ಅಭಿಪ್ರಾಯ / ಸಲಹೆಗಳು

     ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:73/2021 ಕಲಂ: 379 IPC.

             ದಿನಾಂಕ:28-01-2021 ರಂದು  ರಾತ್ರಿ 21-30 ಗಂಟೆಯಿಂದ ದಿನಾಂಕ:29-01-2021 ರಂದು ಬೆಳಗಿನ ಜಾವ 01-20 ಗಂಟೆಯ ನಡುವಿನ ಅವಧಿಯಲ್ಲಿ ಬಸವರಾಜ ಗೌಡಶಿವಣ್ಣನವರ ಸಾ|| ರಾಣೆಬೇನ್ನೂರ ಇವರು ತನ್ನ ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ಸಿದ್ದೇಶ್ವರ ದೇವಸ್ಥಾನದ ಹಿಂಭಾಗ ಇರುವ ಶ್ರೀ ಚನ್ನಪ್ಪಜ್ಜನ ಮಠ ಹೊರಗೆ ತನ್ನ ಹಿರೋ ಹೊಂಡಾ ಸ್ಲಂಡರ್ ಪ್ಲಸ್ ಮೋಟಾರ ಸೈಕಲ್ ನಂ: ಕೆಎ-27/ ಯು-6272 ಇದರ ಇಂಜಿನ ನಂ: HA10EFAHK50199 ಚಾಸ್ಸೀಸ್ ನಂಬರ: MBLHA10EZAHK11126 ನೇದ್ದು ಅ:ಕಿ:15,000/-ರೂಗಳು ನೇದ್ದನ್ನು ನಿಲ್ಲಿಸಿ ಭಜನೆ ಕಾರ್ಯಕ್ರಮಕ್ಕೆ ಹೋದಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:75/2021 ಮಹಿಳೆ ಕಾಣೆ .

               ಚಂದ್ರವ್ವ ಶಿವಪ್ಪ ಹಿಲದಳ್ಳಿ ವಯಾ: 22 ಸಾ|| ಹಿಲದಳ್ಳಿ ಇವಳು ದಿನಾಂಕ 16-04-2021 ರಂದು ರಾತ್ರಿ 10-30 ಗಂಟೆಯಿಂದಾ ದಿನಾಂಕ 17-04-2021 ರಂದು ಬೆಳಗಿನ 6-00 ಗಂಟೆಯ ನಡುವಿನ ಅವದಿಯಲ್ಲಿ ಮನೆಯಿಂದಾ ಯಾರಿಗೂ ಹೇಳದೇ ಕೇಳದೇ ಮನೆ ಬಿಟ್ಟು ಹೋದವಳು ಈ ವರೆಗೂ ಬಂದಿರುವುದಿಲ್ಲಾ ಅವಳಿಗೆ ಹುಡಕಿಕೊಡಲು ವಿನಂತಿ ಅಂತಾ ಶಿವಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು  ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ಅನಾಮದೇಯ ವ್ಯಕ್ತಿ ಸಾವು.

                 ಸುಮಾರು 55 ರಿಂದ 58 ವಯಸ್ಸಿನ ಅನಾಮಧೇಯ ಗಂಡಸು ಇತನು ದಿನಾಂಕ 12-04-2021 ರಂದು ಸಾಯಂಕಾಲ ಹೊಸರಿತ್ತಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಅಸ್ವಸ್ಥನಾಗಿದ್ದು ಅವನಿಗೆ ಉಪಚಾರಕ್ಕಾಗಿ ಕೂಡಿದ ಜನರು 108 ಅಂಬ್ಯಲೆನ್ಸ ವಾಹನದಲ್ಲಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಟಿದ್ದು ಸದರಿ ಅನಾಮಧೇಯ ವ್ಯಕ್ತಿಯು ದಿನಾಂಕ 21-04-2021 ರಂದು ಮುಂಜಾನೆ 09-45 ಗಂಟೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಸಿವೆಯಿಂದ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿ಼ಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ .

                 ಸುರೇಶ ತಂದೆ ಬಸಪ್ಪ ಬಳಿಗಾರ ವಯಾ-55 ವರ್ಷ. ಜಾತಿ-ಲಿಂಗವಂತ  ಉದ್ಯೋಗ-ಚಹಾದ ಅಂಗಡಿ ವ್ಯಾಪಾರ  ಸಾ-ಕದರಮಂಡಲಗಿ ತಾ-ಬ್ಯಾಡಗಿ ಇವರು ಕದರಮಂಡಲಗಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ತಮ್ಮ ವಾಸದ ಮನೆಯ ಮುಂದೆ ಪಂಚಾಯತಿ ಜಾಗೆಯಲ್ಲಿ ಆಕ್ರಮವಾಗಿ ತಗಡುಗಳನ್ನು ಹಾಕಿಕೊಂಡು ಚಹಾದ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು ಅಲ್ಲದೆ ಇನ್ನೂ ಕೆಲವರು ಸಹಾ ಆಕ್ರಮವಾಗಿ ಪಂಚಾಯತಿ ಆಸ್ತಿಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದ್ದರಿಂದ ಪಂಚಾಯತಿಯವರು ಅನೇಕ ಸಾರಿ ತೆರವುಗೊಳಿಸಲು ನೊಟಿಸ ಜಾರಿ ಮಾಡಿದರೂ ಸಹಾ ಯಾರು ಆಕ್ರಮವಾಗಿ ಹಾಕಿದ ಅಂಗಡಿಗಳನ್ನು ತೆರವುಗೊಳಿಸದ್ದರಿಂದ ಪಂಚಾಯತಿಯವರು ಎಲ್ಲ ಅಂಗಡಿ ಮುಂದೆ ಇರುವ ಆಕ್ರಮವಾಗಿ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸಿ ಗಟಾರವನ್ನು ತೆಗೆದಿದ್ದರಿಂದ ಮುಂದೆ ನಾನು ಹೇಗೆ ಚಹಾದ ಅಂಗಡಿ ವ್ಯಾಪಾರ ಮಾಡುವದು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ:20-04-2021 ರಂದು ಮದ್ಯಾನ 2-00 ಗಂಟೆ ಸುಮಾರಿಗೆ ಎಲ್ಲಿಯೋ ಯಾವುದೊ ವಿಷಕಾರಕ ಎಣ್ಣಿಯನ್ನು ಕುಡಿದು ಮನೆಗೆ ಬಂದಿದ್ದು ಉಪಚಾರಕ್ಕೆ ರಾಣೆಬೆನ್ನೂರ, ಹಾವೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೊದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದ್ದು ನನ್ನ ತಂದೆಯ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲಾ ಅಂತಾ ಶಿಲ್ಪಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 22-04-2021 01:09 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ