ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:50/2021 ಮಹಿಳೆ ಕಾಣೆ.

                  ಶ್ರೀನಿಧಿ ತಂದೆ ಶ್ರೀನಿವಾಸ ಬೇಂದ್ರೆ, ವಯಾ: 18 ವರ್ಷ 10 ತಿಂಗಳು ಇವಳು ದಿನಾಂಕ: 20-08-2021 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ವರದಿಗಾರರ ತಮ್ಮನ ಮನೆಯಿಂದ ಹೊರಗಡೆ ಹೋದವಳು ಪರ್ತ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವಳನ್ನೂ ಈವರೆಗು ಹುಡುಕಿಕದರು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಶೀನಿವಾಸ ಪಿರ್ಯಾದಿ ನೀಡಿದ್ದು  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:113/2021 ಮಹಿಳೆ ಕಾಣೆ.

                  ಬೇಬಿ ತಂದೆ ಚಂದ್ರಪ್ಪ ಬಣಕಾರ, ವಯಾ-18 ವರ್ಷ 17 ದಿನ, ಜಾತಿ-ಹಿಂದೂ ಲಮಾಣಿ, ಉದ್ಯೋಗ: ವಿದ್ಯಾರ್ಥಿನಿ, ಸಾ: ಚೊಗಚಿಕೊಪ್ಪ ತಾಂಡ, ತಾ: ಹಿರೇಕೆರೂರ, ಇವಳು ದಿನಾಂಕ: 20-08-2021 ರಂದು ಬೆಳಗಿನ ಜಾವ 2-00 ಗಂಟೆಯಿಂದ 6-00 ಗಂಟೆಯ ನಡುವಿನ ಅವಧಿಯಲ್ಲಿ. ಚೊಗಚಿಕೊಪ್ಪ ತಾಂಡಾದ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:153/2021 ಮಹಿಳೆ ಕಾಣೆ.

                  ಕು:ಸುಶೀಲಾ @ ಸುರಭಿ ತಂದೆ ರೇವಣಸಿದ್ದಯ್ಯ ಹಿರೇಮಠ ವಯಾ:19 ವರ್ಷ ಜಾತಿ:ಹಿಂದೂ ಲಿಂಗಾಯತ ಉದ್ಯೋಗ:ವಿದ್ಯಾರ್ಥಿನಿ (ಬಿ.ಎ.ಎಂ.ಎಸ್) ಸಾ||ಹಾನಗಲ್ಲ, ರೇಣುಕಾ ನಗರ ತಾ||ಹಾನಗಲ್ಲ ಜಿ||ಹಾವೇರಿ ಇವಳು ದಿನಾಂಕ:-19/08/2021 ರಂದು ಮುಂಜಾನೆ:10-00 ಗಂಟೆಯಿಂದ ಮಧ್ಯಾಹ್ನ:02-30 ಗಂಟೆಯ ನಡುವಿನ ಅವಧಿಯಲ್ಲಿ ಹಾನಗಲ್ಲ ಶಹರದ ರೇಣುಕಾ ನಗರದ ಮನೆಯಿಂದ ಹೇಳಿದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಕಾಣೆಯಾದ ನನ್ನ ಮಗಳನ್ನು ನಮಗೆ ಪರಿಚಯದ ರಂಜಿತ ತಂದೆ ವಿಜಯಕುಮಾರ ಪೂಜಾರಿ ಸಾ||ಸಾಲಿಗ್ರಾಮ ತಾ||&ಜಿ||ಉಡುಪಿ ಹಾಲವಾಸ||ಬಮ್ಮನಹಳ್ಳಿ ತಾ||ಹಾನಗಲ್ಲ ಈತನ ಮೇಲೆ ನಮಗೆ ಸಂಶಯ ಇರುತ್ತದೆ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡುವಂತೆ ಸುಶೀಲಾ ಇವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ .

                     ಗಿರಿಜಮ್ಮ ಕೊಂ ವೀರಬಸಪ್ಪ ಗೋಣಗೇರಿ, ವಯಾ- 45 ವರ್ಷ, ಜಾತಿ- ಹಿಂದೂ ಲಿಂಗಾಯತ, ಉದ್ಯೋಗ- ಹೊಲಮನಿ ಕೆಲಸ ಸಾ: ಹಿರೆಮಾದಾಪೂರ ತಾ: ರಟ್ಟಿಹಳ್ಳಿ, ಇವಳಿಗೆ ಈಗ ಸುಮಾರು 3 ವರ್ಷಗಳಿಂದ ಅತೀಯಾಗಿ ತಲೆನೋವು ಬಂದು ಬಹಳ ತ್ರಾಸಾಗುತ್ತಿದ್ದರಿಂದ ಅವಳನ್ನು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಹಾಗೂ ಗೌಟಿ ಔಷಧ ಕೊಡಿಸಿ ಉಪಚಾರ ಮಾಡಿಸುತ್ತಾ ಬಂದಿದ್ದು, ಆದರೂ ಸಹ ಅವಳಿಗಿದ್ದ ತಲೆ ನೋವು ಅರಾಮ ಆಗದ್ದರಿಂದ ಅದೇ ವಿಚಾರವಾಗಿ ಮಾನಸಿಕ ಮಾಡಿಕೊಂಡು ಅವಳು ತನ್ನಷ್ಟಕ್ಕೆ ತಾನೇ ದಿನಾಂಕ; 20/08/2021 ರಂದು ಮುಂಜಾನೆ 05-00 ಗಂಟೆಗೆ, ಹಿರೇಮಾದಾಪೂರ ಗ್ರಾಮದ ತಮ್ಮ ಮನೆಯ ಅಡಿಗೆ ಕೋಣೆಯಲ್ಲಿ ಯಾವುದೋ ವಿಷ ಸೇವನೆ ಮಾಡಿಕೊಂಡು ತ್ರಾಸ ಮಾಡಿಕೊಳ್ಳುತ್ತಿದ್ದವಳನ್ನು ಉಪಚಾರಕ್ಕೆ ರಟ್ಟೀಹಳ್ಳಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ತಂದು ಧಾಖಲಿಸಿದಾಗ ಚಿಕಿತ್ಸೆ ಪಲಕಾರಿಯಾಗದೆ ಮರಣ ಹೊಂದಿದ್ದು ಅವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ವೀರಬಸಪ್ಪ ವರದಿ ನೀಡಿದ್ದು ಠಾಣೆಯಲ್ಲಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ವ್ಯಕ್ತಿ ಸಾವು .

                     ಬಸವೇಶ್ವರ ನಾಗರಾಜ ಮಿಜ್ಜಗಿ ಸಾ|| ಹರಿಹರ ಇವನು ಕಳೆದ ಆರು ವರ್ಷಗಳಿಂದ ರಾಣೇಬೆನ್ನೂರಿನ ಶ್ರೀಪಾದ ಕುಲಕರ್ಣಿ ಇವರ ವಾಟರ ಸರ್ವಿಸ್ ಸೆಂಟರನ್ನು ಬಾಡಿಗೆ ಪಡೆದು ಅದರಲ್ಲಿ ವಾಟರ ಸರ್ವಿಸ್ ಕೆಲಸ ಮಾಡುತ್ತಿರುವ ಕಾಲಕ್ಕೆ ದಿನಾಂಕ: 20-08-2021 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಆಕಸ್ಮಿಕ ವಿದ್ಯುತ್ತು ಶಾಕ್ ನಿಂದ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 30-08-2021 06:29 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ