ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ಕಲಂ: 379 IPC.

                ದಿನಾಂಕ:16-03-2021 ರಂದು ಬೆಳಿಗ್ಗೆ  09-00 ಗಂಟೆಯಿಂದ 09-30 ಗಂಟೆಯ ನಡುವಿನ ಅವಧಿಯಲ್ಲಿ ದಿಳ್ಳೆಪ್ಪ ಹಿರೇಮರದ ಇವರು ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ಮ್ಯಾಗೇರಿ ರಸ್ತೆಯ ಕುರಬಗೇರಿಯ ತನ್ನ  ಮನೆಯ ಮುಂದೆ  ಗೇಟ್ ಹೊರಗೆ ನಿಲ್ಲಿಸಿದ ಒಂದು ಒಂದು ಹೊಂಡಾ ಯೂನಿಕಾರ್ನ ಮೋಟಾರ ಸೈಕಲ್ ಟೆಂಪವರಿ ರಿಜಿಸ್ಟರ ನಂ: ಕೆಎ-17/ ಎನ್.ಟಿ 5350 ಇದರ ಇಂಜಿನ ನಂಬರ:KC09E6184337 ಚಾಸ್ಸೀಸ್ ನಂಬರ: ME4KC09CLB8178850 ನೇದ್ದು ಅ:ಕಿ:15,000/-ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:44/2021 ವ್ಯಕ್ತಿ ಕಾಣೆ.

                ಶೇಖರನಾಯ್ಕ ತಂದೆ ರಮೇಶನಾಯ್ಕ ನಾಯ್ಕ ವಯಾ: 25 ವರ್ಷ ಜಾತಿ: ಲಮಣಿ ಉದ್ಯೊಗ: ಬೇಕರಿ ಕೆಲಸ ಸಾ: ಹಂಗರಹಳ್ಳಿ ಹಾ:ಮೊಟೆಬೆನ್ನೂರ ತಾ:ಬ್ಯಾಡಗಿ ಇವನು ದಿನಾಂಕ;14-02-2021 ರಂದು ಮದ್ಯಾನ 2-00 ಗಂಟೆಗೆ ಮೊಟೆಬೆನ್ನೂರ ಗ್ರಾಮದಿಂದ ಕುಡಿದ ನಿಶೆಯಲ್ಲಿ ಎಲ್ಲಿಯೋ ಕಾಣೆಯಾಗಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಕಾರಣ ಶೇಖರನಾಯ್ಕ ಇವನು ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಕಾಣೆಯಾವನಿಗೆ ಹುಡುಕಿಕೊಡಬೇಕು ಅಂತಾ ಶಶಿಕುಮಾರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:03/2021 ವಿಷ ಸೇವಿಸಿ ಯವತಿ ಆತ್ಮಹತ್ಯೆ.

                ತನುಜಾ ಗಣಿಬಸಪ್ಪ ಚಲವಾದಿ ವಯಾ 16 ಇವಳಿಗೆ ಎರಡು ಮೂರು ತಿಂಗಳಿಗೊಮ್ಮೆ ಋತು ಮತಿಯ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಬರುತ್ತಿದ್ದರಿಂದ ಇವಳನ್ನು ರಾಣೇಬೆನ್ನೂರು, ರಟ್ಟಿಹಳ್ಳಿ ಹಾಗೂ ಮತ್ತೂರು ಆಸ್ಪತ್ರೆಯಲ್ಲಿ ಹಲವು ಬಾರಿ ಉಪಚಾರವನ್ನು ಕೊಡಿಸಿದರೂ ಇವಳಿಗೆ ಹೊಟ್ಟೆ ನೋವು ಕಡಿಮೆ ಆಗದೇ ತುಂಬಾ ತ್ರಾಸ್ ಮಾಡಿಕೊಳ್ಳುತ್ತಿದ್ದಳು. ದಿನಾಂಕ: 20/03/2021 ರಂದು ರಾತ್ರಿ 10:00 ಗಂಟೆಗೆ ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ತನುಜಾ ಇವಳು ದಿನಾಂಕ: 21/03/2021 ರಂದು ರಾತ್ರಿ 1:00 ಗಂಟೆಯ ಸುಮಾರಿಗೆ ಮಲಗಿದ್ದವಳು ತುಂಬಾ ತ್ರಾಸ್ ಮಾಡಿಕೊಂಡು ಮಲಗಿದ್ದಲ್ಲಿಯೇ ಒದ್ದಾಡುತ್ತಿಳು ಕೂಡಲೇ ಮನೆಯವರೆಲ್ಲರೂ ಕೂಡಿ ಅವಳನ್ನು ವಿಚಾರಿಸಿದಾಗ ತನುಜಾ ತಾನು ಬಚ್ಚಲು ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾಳೆ. ನಂತರ ಇವಳನ್ನು ಕೂಡಲೇ ಉಪಚಾರಕ್ಕೆಂದು ರಟ್ಟಿಹಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ತನುಜಾ ಇವಳಿಗೆ ಪ್ರಾಥಮಿಕ ಉಪಚಾರವನ್ನು ನೀಡಿ ನಂತರ ಹೆಚ್ಚಿನ ಉಪಚಾರಕ್ಕೆಂದು ಶಿಕಾರಿಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅಂಬುಲೆನ್ಸ್ ವಾಹನದಲ್ಲಿ ಶಿಕಾರಿಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಉಪಚಾರ ನೀಡುತ್ತಿರುವಾಗ ತನುಜಾ ಇವಳು ದಿನಾಂಕ: 21/03/2021 ರಂದು ಸಮಯ ಸುಮಾರು ಬೆಳಿಗ್ಗೆ 3:15 ಗಂಟೆಗೆ ಮೃತಪಟ್ಟಿರುತ್ತಾಳೆ ವಿನಃ ಇವಳ ಸಾವಿನಲ್ಲಿ  ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 23-03-2021 01:25 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ