ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:94/2021 ಮಹಿಳೆ ಕಾಣೆ.

                  ಗೀತಾ ವಯಸ್ಸು-20 ವರ್ಷ ಇವಳನ್ನು ಈಗ ಸುಮಾರು 2 ವರ್ಷಗಳ ಹಿಂದೆ ಹಳೆಮೇಲ್ಮೂರಿ ಗ್ರಾಮದ ಬಸವರಾಜ ಶಿವಾನಂದಪ್ಪ ಬನ್ನಿಮಟ್ಟಿ ಇವನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ಬಾಳ್ವೆಗೆ ಹಳೇಮೇಲ್ಮೂರಿ ಗ್ರಾಮಕ್ಕೆ ಕಳಿಸಿಕೊಟ್ಟಿದ್ದು ಇತ್ತು. ಗೀತಾ ಇವಳಿಗೆ ದಿನಾಂಕ 10-08-2021 ರಂದು ಪಂಚಮಿ ಹಬ್ಬಕ್ಕೆ ಗುತ್ತಲಕ್ಕೆ ಕರೆದುಕೊಂಡು ಬಂದಿದ್ದು. ಗೀತಾ ಕೋಂ ಬಸವರಾಜ ಬನ್ನಿಮಟ್ಟಿ ಇವಳು ದಿನಾಂಕ 13-08-2021 ರಂದು ರಾತ್ರಿ 10-00 ಗಂಟೆಯಿಂದೆ ದಿನಾಂಕ 14-08-2021 ರಂದು ಮುಂಜಾನೆ 07-00 ಗಂಟೆ ನಡುವಿನ ಅವದಿಯಲ್ಲಿ ತನ್ನ ತಾಯಿಯ ಮನೆಯಲ್ಲಿ ಏನು ಹೇಳದೆ ಕೇಳದೆ ಗುತ್ತಲ ಗ್ರಾಮದ ತನ್ನ ತಾಯಿಯ ಮನೆಯಿಂದ ಎಲ್ಲಿಯೋ ಹೋಗಿ ಕಾಣಿಯಾಗಿರುತ್ತಾಳೆ ಕಾಣೆಯಾದವಳನ್ನ ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ  ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:125/2021 ಬೈಕ್‌ ಕಳ್ಳತನ.

                  ದಿನಾಂಕ:13-08-2021 ರಂದು ರಾತ್ರಿ 21-00 ಗಂಟೆಯಿಂದ 22-30 ಗಂಟೆಯ ನಡುವಿನ ಅವಧಿಯಲ್ಲಿ ಮಹಮದ್‌ ಗೌಸ್‌ ಕಾತೀಬ ಸಾ|| ರಾಣೆಬೇನ್ನೂರ ಇವರು ಮುಸ್ಸಿಪಲ್ ಗ್ರೌಂಡ ಹತ್ತಿರ ದಲಾಲಿ ಅಂಗಡಿಯ ಮುಂದೆ ನಿಲ್ಲಿಸಿದ ಒಂದು ಬಜಾಜ್ ಸಿ.ಟಿ-100 ಮೋಟಾರ ಸೈಕಲ್ ನಂ:ಕೆಎ-27/ಇಜಿ-4701 ಇದರ ಇಂಜಿನ ನಂಬರ:DUZWGL80966  ಚಾಸ್ಸೀಸ್ ನಂಬರ: MD2A18AZ6GWL00446  ನೇದ್ದು ಅ:ಕಿ:20,000/- ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ  ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:126/2021 ಮಹಿಳೆ ಕಾಣೆ.

                  ಸ್ವಪ್ನ ಪಿ ಜಿ ವಯಾ:21 ಸಾ|| ಹಾವೇರಿ ಇವಳು ದಿನಾಂಕ; 17/08/2021 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ರಾಣೇಬೆನ್ನೂರಿನ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ ದಿಂದ ತನ್ನ ತಂದೆಯ ಜೊತೆಗಿದ್ದಾಗ ತನ್ನ ತಂದೆಗೆ ಹೇಳದೇ ಕೇಳದೇ ಮುಂದೆ ಮುಂದೆ ಓಡಿ ಹೋಗಿ ಒಂದು ಮೋಟಾರ ಸೈಕಲ್ ಹತ್ತಿ ಕುಳಿತಿದ್ದು ಅದರ ಸವಾರನು ಹಾವೇರಿ ಕಡೆಗೆ ಮೋಟಾರ ಸೈಕಲ್ಲನ್ನು ನಡೆಸಿಕೊಂಡು ಹೋದನು ಮೋಟರ ಸೈಕಲ್ಲ ನಡೆಸಿಕೊಂಡು ಹೋದ ವ್ಯಕ್ತಿ ಹನುಮಂತ ಮ ಹಡಗಲಿ ಸಾ: ರಾಣೇಬೆನ್ನೂರು ಇವನ ಜೊತೆಗೆ ಹೋಗಿರಬಹುದು ಅಂತಾ ಅನುಮಾನವಿದೆ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಸ್ವಪ್ನ ಇವರ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:133/2021 ಕಲಂ: 380, 457 IPC .

                     ಕೂಸನೂರ ಗ್ರಾಮದ ಶ್ರೀ.ರಾಘವೇಂದ್ರ ವೈನ್ ಶ್ಯಾಪ್ನಲ್ಲಿ ದಿನಾಂಕ : 18-08-2021 ರ ರಾತ್ರಿ 11-00 ಘಂಟೆಯಿಂದ ದಿನಾಂಕ : 19-08-2021 ರ ಮುಂಜಾನೆ 05 ಘಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ವೈನ್ ಶಾಪನ ಹಿಂದೂಗಡೆ ಹಂಚುಗಳನ್ನು ತೆಗೆದು ಗಲ್ಲಾ ಪೆಟ್ಟಿಗೆಯಲ್ಲಿದ್ದ 1) 1200/- ರೂ ನಗದು ಹಣ. 2) ಡಿ.ವಿ.ಆರ್.ಅ.ಕಿ.4000/-ರೂ. 3) ರೊಟೆಟ್ ಕ್ಯಾಮರ.ಅ.ಕಿ. 2000/- ರೂ. 4) ಜಿಯೋ ಕಂಪನಿಯ 6360688675 ವೈಪೈ ಅ.ಕಿ. 1000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:134/2021 ಕಲಂ: 379 IPC .

                     ಕಾದರಸಾಬ್‌ ಮಹಮದಹುಸೇನಸಾಬ ಕೋಟಿ ಸಾ|| 62 ಇವರು ದಿನಾಂಕ : 17-08-2021 ರಂದು 13-30 ಘಂಟೆಯಿಂದ 14-00 ಘಂಟೆಯ ನಡುವಿನ ಅವದಿಯಲ್ಲಿ. ಕಾಡಶೆಟ್ಟಿಹಳ್ಳಿ ಗ್ರಾಮದ ಬೆಳಗಾಲಪೇಟ್-ಕಾಡಶೆಟ್ಟಿಹಳ್ಳಿ ರಸ್ತೆ ಪಕ್ಕದ ಇವರ ಜಮೀನಿನ ಪಕ್ಕದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರ ಕಂಪನಿಯ ಮೋಟಾರ್ ಸೈಕಲ್ ನಂಬರ: ಕೆಎ: 27. ವ್ಹಿ: 5099 ಅ||ಕಿ|| 15000/- ರೂಗಳು, ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:22/2021 ವ್ಯಕ್ತಿ ಸಾವು.

                   ಶ್ರೀ.ವೆಂಕಪ್ಪ ನಾಗಪ್ಪ ಮೂಲಿಮನಿ ವಯಾ: 48 ಸಾ|| ಮೂಲಿಮನಿ ಇವರು ದಿನಾಂಕ: 19-08-2021 ರಂದು ಮುಂಜಾನೆ 09-35 ಘಂಟೆ ಸುಮಾರಿಗೆ ಬಾಳಂಬೀಡ ವೀರಾಪೂರ ರಸ್ತೆ ಪಕ್ಕದಲ್ಲಿರುವ ವೀರಾಪೂರ ಗ್ರಾಮದ ವಾಸಪ್ಪ ನೇಮಚಂದ್ರಪ್ಪ ಪದ್ಮೋಜಿ ಇವರ ಕೃಷಿ ಜಮೀನಿಗೆ ತಂದ ಔಷಧಿ ರಸಗೊಬ್ಬರ ಮೊಟಾರ್ ಪೈಪಗಳನ್ನು ಮಹೀಂದ್ರಾ ಕಂಪನಿಯ ವಾಹನ ನಂ. ಕೆಎ.27 ಬಿ 7347 ನೇದ್ದರ ಮೇಲಿನಿಂದ ಕೆಳಗಡೆ ಇಳಿಸುತ್ತರುವಾಗ ಆಕಸ್ಮಿಕವಾಗಿ ವಿದ್ಯತ್ ತಂತಿ ತಗುಲಿ ಕೆಳಗೆ ಬಿದ್ದು ಚಿಕಿತ್ಸಗಾಗಿ ಅಕ್ಕಿಆಲೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಉಪಚಾರ ಫಲಿಸದೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-08-2021 06:27 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ