಮನೆಯಲ್ಲಿ  ಕಾಲೇಜ್ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಕಾಲೇಜಿಗೆ ಹೋಗದೇ  ವಾಪಾಸ್ಸ್ ಇಲ್ಲಿಯವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ, ಕಾಣೆಯಾದವಳನ್ನು ಎಲ್ಲ ಕಡೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಹಾಗೂ ತಮ್ಮೂರ ಮಾಲತೇಶ ಮಲ್ಲಪ್ಪ ಕ್ವ್ಷೌರದ ಈತನು ದೀಪಾ ಇವಳು ಅಲ್ಪವಯಸ್ಸಿನವಳು ಅಂತಾ ಗೊತ್ತಿದ್ದರೂ ಕೂಡ ಯಾವುದೋ ಆಸೆ ಆಮೀಷೆ ತೋರಿಸಿ ಮಾಲತೇಶನು ತನ್ನ ಜೊತೆ ಕರೆದುಕೊಂಡು ಹೋದ ಬಗ್ಗೆ ನಮಗೆ ಅನುಮಾನ ಇರುತ್ತದೆ. ಅಂತಾ ದೀಪಾ ಇವರ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ .

                     ಲಿಂಗರಾಜ ತಂದೆ ರಾಮಪ್ಪ ನ್ಯಾಮತಿ ವಯಾ 45 ವರ್ಷ ಸಾಃ ನಾಗವಂದ ಇವನು ತನ್ನ ತಾಯಿ ಹೆಸರಿನಲ್ಲಿರುವ ನಾಗವಂದ ಗ್ರಾಮದ ರಿ ಸ ನಂ 206/2 ರ 2 ಎಕರೆ ಹೊಲ ಮಾಡುತ್ತಾ ಬಂದು ಹೊಲ ಮತ್ತು ಮನೆ ಸಂಬಂದ ನಾಗವಂದ ಗ್ರಾಮದ ಕೆವಿಜಿ ಬ್ಯಾಂಕದಲ್ಲಿ ತನ್ನ ತಾಯಿ ಹೆಸರಿನಲ್ಲಿ ಸುಮಾರು 3 ಲಕ್ಷ ಹಾಗೂ ಅಲ್ಲಲ್ಲಿ ಕೈಗಡ ಅಂತಾ ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿ ಹೊಲಮನೆ ಕೆಲಸ ಮಾಡುತ್ತಾ ಬಂದಿದ್ದು ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಮತ್ತು ಈ ವರ್ಷ ಸಹ ಅಕಾಲಿಕವಾಗಿ ಹೇಚ್ಚಾಗಿ ಮಳೆಯಾಗಿದ್ದರಿಂದ ಹೊಲದಲ್ಲಿ ಹಾಕಿದ ಬೆಳೆ ಸರಿಯಾಗಿ ಬಾರದ್ದರಿಂದ ಮಾಡಿದ ಸಾಲವನ್ನು ತೀರಿಸುವದು ಹೇಗೆ ಅಂತಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ದಿನಾಂಕ 21-08-2021 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾಗವಂದ ಗ್ರಾಮದ ತನ್ನ ವಾಸದ ಮನೆಯ ಪಕ್ಕ ಇರುವ ಖಾಲಿ ಮನೆಯ ಹಾಲಿನ ಅಡ್ಡತೊಲೆಗೆ ಹಗ್ಗದಿಂದ ಉರಲು ಹಾಕಿಕೊಂಡು ಆತ್ಮಹತ್ಮೆ ಮಾಡಿಕೊಂಡಿರುತ್ತಾನೆ ವಿನಃ ಅವರ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಇದರಲ್ಲಿಯ ಮೃತಳ ಹೆಂಡತಿ ಠಾಣೆಗೆ ಹಾಜರಾಗಿ ನೀಡಿದ ವರದಿಯನ್ವಯ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:31/2021 ವ್ಯಕ್ತಿ ಸಾವು .

                     ವೀರನಗೌಡ ತಂದೆ ಚನ್ನಬಸನಗೌಡ ಸಂಕಮ್ಮನವರ ವಯಾ-45 ವರ್ಷ, ಜ್ಯಾತಿ: ಹಿಂದು ಲಿಂಗವಂತ, ಉದ್ಯೋಗ: ವ್ಯವಸಾಯ, ಸಾ: ನೆಲೋಗಲ್ ತಾ: ಹಾವೇರಿ. ಇವನಿಗೆ ಮೂರು  ಜನ ಸಹೋದರರಿದ್ದು ಮೃತನ ತಂದೆಯ ಹೆಸರಿನಲ್ಲಿ ಜಮೀನದ ರಿ ಸ ನಂಬರ 78/4ಬ ಕ್ಷೇತ್ರ 3 ಎಕರೆ 28 ಗುಂಟೆ ಜಮೀನು ಇದ್ದು 3 ಎಕರೆ ಕಮೀಣನ್ನು ಸಾಗುವಳಿ ಮಾಡುತ್ತಾ ಬಂದಿದ್ದು ಇರುತ್ತದೆ. ಪ್ರಕಣದಲ್ಲಿ ಮೃತನ ತಂದೆಗೆ ವಯಸ್ಸಾಗಿದ್ದರಿಂದ ಮನೆಯ ಜವಾಬ್ದಾರಿಯನ್ನು ನೋಡಿಕೊಂಡಿದ್ದು ಮೃತನು ತನ್ನ ತಂದೆಯ ಹೆಸರಿನಲ್ಲಿ ಹಾವೇರಿ ಕೆ,ವ್ಹಿ,ಜಿ ಬ್ಯಾಂಕಿನಲ್ಲಿ 1 ಲಕ್ಷ ರೂ ಬೆಳೆ ಸಾಲ ಪಡೆದುಕೊಂಡಿದ್ದು ಅಲ್ಲದೇ ಊರಲ್ಲಿ ಕೈಗಡವಾಗಿ ಸಾಲ ಮಾಡಿದ್ದು ಹಾಗೂ ಪಿಯಾಧಿಯ ಹೆಸರಿನಲ್ಲಿ ಖಾಸಗಿ ಬ್ಯಾಂಕಿನಲ್ಲಿ ಸಾಲ ತೆಗೆಸಿಕೊಟ್ಟಿದ್ದು ಮಾಡಿದ ಸಾಲಗ ಬಗ್ಗೆ ಚಿಂತೆ ಮಾಡುತ್ತಾ ಮನೆಯ ಜವಾಬ್ದಾರಿಯನ್ನು ಹೇಗೆ ನಿಬಾಯಿಸುವುಸುದು ಬೆಳೆ ಸರಿಯಾಗಿ ಬೆಳೆದಿರುವುದಿಲ್ಲ ಅಂತಾ ಸಾಲದ ಬಗ್ಗೆ ಚಿಂತೆ ಮಾಡುತ್ತಾ ಅದೇ ಚಿಂತೆಯಲ್ಲಿ ಈ ದಿವಸ ದಿನಾಂಕಃ 21-08-2021 ರಂದು ಸಂಜೆ 4-00 ಘಂಟೆಯಿಮದ 4-30 ಘಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ಪ್ಲಾಸ್ಟೀಕ ಹಗ್ಗದಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು, ಇತನ ಸಾವಿನಲ್ಲಿ ಯಾರ ಮೇಲೂ ಸಂಶಯವಿರುವದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-08-2021 06:34 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ