ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:49/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-12) ; 376(2)(n)IPC .

                  ಅಶ್ವಿನಿ ತಂದೆ ಪ್ರಕಾಶ ವಡ್ಡಟ್ಟಿ ವಯಾ-17 ವರ್ಷ ಇವಳನ್ನು ಮಂಜುನಾಥ ತಂದೆ ನಾಗಪ್ಪ ಮೋಟೆಬೆನ್ನೂರ ಇವನು ಅಶ್ವಿನಿ ಇವಳನ್ನು ಪ್ರೀತಿಸಿ ಅವಳೊಂದಿಗೆ ಸಲುಗೆಯಿಂದ ಇದ್ದು ದಿನಾಂಕ;07-07-2021 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಬ್ಯಾಡಗಿ ಮಾರ್ಕೆಟಿಗೆ ಹೋಗಿ ಮರಳಿ ಸಾಯಂಕಾಲ 4-30 ಗಂಟೆ ಸುಮಾರಿಗೆ ಪರ್ತ ಮನೆಗೆ ಬಂದಾಗ ಮಂಜುನಾಥ ಇತನು ಅಲ್ಪವಯಿ ಮಗಳಾದ ಅಶ್ವಿನಿ ಇವಳು ಅಲ್ಪವಯಿ ಅಂತಾ ಗೊತ್ತಿದ್ದರೂ ಸಹ ಇವಳೊಂದಿಗೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಮಾಡಿ ಮನೆಯ ಒಳಗಡೆಯಿಂದ ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:112/2021 ಮಹಿಳೆ ಕಾಣೆ.

                  ಪೂಜಾ ತಂದೆ ಸುರೇಶ ಹಿತ್ತಲಮನಿ ವಯಾ: 17 ವರ್ಷ 11 ತಿಂಗಳು 23 ದಿವಸಗಳು ಜಾತಿ:ವಾಲ್ಮೀಕಿ ಉದ್ಯೋಗ: ವಿದ್ಯಾರ್ಥಿನಿ ಸಾ:ಚಿಕ್ಕಅಣಜಿ ಹಾ: ಬ್ಯಾಡಗಿ ನೆಹರೂ ನಗರ ಇವಳು ದಿನಾಂಕಃ16-08-2021 ರಂದು ಮುಂಜಾನೆ  09-00 ಘಂಟೆಗೆ  ತನ್ನ ಗೆಳತಿ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೊದವಳು ಎಲ್ಲಿಯೋ ಹೋಗಿದ್ದು ಎಷ್ಟು ಹುಡುಕಾಡಿದರೂ ಸಿಕ್ಕಿರುವದಿಲ್ಲಾ, ಕಾರಣ ಕಾಣೆಯಾದ ಪೂಜಾ ಇವಳನ್ನು ಹುಡುಕಿಕೊಡಬೇಕೆಂದು ರಾಜು ಓಲೇಕಾರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:145/2021 ಕಲಂ: 380, 457 IPC .

                     ದಿನಾಂಕ 17-08-2021 ರಂದು  ರಾತ್ರಿ 10-00 ಗಂಟೆಯಿಂದಾ ಈ ದಿವಸ ದಿನಾಂಕ 18-08-2021 ರಂದು ಮುಂಜಾನೆ 6-00 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರೂ ಹನಮನಮಟ್ಟಿಯಲ್ಲಿರುವ ಎನ್ ಎಚ್ 48 ಗೆ ಹೊಂದಿ ಇರುವ  ಎ ಟಿ ಎಮ್ ದ ಸರ್ಟರ್ಸದ ಕೀಲಿ ಮುರಿದು ಒಳಗಡೆ ಹೋಗಿ ಅಲ್ಲಿರುವ ಎ ಟಿ ಎಮ್ ಮಸೀನನ್ನು ಗ್ಯಾಸ್ ಕಟರ್ ದಿಂದಾ ಕಟ್ ಮಾಡಲು ಪ್ರಯತ್ನಿಸಿ ಆಗದೇ ಇದ್ದಾಗ ಹಾರೀಯಿಂದಾ ಮೀಟಿ ಅದರ ಒಳಗಡೆ ಕೈ ಹಾಕಿ 2,31, 500 /- ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ  ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:150/2021 ಮಹಿಳೆ ಕಾಣೆ.

                   ಕು.ಬಾವನಾ ತಂದೆ ಉದಯಕುಮಾರ ಹಿರೇಮಠ ವಯಾಃ 21, ವರ್ಷ, ಉದ್ಯೋಗ- ವಿದ್ಯಾರ್ಥಿ ಜಾತಿ-ಹಿಂದು ಲಿಂಗವಂತ ಸಾಃ ಅಕ್ಕಿಆಲೂರು, ಹಾಳೂರು ಓಣಿ, ತಾಃ ಹಾನಗಲ್ಲ, ಹಾವೇರಿ ಜಿಲ್ಲೆ  ಈತಳು  ದಿನಾಂಕಃ18/08/2021 ರಂದು ಬೆಳಿಗ್ಗೆ 06-10 ಗಂಟೆಯ ಸುಮಾರಿಗೆ ವಾಸದ ಮನೆಯಿಂದ ಮನೆಯಲ್ಲಿ ಯಾರಿಗೂ ಹೇಳದೇ ಹೋದವಳು ವಾಪಾಸ್ಸ್ ಇಲ್ಲಿಯವರೆಗೂ  ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ,   ತಮ್ಮ ಮಗಳನ್ನು ಸಂಬಂಧಿಕರ, ಹಾಗೂ ಸುತ್ತ ಮುತ್ತ ಗ್ರಾಮದಲ್ಲಿ ಹುಡುಕಾಡಿದ್ದು  ಪತ್ತೆಯಾಗಿರುವವುದಿಲ್ಲ ಹಾಗೂ ಪ್ರವೀಣ ಸಾಲೀಮಠ ಸಾಃ ಅಕ್ಕಿಆಲೂರು ಇವರ ಮೇಲೆ ಅನುಮಾನವಿದ್ದು ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಬೇಕೆಂದು ಬಾವನಾ ಇವರ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೆಕೇರೂರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                   ಸಿದ್ದನಗೌಡ ತಂದೆ ಹನುಮಂತಗೌಡ ಪಾಟೀಲ ವಯಾ: 30 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ವ್ಯವಸಾಯ, ಸಾ: ಜೋಗಿಹಳ್ಳೀ ತಾ: ಹಿರೇಕೆರೂರು ಈತನು ತಮ್ಮ ಜಮೀನದಲ್ಲಿ  ಬೇಸಾಯದ ಸಂಬಂದ ವಿವಿಧ ಬ್ಯಾಂಕುಗಳಲ್ಲಿ ಹಾಗೂ ಕೈಗಡವಾಗಿ ಸಾಲ ಮಾಡಿಕೊಂಡು ಈ ವರ್ಷ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಈ ವರ್ಷ ಬೆಳೆ ಸರಿಯಾಗಿ ಬಾರದೇ ಇದ್ದರಿಂದಾ ಸಾಲ ಹೇಗೆ ತೀರಿಸುವದು ಅಂತಾ ಮಾನಸಿಕ ಮಾಡಿಕೊಂಡು ದಿನಾಂಕ: 17/08/2021 ರಂದು ಮುಂಜಾನೆ 11-00 ಗಂಟೆಗೆ ಜೋಗಿಹಳ್ಳಿ ಗ್ರಾಮದ ಹದ್ದಿ ತನ್ನ  ಜಮೀನದಲ್ಲಿ ತನ್ನಷ್ಟಕ್ಕೆ ತಾನೆ ವಿಷಸೇವನೆ ಮಾಡಿದವನಿಗೆ ಉಪಚಾರಕ್ಕೆ ಹಿರೇಕೆರೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಉಪಚಾರ ಫಲಿಸದೇ ದಿನಾಂಕ: 17-08-2021 ರಂದು ರಾತ್ರಿ 10-30 ಗಂಟೆಗೆ ಮೃತಪಟ್ಟಿದ್ದು ಮೃತನ ಸಾವಿನಲ್ಲಿ ಯಾವದೇ ಸಂಶಯವಿರುವದಿಲ್ಲ ಅಂತಾ ರೂಪಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:30/2021 ವ್ಯಕ್ತಿ ಸಾವು.

                   ಸುಮಾರು 65 ರಿಂದ 70 ವಯಸ್ಸಿನ ಅನಾಮದೇಯ ಗಂಡಸು ವ್ಯಕ್ತಿ ತನಗಿದ್ದ ಯಾವುದೋ ಕಾಯಿಲೆಯಿಂದಲೋ ಇನ್ನಾವುದೋ ಕಾರಣದಿಂದ ದಿನಾಂಕ; 18-08-2021 ರಂದು ಮುಂಜಾನೆ 8-15 ಗಂಟೆ ದೇವಗಿರಿ ಮೆಳ್ಳಾಗಟ್ಟಿ ರಸ್ತೆಯ ಮದ್ಯ ವರದಾ ನದಿಯ ಬ್ರಿಡ್ಜ ಹತ್ತಿರ ದಂಡೆಯಲ್ಲಿ ಮೃತಟ್ಟಿರುವದಾಗಿ ಮೇಲ್ನೋಟಕಕ್ಕೆ ತಿಳಿದು ಬರುತ್ತಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

ಇತ್ತೀಚಿನ ನವೀಕರಣ​ : 23-08-2021 05:31 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ