ಅಭಿಪ್ರಾಯ / ಸಲಹೆಗಳು

     ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:28/2021 ಮಹಿಳೆ ಕಾಣೆ.

             ಕುಮಾರಿ|| ಯಶೋಧಾ ತಂದೆ ರಮೇಶ ಅಣ್ಣಿಗೇರಿ, ವಯಾ:-20 ವರ್ಷ ಜಾತಿ:-ಹಿಂದೂ ಲಿಂಗಾಯತ,ಉದ್ಯೋಗ:- ಧಾರವಾಡದ ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಬೆಳಗಲಿ, ಪೋಸ್ಟ|| ಹಿರೇಮಣಕಟ್ಟಿ, ತಾ|| ಶಿಗ್ಗಾಂವ ಇವಳು ದಿನಾಂಕ: 19/04/2021, ರಂದು ಮದ್ಯ ರಾತ್ರಿ 3-30  ಗಂಟೆಯಿಂದ  ಬೆಳಗಿನ 06-00 ಗಂಟೆ ನಡುವಿನ ಅವದಿಯಲ್ಲಿ ಮನೆಯಲ್ಲಿ ಯಾರಿಗೂ ಏನನ್ನು ಹೇಳದೆ ಕೇಳದೆ ಎಲ್ಲಿಯೋ ಕಾಣೆಯಾಗಿ ಹೋಗಿದ್ದು, ಇಲ್ಲಿಯವರೆಗೂ ಅವಳನ್ನು ತಮ್ಮ ಸಂಬಂಧಿಕರ ಊರುಗಳಲ್ಲಿ ಹುಡುಕಾಡಿದ್ದು, ಸಿಕ್ಕಿರುವುದಿಲ್ಲಾ, ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು  ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:63/2021 ಮಹಿಳೆ ಕಾಣೆ .

                 ಕು|| ಮಾಲತೇಶ ತಂದೆ ಶಿವಪ್ಪ ಭಜಂತ್ರಿ ವಯಾ.18 ವರ್ಷ 10 ತಿಂಗಳು ಉದ್ಯೋಗ. ಕೂಲಿ ಕೆಲಸ ಸಾ.ಶಂಕ್ರಿಕೊಪ್ಪ ತಾ.ಹಾನಗಲ್ಲ ಇವನು ದಿನಾಂಕ: 20-03-2021 ರಂದು ಮುಂಜಾನೆ 10 ಘಂಟೆ ಸುಮಾರಿಗೆ. ಮನೆಯಲ್ಲಿ ಹಾವೇರಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಈ ವರಗೆ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲಿ ಈವರೆಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಪತ್ತೆ ಮಾಡಿಕೊಡುವಂತೆ ಬಸಮ್ಮ ಪಿರ್ಯಾದಿ ನೀಡಿದ್ದು ಠಾಣೆಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ಮಹಿಳೆ ಕಾಣೆ .

                 ಆಶಾ ಗಂಡ ನೀಲಕಂಠಪ್ಪ ಕಮ್ಮಾರ ವಯಸ್ಸು: 23 ವರ್ಷ ಜ್ಯಾತಿ: ಹಿಂದು ಕಮ್ಮಾರ ಉದ್ಯೋಗ: ಮನೆಗೆಲಸ ಸಾ: ಸಂಗೂರ ತಾ: ಹಾವೇರಿ ಇವರಿಗೆ ಸನ್ 2021 ರ ಜನೇವರಿ ತಿಂಗಳಲ್ಲಿ  ಸಂಗೂರ ಗ್ರಾಮದ ನೀಲಕಂಠಪ್ಪ ಕಮ್ಮಾರ ಅಂಬುವವರೊಂದಿಗೆ ವಿವಾಹವಾಗಿ.ತನ್ನ ಗಂಡನ ಮನೆಯಲ್ಲಿದ್ದಾಗ, ಸದರಿ ಆಶಾಳು ದಿನಾಂಕ, 06-03-2021 ರಂದು ಮದ್ಯಾಹ್ನ 12-00 ಗಂಟೆಗೆ ಸಂಗೂರ ಗ್ರಾಮದ ತನ್ನ ಮನೆಯಲ್ಲಿ ಸ್ನಾನಕ್ಕಾಗಿ ನೀರು ಕಾಯಿಸಲು ಒಲೆಗೆ ಕಟ್ಟಿಗೆಗೆ ಶಿಮೆಎಣ್ಣಿ ಹಾಕಿ ಕಡ್ಡಿ ಬೆಂಕಿಪೊಟ್ಟಣದಿಂದ ಕಡ್ಡಿ ಕೆರೆದು ಒಲೆ ಹಚ್ಚಿದಾಗ ಅದೇ ಸಮಯಕ್ಕೆ  ಸದರಿಯವಳಿಗೆ ತಲೆ ಸೋತ್ತು ಬಂದು ಆಕಸ್ಮಿಕವಾಗಿ  ಒಲೆಯಲ್ಲಿ ಬಿದ್ದು  ಉಟ್ಟುಕೊಂಡಿದ್ದ ಬಟ್ಟೆಗೆ ಬೆಂಕಿ ಹತ್ತಿ ದೇಹವು ಸುಟ್ಟ ಗಾಯಗಳಾಗಿದ್ದರಿಂದ ಸದರಿ ಗಾಯಾಳುವಿಗೆ ಹಾವೇರಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೋಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಿಸದೇ ದಿನಾಂಕ  20-04-2021 ರಂದು ಬೆಳಗಿನ ಜಾವ 01-25 ಗಂಟೆಗೆ ಮೃತಪಟ್ಟಿದ್ದು ಸದರಿಯವಳ ಸಾವಿನಲ್ಲಿ ಯಾರ ಮೇಲೆಯೂ ಸಂಶಯ ಇರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮೃತಳ ಮಾವ  ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ವಿ಼ಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ .

                 ನಾಗಪ್ಪ ನೀಲಪ್ಪ ಮರಡಿ ವಯಾ: 46 ಸಾ|| ಕುರಗುಂದ ಇವನು ಸರಾಯಿ ಕುಡಿಯುತ್ತಾ ಕಂಡ ಕಂಡವರಲ್ಲಿ ಹಲವಾರು ಕಡೆ ಸಾಲಮಾಡಿದ್ದು ಸಾಲ ತಿರಿಸುವುದು ಹೇಗೆ ಮುಂದಿನ ಜೀವನ ಮಾಡುವುದು ಹೇಗೆ ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ:18/04/2021 ರಂದು ಬೆಳಿಗ್ಗೆ 07:00 ಗಂಟೆಗೆ ತನ್ನ ಮನೆಯಲ್ಲಿ ಯಾವುದೋ ವಿಷಕಾರಕ ಎಣ್ಣೇಯನ್ನು ಸೇವನೇ ಮಾಡಿ ಒದ್ದಾಡುತ್ತಿದವನಿಗೆ ಗುತ್ತಲ ಸರಕಾರಿ ಆಸ್ಪತ್ರೆಯಲ್ಲಿ ಉಪಚರಿಸಿಕೊಂಡು ದಿನಾಂಕ19-04-2021 ರಂದು ಹುಬ್ಬಳ್ಳಿ ಕಿಮ್ಸ ಆಸ್ಪತ್ರಗೆ ಕರೆದುಕೊಂಡು ಬಂದು ದಾಖಲಿಸಿದಾಗ ಉಪಚಾರ ಫಲಿಸದೇ ಸಂಜೆ 05-00 ಗಂಟೆಗೆ ಮರಣ ಹೊಂದಿರುತ್ತಾನೆ ವಿನಃ ಇವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ಸಾವಿತ್ರಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವ್ಯಕ್ತಿ ಸಾವು .

                 ರಾಮಪ್ಪ ತಂದೆ ಮಾತೆಂಗಪ್ಪ ದೊಡ್ಡಮನಿ ವಯಾ-42 ವರ್ಷ. ಜಾತಿ-ಹಿಂದೂ-ಹರಿಜನ. ಉದ್ಯೋಗ-ಕೂಲಿಕೆಲಸ. ಸಾ-ಬಿಸಲಹಳ್ಳಿ. ತಾ-ಬ್ಯಾಡಗಿ ಇವನು ಕೂಲಿಕೆಲಸ ಮಾಡಿಕೊಂಡಿದ್ದು ದಿನಾಂಕ:19-04-2021 ರಂದು ಸಂಬಂಧಿಕರು ಬಿಸಲಹಳ್ಳಿ ಗ್ರಾಮಕ್ಕೆ ಬಂದಾಗ ಅವರಿಗೆ ಊಟಕ್ಕೆ ಅಂತಾ ಮೀನು ಹಿಡಿದುಕೊಂಡು ಬಂದರಾಯಿತು ಅಂತಾ ಬಿಸಲಹಳ್ಳಿ ಗ್ರಾಮದ ಹೂಲಿಕಟ್ಟಿ ಕೆರೆಗೆ ಹೋಗಿದ್ದು ದಿನಾಂಕ:19-04-2021 ರಂದು ಸಂಜೆ 06-00 ಘಂಟೆಯಿಂದ ಅದೇ ದಿವಸ ರಾತ್ರಿ 08-30 ಘಂಟೆಯ ನಡುವಿನ ಅವಧಿಯಲ್ಲಿ ಮೀನಿನ ಬಲಿಗೆ ಆಕಸ್ಮಾತ್ ಕಾಲು ಸಿಕ್ಕು ಕೆರೆಯಲ್ಲಿ ಮುಳುಗಿ ಮರಣ ಹೊಂದಿರುತ್ತಾನೆ ವಿನಃ ನನ್ನ ತಮ್ಮನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ  ಅಂತಾ ಮೃತನ ಅಣ್ಣ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 22-04-2021 01:06 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ