ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 73/2021 ಬೈಕ್ ಕಳ್ಳತನ.

               ಹಾವೇರಿ ಶಹರ ಪೊಲೀಸ್ ಠಾಣಾ ಹದ್ದಿ ಪೈಕಿ,  ಹಾವೇರಿಯ ಶಹರದ ದೇಸಾಯಿಗಲ್ಲಿಯಲ್ಲಿ ಬರುವ ನಿರಂಜನ ಕಂಬಳಿ ಸಾ|| ದೇಸಾಯಿಗಲ್ಲಿ ಹಾವೇರಿ ಇವರು ತಮ್ಮ ಮನೆ ಮುಂದಿನ ಜಾಗೇಯಲ್ಲಿ ದಿನಾಂಕ 20-07-2021 ರಾತ್ರಿ 23 ಗಂಟೆಯಿಂದ  ದಿನಾಂಕ 21-07-2021 ರ ಬೆಳಿಗ್ಗೆನ 06-00 ಗಂಟೆಯ ನಡುವಿನ ಅವಧಿಯಲ್ಲಿ ನಿಲ್ಲಿಸಿದ HONDA UNICORN ಕಂಪನಿಯ RED ಕಲರ್ ಮೋಟರ್ ಸೈಕಲ್ಲ ನಂಬರ KA-27/EP 9875  ಚೆಸ್ಸಿ ನಂ- ME4KC401JLA090733 ಮತ್ತು ಇಂಜೆನ್ ನಂಬರ KC40EA0090858 ನೇದ್ದರ ಅಂದಾಜು ಮೌಲ್ಯ 1,21,488/- ರೂ ಕಿಮ್ಮತ್ತಿನ ಮೋಟರ ಸೈಕಲ್ಲನ್ನು ಯಾರೋ ಕಳ್ಳರು ಹ್ಯಾಂಡಲ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನುತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 104/2021 ಕಲಂ: 506,341,376,448 IPC.

              ಈರಪ್ಪ ಸೋಮಪ್ಪ ಲಮಾಣಿ ಸಾ|| ಶಿವಪೂರ ತಾಂಡಾ ಇವನು  ಶೋಬಾ ಇವಳೊಂದಿಗೆ ಈಗ 5-6 ತಿಂಗಳಿನಿಂದ ಸಲಗೆಯಿಂದ ಮಾತಾಡುತ್ತಾ ಅವಳನ್ನು ನೋಡುತ್ತಾ ಬಂದಿದ್ದು ಇದಕ್ಕೆ ಶೋಬಾ ಇವಳು ಅವನು ನಮ್ಮೂರಿನವನು ನಮ್ಮ ಸಹೋದರನಂತೆ ಇದ್ದಾನೆ ಅಂತಾ ತಿಳಿದು ಅವನ ಕೂಡ ಮಾತನಾಡುತ್ತಾ ಬಂದಿದ್ದರಿಂದ ಅವನು ಶೋಬಾಗೆ ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ ಅಂತಾ ಅಂದಾಗ ಅವನಿಗೆ ನನ್ನ ಮದುವೆ ಆಗಿದ್ದು ನನಗೆ ಗಂಡ ಮಕ್ಕಳು ಇದ್ದಾರೆ ನೀನಗೂ ಮದುವೆ ಆಗಿದೆ ಸಂಸಾರ ಅದೇ ಊರಲ್ಲಿ ಕೇಳಿಸಿಕೊಂಡವರು ಏನಂದಾರು ಅಂತಾ ಮರ್ಯಾದೆಗೆ ಅಂಜಿ ದೂರ ಇರಲ್ಲಿಕ್ಕೆ ಹತ್ತಿದ್ದು ಹೀಗಿರುವಾಗ ಇದನ್ನೇ ಆರೋಪಿತನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದು ಶೋಬಾ ಇವಳ ಗಂಡ ದುಡಿಯಲ್ಲಿಕ್ಕೆ ಅಂತಾ ಹೋಗಿದ್ದು ತನ್ನ ಎರಡು ಸಣ್ಣ ಮಕ್ಕಳೊಂದಿಗೆ ಇದ್ದಳು ಹೀಗಿರುವಾಗ ದಿನಾಂಕ;-19/07/2021 ರಂದು ರಾತ್ರಿ 10-00 ಘಂಟೆ ಸುಮಾರಿಗೆ ಶೋಬಾ ಇವರ ಮನೆ ಬಾಗಿಲನ್ನು ಬಡಿದಾಗ ಎದ್ದು ಕದ ತೆಗೆದಿದ್ದು ಒಮ್ಮೇಲೆ ಈರಪ್ಪ ಒಮ್ಮೆಲೆ ಶೋಬಾ ಇವಳ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಾಟಿನ ಮೇಲೆ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದು ಆಗ ಚಿರಾಡಿದ್ದರಿಂದ ಜನ ಸೇರಿದ್ದು ಈರಪ್ಪ ಜನರನ್ನು ದೂಡಿ ಪರಾರಿಯಾಗಿ ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 28-07-2021 01:04 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ