ಅಭಿಪ್ರಾಯ / ಸಲಹೆಗಳು

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:19/2021 ಕಲಂ: 379 IPC.

ಶ್ರೀ ಮೊಹ್ಮದರಫಿ ತಂದೆ ಹುಸೇನಸಾಬ ದೊಡ್ಡಮನಿ, ವಯಾ-28 ವರ್ಷ, ಜಾತಿ-ಮುಸ್ಲಿಂ, ಉದ್ಯೋಗ-ಕೃಷಿ ಕೆಲಸ, ಸಾ; ಕುಡುಪಲಿ, ತಾ; ರಟ್ಟಿಹಳ್ಳಿ. ಜಿ; ಹಾವೇರಿ. ಇವರು ದಿನಾಂಕ; 15-02-2021 ರಂದು ರಾತ್ರಿ 9-00 ಗಂಟೆಯಿಂದ ರಾತ್ರಿ 11-30 ಗಂಟೆಯ ನಡುವಿನ ಅವದಿಯಲ್ಲಿ ಚಿಕ್ಕೇರೂರ ಗ್ರಾಮದ ಬಸ್ಟ್ಯಾಂಡ ಹತ್ತಿರ ತನ್ನ ಬಾಬತ್ತ ಹಿರೋ ಹೊಂಡಾ ಕಂಪನಿಯ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆಎ-27/ವಿ-5085 ಅ.ಕಿ 10.000/- ರೂ ಇದನ್ನು ಹ್ಯಾಂಡಲಾಕ್ ಮಾಡಿ ನಿಲ್ಲಿಸಿ ಚಿಕ್ಕೇರೂರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರಾ ಮೆರವಣಿಗೆ ನೋಡಲು ಹೋಗಿ ನಂತರ ವಾಪಾಸ್ ಬಂದು ಮೋಟಾರ್ ಸೈಕಲ್ ನೋಡಿದ್ದು ಮೋಟಾರ್ ಸೈಕಲ್ ಕಾಣದೆ ಇದ್ದ ಕಾರಣ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ತನ್ನ ಮೋಟಾರ್ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ. 

                 ಸಂದೇಶ ಮಂಜುನಾಥ ಕುಸುಮಣ್ಣನವರ  ಸಾ||ರಾಣೆಬೇನ್ನೂರ ಈತನು ಸರಿಯಾಗಿ ಕಾಲೇಜಿಗೆ ಹೋಗದೇ ವಿದ್ಯಾಬ್ಯಾಸ ಮಾಡದೇ ಬರೀ ಮೊಬೈಲನಲ್ಲಿ ದಿನಾಲು ಆಟ ಆಡುತ್ತಿದ್ದವನಿಗೆ ವಿದ್ಯಾಬ್ಯಾಸ ಮಾಡು ಅಂತಾ ಬುದ್ದಿ ಮಾತು ಹೇಳಿದ್ದಕ್ಕೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಬೆಸರಗೊಂಡು ತನ್ನಷ್ಟಕ್ಕೆ ತಾನೇ ದಿನಾಂಕ: 20-02-2021 ರಂದು ಸಾಯಂಕಾಲ 5-30 ಗಂಟೆಯಿಂದ 5-45 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರ ವಾಸದ ಮನೆಯ ಬೆಡರೂಮದಲ್ಲಿ ಇರುವ ಸಿಲಿಂಗ್ ಪ್ಯಾನಗೆ ಸಿರೆಯ ಸಹಾಯದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಪುಟ್ಟಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 24-02-2021 11:31 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ