ಅಭಿಪ್ರಾಯ / ಸಲಹೆಗಳು

ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:21/2021 ಕಲಂ: INFORMATION TECHNOLO GY ACT 2008 (U/s-66(C),66(D));  419,420 IPC.

                ಮೊಬೈಲ್ ನಂ: 7477774581 ನೇದ್ದರಿಂದ ದಿನಾಂಕ: 07-01-2021 ರಂದು ಮದ್ಯಾಹ್ನ ಸುಮಾರು 3-30 ಗಂಟೆಯಿಂದ ದಿನಾಂಕ: 16-01-2021 ರಂದು ಬೆಳಿಗ್ಗೆ 11-00 ಗಂಟೆಯವರೆಗೆ ಬಸವರಾಜ ಚನ್ನಬಸಪ್ಪ ಕಲ್ಲತ್ತಿ ಇವರಿಗೆ ಕರೆ ಮಾಡಿ ತಾನು ಆದಿತ್ಯ ಬಿರ್ಲಾ ಕ್ಯಾಪಿಟಲ್ ಕಂಪನಿಯ ಸಿಬ್ಬಂದಿ ಅಂತಾ ಹೇಳಿ, ಆದಿತ್ಯ ಬಿರ್ಲಾ ಕ್ಯಾಪಿಟಲ್ ಕಂಪನಿಯಿಂದ ಲೋನ್ ಅಪ್ರೂವಲ್ ಆಗಿದೆ ಅಂತಾ ನಂಬಿಸಿ, ಲೋನ್ ಹಣವನ್ನು ಖಾತೆಗೆ ವರ್ಗಾವಣೆ  ಮಾಡಲು ಪ್ರೋಸೆಸಿಂಗ್ ಫೀ ಅಂತಾ ರೂ.3,500/- ಇನ್ಸೂರೆನ್ಸ ಫೀ ಅಂತಾ 9,600/- ಟಿ.ಡಿ.ಎಸ್. ಫೀ ಅಂತಾ 11,900/- ಮತ್ತು ಎನ್ಓಸಿ ಫೀ ಅಂತಾ 10,150/- ಗಳನ್ನು ತನ್ನ ಎಸ್.ಬಿ.. ಬ್ಯಾಂಕ್ ಅಕೌಂಟ್ ನಂ.39797443877, IFSC Code:SBIN0004289 ಗೆ ಮತ್ತು ಲೋನ್ ಕ್ಯಾನ್ಸಲೇಶನ್ ಫೀ ಅಂತಾ 3,000/-ರೂಪಾಯಿಗಳನ್ನು ಅವನ ಪೆಟಿಎಂ ಅಕೌಂಟ್ ನಂ.7477774581 ಗೆ, ಹೀಗೆ ಒಟ್ಟು ರೂ.38,150/- ಗಳನ್ನು ಗ್ರಾಮೀಣ ಬ್ಯಾಂಕ್ ಅಕೌಂಟ್ ನಂಬರ್.89003929618 ನಿಂದ ಹಾಕಿಸಿಕೊಂಡು, ಬಸವರಾಜ ಖಾತೆಗೆ ಲೋನ್ ಹಣವನ್ನು ವರ್ಗಾವಣೆ   ಮಾಡದೇ ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನುತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:32/2021 ಕಲಂ: 279,304(A) IPC.

                ದಿನಾಂಕ; 20-03-2021 ರಂದು ಮುಂಜಾನೆ 10-45 ಗಂಟೆ ಸುಮಾರಿಗೆ ಹಂಸಭಾವಿ-ಹಿರೇಕೆರೂರ ರಸ್ತೆ ಮೇಲೆ ಹಂಸಭಾವಿ ಗ್ರಾಮದ ಮಂಜುನಾಥ ಮುರಡಕ್ಕನವರ ಇವರ ಅಡಿಕೆ ತೋಟದ ಹತ್ತಿರ ಗಣೇಶ ತಂದೆ ಅಜ್ಜಪ್ಪ ಬನ್ನಿಹಟ್ಟಿ ಸಾ; ಬ್ಯಾಡಗಿ ವಯಾ-36 ವರ್ಷ, ಇವರು ತನ್ನ ಮೋಟಾರ್ ಸೈಕಲ್ಲ ನಂ; ಕೆಎ 27/ಡಬ್ಲೂ-0266 ನೇದ್ದನ್ನು ಹಂಸಭಾವಿ ಕಡೆಯಿಂದ ಹಿರೇಕೆರೂರ ಕಡೆಗೆ ಅತೀ ಜೋರಿನಿಂದ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆ ಎಡ ಸೈಡಿನಲ್ಲಿ ಇರುವ ಆಲದ ಮರಕ್ಕೆ ಡಿಕ್ಕಿ ಮಾಡಿ ಅಪಘಾತ ಮಾಡಿಕೊಂಡು ಉಪಚಾರಕ್ಕೆ ಹಂಸಭಾವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವ್ಶೆದ್ಯರು ಪರೀಕ್ಷೆ ಮಾಡಿ ನೋಡಿ ಗಣೇಶ ಬನ್ನಿಹಟ್ಟಿ ಇವರು ಮೃತಪಟ್ಟಿರುತ್ತಾರೆ ಅಂತಾ ಮುಂಜಾನೆ 11-15 ಗಂಟೆ ಸುಮಾರಿಗೆ ತಿಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021 ಮಹಿಳೆ ಕಾಣೆ.

                ದಿನಾಂಕ: 19-03-2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಇದರಲ್ಲಿಯ ಶಕುಂತಲಾ ತಂದೆ ನಿಂಗನಗೌಡ ಪಾಟೀಲ ವಯಸ್ಸು: 20 ವರ್ಷ, ಜಾತಿ: ಹಿಂದೂ ಲಿಂಗವಂತ, ಉದ್ಯೋಗ: ವಿದ್ಯಾಬ್ಯಾಸ, ಸಾ: ಕೆ ಬಿ ತಿಮ್ಮಾಪುರ ತಾ: ಸವಣೂರ ಇವರು  ತಮ್ಮ ಮನೆಯಿಂದ ಬಂಕಾಪುರ ಕಾಲೇಜಿಗೆ ಅಂತಾ ಹೇಳಿ ಹೋದವಳು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಇವಳು 5 ಪೂಟು 4 ಇಂಚು ಎತ್ತರವಾಗಿದ್ದು, ಗೋದಿ ವರ್ಣ, ಸಾದಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಬಣ್ಣದ ಕೂದಲಗಳು, ದುಂಡನೇಯ ಮೂಗು, ಇರುತ್ತದೆ. ನನ್ನ ಮಗಳು ಹೋಗುವಾಗ ಆಕಾಶ ಬಣ್ಣದ ಚೂಡಿ ಚಾಕಲೇಟ್ ಬಣ್ಣದ ಪ್ಯಾಂಟ ಧರಿಸಿದ್ದು ಅದೆ. ಇವರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ .ಇವಳಿಗೆ ಹುಡುಕಿ ಕೊಡುವಂತೆ ನೀಡಿದ ಪಿರ್ಯಾದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 23-03-2021 01:02 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ