ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:32/2021 ಮಹಿಳೆ ಕಾಣೆ.

               ಕು:ಉಮಾ ತಂದೆ ತಿಪ್ಪೇಶ ಯಲಜಿ, ವಯಸ್ಸು 23 ವರ್ಷ, ಜಾತಿ:ಹಿಂದೂ ಮರಾಠ, ಸಾ:ಮಾಕನೂರ ಇವಳು ದಿನಾಂಕ: 15-05-2021 ರಂದು ಸಂಜೆ 05-00 ಗಂಟೆಗೆ ಅವರ ತಾಯಿಗೆ ಇಟಗಿ ಗ್ರಾಮಕ್ಕೆ ನಾಳೆ ಗೆಳತಿಯ ಎಂಗೆಂಜ್ಮೆಂಟ್ ಇದೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು ದಿನಾಂಕ:16/05/2021 ರಂದು ಸಂಜೆಯಾದರೂ ಮನೆಗೆ ಬಾರದೇ ಕಾಣೆಯಾಗಿದ್ದು ನಂತರ ಕಾಣೆಯಾದ ಉಮಾ ಇವಳಿಗಾಗೆ ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ಉಮಾ ಇವಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:57/2021 ಕಲಂ: 384 IPC.

                 ಅಶೋಕ ಪುಟ್ಟಪ್ಪ ಬೇಳವಗಿ ಸಾ|| ಹುಲಿಹಳ್ಳಿ ಇವರು ಕ್ಲಾಸ್-1 ಗುತ್ತಿಗೆದಾರರಿದ್ದು ಹಿರೇಕೆರೂರ ತಾಲೂಕು ಬೈರನಪಾದ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯ ಮತ್ತು ಪಾಲನೆಯ ಕೆಲಸಗಳನ್ನು ಸರಕಾರದಿಂದ ಅಧಿಕೃತ ಗುತ್ತಿಗೆ ಪಡೆದು ಯೋಜನೆಯ ಕೆಲಸಗಳನ್ನು ನಿರ್ವಹಿಸುತ್ತಿದ್ದು ಯವರಾಜ ಅಶೋಕ ಇವರಿಗೆ  ಪೋನ್ ಮಾಡಿ ಹಾವೇರಿ ಯಲ್ಲಿರುವ ತನ್ನ ಪಬ್ಲಿಕ್ ನ್ಯೂಸ್ ಕಛೇರಿಗೆ ಕರೆಯಿಸಿಕೊಂಡುನೀವು ಮಾಡುವ ಕುಡಿಯುವ ನೀರಿನ ಯೋಜನೆಯ ಕೆಲಸಗಳನ್ನು ಸರಿಯಾಗಿ ಮಾಡದೆ  ಕಳಪೆ ಕೆಲಸ ಮಾಡಿದ್ದಿರು, ನಿಮ್ಮ ಯೋಜನೆಯ ಬ್ರೇಕಿಂಗ್ ನ್ಯೂಸನ್ನು ಹಾಕಬಾರದೆಂದರೆ ನೀವು ನನಗೆ 03 ಲಕ್ಷ ರೂಪಾಯಿ ಕೊಡ್ರಿ ಅಂತ ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟು, ನೀವು ಹಣ ಕೊಡದೆ ಇದ್ದರೆ ನಾನು ಹಾವೇರಿ ಜಿಲ್ಲಾ ಪಂಚಾಯತಿ ಸಿಇಓ ರವರಿಂದ ಬೈಟ್ ತೆಗೆದುಕೊಳ್ಳುತ್ತೇನೆ ಅಂತ  ಹೇಳಿ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ :87/2021 ಕಲಂ: 379 IPC.

              ದಿನಾಂಕ:07-05-2021 ರಂದು ರಾತ್ರಿ 23-00 ಗಂಟೆಯಿಂದ ದಿನಾಂಕ:08-05-2021 ರಂದು ಬೆಳಗಿನ ಜಾವ 06-00 ಗಂಟೆಯ ನಡುವಿನ ಅವಧಿಯಲ್ಲಿ ಮಹೇಶ ಬ್ಯಾಡಗಿ ಸಾ|| ರಾಣೆಬೇನ್ನೂರ ಇವರು ತನ್ನ ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ಮಾರುತಿ ನಗರದ ತನ್ನ ಮನೆಯ ಹೊರಗೆ ನಿಲ್ಲಿಸಿದ ಬಜಾಜ್ ಪಲ್ಸರ್ -200 ಮೋಟಾರ ಸೈಕಲ್ ನಂ: ಕೆಎ-50/ಇಬಿ-4280 ಇದರ ಇಂಜಿನ ನಂಬರ:JLYCJD95208  ಚಾಸ್ಸೀಸ್ ನಂಬರ: MD2A55FY0JCD12879 ನೇದ್ದು ಅ:ಕಿ:50,000/-ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 20-05-2021 06:18 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ