ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:33/2021 ಮಹಿಳೆ ಕಾಣೆ.

               ಕುಮಾರಿ: ಕವನಾ ತಂದೆ ನಾಗಪ್ಪ ಸಾರ್ಥಿ ವಯಾ:18 ವರ್ಷ ಜಾತಿ:ಕುರುಬ ಉದ್ಯೋಗ:ಮನೆಕೆಲಸ ವಾಸ:ಮಾಕನೂರು. ತಾ:ರಾಣೆಬೆನ್ನೂರ ಇವಳು ದಿನಾಂಕ:19/05/2021 ರಂದು ಮದ್ಯಾಹ್ನ 03-00 ಗಂಟೆಯಿಂದ ಸಂಜೆ 05-00 ಗಂಟೆಯವರೆಗಿನ ನಡುವಿನ ಅವಧಿಯಲ್ಲಿ ಮಾಕನೂರು ಗ್ರಾಮದ ವಾಸದ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಹಾಗೂ ಮಾಕನೂರು ಗ್ರಾಮದ ಸಂತೋಷ ತಂದೆ ನಿಂಗಪ್ಪ ಮೇಡ್ಲೇರಿ ಇವನೊಂದಿಗೆ ಹೋಗಿರುವ ಸಂಶಯವಿದ್ದು ಕಾಣೆಯಾದ ತನ್ನ ತಂಗಿ ಕವನಾ ಇವಳಿಗೆ ಹುಡುಕಿಸಿಕೊಡಬೇಕೆಂದು ಅನಿಲಕುಮಾರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ಕಲಂ: 279, 304(A) IPC.

               ದಿನಾಂಕ:-15-04-2021 ರಂದು ಮದ್ಯಾಹ್ನ 01-00 ಘಂಟೆಯ ಸುಮಾರಿಗೆ ಬೆಳವಲಕೊಪ್ಪ ಗ್ರಾಮದ ಕಡೆಯಿಂದ ಹುಲಗೂರ ಕಡೆಗೆ ಹೋದ ರಸ್ತೆಯ ಮೇಲೆ ಬಸವಂತಪ್ಪ ಭರಮಣ್ಣವರ ಸಾ: ಬೆಳವಲಕೊಪ್ಪ ಇವರ ಜಮೀನ ಹತ್ತಿರ ಇದರಲ್ಲಿ ಮಹಮೋದಶಹಿದ್ ಮಹಮುಬಸಾಬ್ ಯದುಸಾಬಣ್ಣನವರ ಇತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ ನಂಬರ: ಕೆಎ-27/ಇಎನ್-7923 ನೇದ್ದನ್ನು ಬೆಳವಕೊಪ್ಪದಿಂದ ಹುಲಗೂರ ಕಡೆಗೆ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಜನರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಿಸಿಕೊಂಡು ಹೋಗಿ ರಸ್ತೆಯ ಮೇಲೆ ತನ್ನ ಮೋಟಾರ ಸೈಕಲದಲ್ಲಿ ಹಿಂದೆ ಕುಳಿತ್ತಿದ್ದ ತನ್ನ ಹೆಂಡತಿ ಶ್ರೀಮತಿ ಜೈತುನಬಿ ಕೊಂ ಮಹ್ಮದಶಾಹೀದ ಯಾದುಸಾಬನವರ, ವಯಾ- 19 ವರ್ಷ, ಇವಳನ್ನು ರಸ್ತೆಯ ಮೇಲೆ ಕೆಡವಿ, ತಲೆಗೆ ಬಲವಾದ ಒಳಪೆಟ್ಟು ಪಡಿಸಿ, ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುವ ಕಾಲಕ್ಕೆ ದಿನಾಂಕ: 21/05/2021 ರಂದು ಬೆಳಗಿನ ಜಾವ 06-00 ಘಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:80/2021 ಮಹಿಳೆ ಕಾಣೆ.

               ಕು||ಸುಮಾ ತಂದೆ ಶಿವಲಿಂಗಪ್ಪ ಬಿದರಗಡ್ಡಿ ವಯಾ.13 ವರ್ಷ 11 ತಿಂಗಳು ಉದ್ಯೋಗ. ವಿದ್ಯಾರ್ಥಿ ಸಾ.ಶಂಕರಿಕೊಪ್ಪ ತಾ.ಹಾನಗಲ್ಲ ಇವಳು ಶಾಲೆ ರಜೆ ಇರುವದರಿಂದ ತನ್ನ ಅಜ್ಜನ ಮನೆಯಾದ ಬ್ಯಾಗವಾದಿ ಗ್ರಾಮಕ್ಕೆ ಅಂತಾ ಹೋಗಿ ಅಲ್ಲಿಯೆ ಕಳೆದ ಎರಡು ತಿಂಗಳಿನಿಂದ ತನ್ನ ಅಜ್ಜ ಅಜ್ಜಿಯ ಸಂಗಡ ವಾಸ ಇದ್ದು ದಿನಾಂಕ : 20-05-2021 ರಂದು ಮುಂಜಾನೆ 04 ಘಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಿ ಬರುತ್ತೇನೆ ಅಂತಾ ಮನೆಯಿಂದ ಹೊರಗಡೆ ಹೋದವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಅಥವಾ ಯಾರೋ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಲಲಿತಾವ್ವಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 26-05-2021 05:16 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ