ಅಭಿಪ್ರಾಯ / ಸಲಹೆಗಳು

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:13/2021 ಕಲಂ: 279, 304(A)IPC.

                      ಶಿವರಾಯಪ್ಪ ತಂದೆ ಹನುಮಂತಪ್ಪ ಹಂಚಿನಮನಿ @ ಪೂಜಾರ ಸಾಃ ಅತ್ತಿಕಟ್ಟಿ ಇತನು ದಿನಾಂಕಃ 19-02-2021 ರಂದು ಸಾಯಂಕಾಲ 07-00 ಗಂಟೆಗೆ ಬಜಾಜ ಸಿಟಿ-100 ಮೋಟರ್ ಸೈಕಲ್ ನಂಬರ ಕೆಎ-27/ಇಕೆ-0951 ನೇದ್ದನ್ನು ಸವಾರಿ ಮಾಡಿಕೊಂಡು ಹಂಸಬಾವಿಯಿಂದ-ಅತ್ತಿಕಟ್ಟಿಗೆ ಗ್ರಾಮದ ಕಡೆಗೆ ಬರುವಾಗ ಅತೀ ಜೋರಾಗಿ ನಿರ್ಲಕ್ಷ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು ಚಿಕ್ಕಣಜಿ ತಾಂಡಾ ಮತ್ತು ಚಿಕ್ಕಣಜಿ ಗ್ರಾಮದ ಮಧ್ಯದಲ್ಲಿ ಹಂಸಬಾವಿ-ತಿಳುವಳ್ಳಿ ರಸ್ತೆಯ ಮೇಲೆ ಒಂದು ಎತ್ತಿನ ಗಾಡಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ, ಸಾದಾ ವ ಭಾರಿ ಗಾಯಗಳನ್ನು ಹೊಂದಿ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾಗ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕಃ 20-02-2021 ರಂದು ಬೆಳಗಿನ ಜಾವ 04-30 ಗಂಟೆಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:20/2021 ವ್ಯಕ್ತಿ ಕಾಣೆ. 

                  ಸಿದ್ದಪ್ಪ ಜಟ್ಟೇಪ್ ಸುತ್ತಕೊಟಿ ಮತ್ತು ಜಟ್ಟೆಪ್ಪ ಬಸವಣ್ಣೆಪ್ಪ ಸುತ್ತಕೊಟಿ ಇವರು ರಾಣೇಬೆನ್ನೂರು ಶಹರದ ಎ.ಪಿ.ಎಮ್.ಸಿ. ಯಾರ್ಡದಲ್ಲಿ ಒಂದು ದಲಾಲಿ ಅಂಗಡಿ ಇಟ್ಟುಕೊಂಡು ಅದರ ವ್ಯಾಪಾರ ಮಾಡಿಕೊಂಡಿದ್ದು ವ್ಯಾಪಾರದಲ್ಲಿ ಲುಕ್ಷಾನು ಆಗಿ ತುಂಭಾ ಸಾಲವಾಗಿದ್ದರಿಂದ ಮನನೊಂದು ದಿನಾಂಕ:19-02-2021 ರಂದು ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತಾ ಪತ್ರ ಬರೆದಿಟ್ಟು ಯಾರಿಗೂ ಹೇಳದೇ ಕೇಳದೇ ಮನೆಬಿಟ್ಟು ಹೋಗಿರುತ್ತಾರೆ ಅವರನ್ನು ಹುಡುಕಿಕೊಡಿ ಅಂತಾ ಸವಿತಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:26/2021 ಕಲಂ: 454, 457, 380 IPC.

                 ಉಮೇಶ ಕೃಷ್ಣಪ್ಪ ಹಿರೇಹೊಳದ  ಸಾ:ಶಿಗ್ಗಾವಿ ಇವರ ಸಂಬಂದಿಕರ ಮನೆಯಲ್ಲಿ ಮದುವೆ ಕಾರ್ಯಕ್ರಮ ಇದ್ದ ನಿಮಿತ್ಯ ಮನೆಯವರೆಲ್ಲರೂ ಕೂಡಿಕೊಂಡು ದಿನಾಂಕ : 14-02-2021 ರಂದು ಮುಂಜಾನೆ 11.00 ಗಂಟೆಯ ಸುಮಾರು ತನ್ನ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ : 15-02-2021 ಸಂಜೆ 19.20 ಗಂಟೆಗೆ ಮನೆಗೆ ಬಂದು ನೋಡಲಾಗಿ ಮುಂಚಿನ ಬಾಗಿಲಕ್ಕೆ ಹಾಕಿದ ಕೀಲಿ ಮುರಿದಿತ್ತು ಬಾಗಿಲು ಖುಲ್ಲಾ ಆಗಿತ್ತು ಒಳಗಡೆ ಹೋಗಿ ನೋಡಲಾಗಿ ಟ್ರಜೇರಿ ಬಾಗಿಲು ಮುರಿದಿದ್ದು ಒಳಗೆ ಇದ್ದ ಸಾಮಾನುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಚೆಕ ಮಾಡಿ ನೋಡಲಾಗಿ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳು ಒಟ್ಟು ತೂಕ  ಮೂರು ಮುಕ್ಕಾಲು ತೊಲೆ ತೂಕದ್ದು ರೋಖ ಹಣ 1.00.000/- ಹಾಗೂ 15.000/- ರೂ ಕಿಮ್ಮತ್ತಿನ ಬೆಳ್ಳಿ ಸಾಮಾನುಗಳು ಇವುಗಳು ಇರಲಿಲ್ಲಾ ಯಾರೋ ಕಳ್ಳರು ಮನೆಯ ಬಾಗಿಲ ಹಾಕಿದ ಕೀಲಿಯನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:02/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ. 

                 ಭೂಪಾಲ ತಂದೆ ದೇವೆಂದ್ರಪ್ಪ ಕುಂಭೋಜಿ, ವಯಾ- 45 ವರ್ಷ, ಜಾತಿ- ಜೈನ್ ದಿಗಂಬರ, ಉದ್ಯೋಗ- ಶೇತ್ಕಿ ಕೆಲಸ, ಸಾ; ಹೊಸೂರ, ತಾ: ಶಿಗ್ಗಾಂವ ಇವರು 2019-20 ನೇ ಇಸ್ವಿಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ದುಂಡಸಿಯಲ್ಲಿ 1,07,653/- ರೂಪಾಯಿ ಬೆಳೆಸಾಲ ಮಾಡಿದ್ದು, ಮತ್ತು ಊರಲ್ಲಿ ಮಹಿಳಾ ಸಂಘಗಳಲ್ಲಿ ಹಾಗೂ ಅವರಿವರ ಹತ್ತಿರ ಮಾಡಿದ ಕೈ ಗಡ ಸಾಲವನ್ನು ಕಟ್ಟಲು ಆಗಿರಲಿಲ್ಲಾ, ಜಮೀನದಲ್ಲಿ ಬೆಳೆದ ಬೆಳೆಗಳು ಈಗ 2-3 ವರ್ಷಗಳಿಂದ ಮಳೆಯ ಅತೀವೃಷ್ಟಿಯಿಂದಾಗಿ ಬೆಳೆಗಳು ಸರಿಯಾಗಿ ಬರಲಿಲ್ಲಾ ಹೀಗಾಗಿ ಸಾಲ ತೀರಿಸುವುದು ಹೇಗೆ ಅಂತಾ ಮನಸ್ಸಿಗೆ ಬೇಜಾರ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ದಿನಾಂಕ; 19/02/2021 ರಂದು ಸಾಯಂಕಾಲ 06-00 ಗಂಟೆಯಿಂದ ರಾತ್ರಿ 09-15 ಘಂಟೆಯ ನಡುವಿನ ಅವಧಿಯಲ್ಲಿ ಬಸನಗೌಡ ರಂಗನಗೌಡ ಪಾಟೀಲ ಸಾ: ಹೊಸೂರ ಇವರ ಬೋರಿನ ಮನೆಯ ಹತ್ತಿರ ಇರುವ ಅಕೇಷೀಯಾ ಗಿಡದ ಟೊಂಗಿಗೆ ಹಗ್ಗದಿಂದ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡು ಮರಣ ಹೊಂದಿರುತ್ತಾನೆ ವಿನಹ; ತನ್ನ ಗಂಡನ ಮರಣದಲ್ಲಿ ಬೇರೆ ಏನು, ಹಾಗೂ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ಭಾರತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 24-02-2021 11:26 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ