ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:77/2021 ಕಲಂ: 379 IPC.

               ಶಿವಕುಮಾರ ಬಿ ವಿ ಸಾ|| ಚಿತ್ರದುರ್ಗ ಇವರು ಕಳೆದ ನಾಲ್ಕುವರೆ ತಿಂಗಳನಿಂದ ಬಿಂಗಾಪುರ ಹದ್ದೀಯಲ್ಲಿರುವ ಅಕ್ಷಯ ಸ್ಟೋನ್ ಮೇಟಲ್ಸ್ ಕಂಪನಿಯಲ್ಲಿ ತನಗೆ ಸಂಬಂದಿಸಿದ ಇಟಾಚಿ ನಂಬರ್ *S200-22295*  ನೇದನ್ನು ಕೆಲಸಕ್ಕೆ ಅಂತಾ ಬಿಟ್ಟು ಬಾಡಿಗೆ ರೂಪದಲ್ಲಿ ಬಾವ ಮಾನೆ ಸಾ.ಸತಾರ ಮಹಾರಾಷ್ಟ್ರ ಇವರ ಇಟಾಚಿ ಹಾಗು ಟಿಪ್ಪರಗಳನ್ನು ಬಾಡಿಗೆ ತೆಗೆದುಕೊಂಡು ಅವರಿಗೆ ತಿಂಗಳ ಅಂತ್ಯಕ್ಕೆ ಬಾಡಿಗೆ ಹಣವನ್ನು ಪಾವತಿಸುತ್ತಾ ಬಂದಿದ್ದು ಕಳೆದ ಏಪ್ರೀಲ್ ತಿಂಗಳ ಬಾಡಿಗೆ ಹಣವನ್ನು ಕೊಡಲು ತಡವಾಗಿದ್ದರಿಂದ ಇದೆ ಉದ್ದೇಶವನ್ನು ಇಟ್ಟುಕೊಂಡು ದಿನಾಂಕ : 04-05-2021 ರಂದು ಸಂಜೆ 07 ಘಂಟೆಯಿಂದ ರಾತ್ರಿ 11 ಘಂಟೆಯ ನಡುವಿನ ಅವದಿಯಲ್ಲಿ ಬಾವ ಮಾನೆ ಹಾಗೂ ಸಹಚರರು ಸೇರಿ  ಬಿಂಗಾಪುರ ಗ್ರಾಮದ ಅಕ್ಷಯ ಸ್ಟೋನ್ ಮೇಟಲ್ಸ್ ಕಂಪನಿಯಲ್ಲಿ ನಿಲ್ಲಿಸಿದ್ದ ಶಿವಕುಮಾರ ಇವರ ಬಾಬತ್ ಇಟಾಚಿ ನಂಬರ್ **S200-22295* ನೇದರ ಸಾಮಗ್ರಿಗಳಾದ 1)ಇಟಾಚಿ ಹೈಡ್ರೋಲಿಕ್ ಪಂಪ್ ಅ.ಕಿ.5 ಲಕ್ಷ ರೂಪಾಯಿ 2)ಇಟಾಚಿ ಪೈಲಟ್ ಪಂಪ್ ಅ.ಕಿ 15 ಸಾವಿರ ರೂಪಾಯಿ 3)ಇಟಾಜಿ ಇಂಜಿನ್ ಕಪ್ಲರ್ ಅ.ಕಿ.5 ಸಾವಿರ ರೂಪಾಯಿ 4)ಇಟಾಚಿ ಬೂಮ್ ಜಾಕ್ ಅ.ಕಿ.2 ಲಕ್ಷ 50 ಸಾವಿರ ರೂಪಾಯಿ 5)ಇಟಾಚಿ ಸ್ಟೀಕ್ ಜಾಕ್ ಅ.ಕಿ.2 ಲಕ್ಷ 50 ಸಾವಿರ ರುಪಾಯಿ 6)ಇಟಾಚಿ ಟೂಲ್ಸ್ ಅ.ಕಿ.50 ಸಾವಿರ 7)ಇಟಾಚಿ ಬಿಡಿ ಬಾಗಗಳು ಅ.ಕಿ.40 ಸಾವಿರ ರೂಪಾಯಿ 8)ಇಟಾಚಿ ಬಕೇಟ್ ಅ.ಕಿ.1 ಲಕ್ಷ 60 ಸಾವಿರ 9)ಇಟಾಚಿ ಟ್ರ್ಯಾಕ್ ಬ್ಲೇಡ ಅ.ಕಿ.60 ಸಾವಿರ ರುಪಾಯಿ 10)ಇಟಾಚಿ ಸ್ಟ್ರಾಟರ್ ಅ.ಕಿ.20 ಸಾವಿರ ರುಪಾಯಿ 11)ಇಟಾಚಿ ಡೈನಮೋ-2 ಅ.ಕಿ.20 ಸಾವಿರ ರುಪಾಯಿ 12)ಇಟಾಜಿ ಬ್ಯಾಟರಿ-2 ಅ.ಕಿ.10 ಸಾವಿರ ರುಪಾಯಿ 13)ಇಟಾಚಿ ಅಕ್ಸಿಲೇಟರ್ ಅಸೆಂಬ್ಲಿ ಅ.ಕಿ.65 ಸಾವಿರ ರುಪಾಯಿ 14)ರಿಮೋಲ್ಡ್ ಟೈಯರ್ 4 ಅ.ಕಿ.37 ಸಾವಿರ ರುಪಾಯಿ 15)ಡಿಸೆಲ್ 300 ಲೀಟರ್ ಅ.ಕಿ.26 ಸಾವಿರ ರುಪಾಯಿ 16) ಕೆ.ಎ-16 ಇ.ಎಲ್-9339 ಪಲ್ಸರ್ ಮೋಟಾರ್ ಸೈಕಲ್ ಅ.ಕಿ.50 ಸಾವಿರ ರುಪಾಯಿ ಒಟ್ಟು 15.58.000/-(ಐದಿನೈದು ಲಕ್ಷ ಐವತ್ತೇಂಟು ಸಾವಿರ) ಕಿಮ್ಮತ್ತಿನ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ತಮಗೆ ಸಂಬಂದಿಸಿದ ಟಿಪ್ಪರ್ ನಂಬರ್ 1)ಎಮ್.ಎಚ್-24 ಎ.ಬಿ-7766 ಹಾಗು 2)ಎಮ್.ಎಚ್.13 ಸಿ.ಯು.1539 ನೇದರಲ್ಲಿ ತುಂಬಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:86/2021 ಮಹಿಳೆ ಕಾಣೆ.

                 ಪವಿತ್ರಾ ಪರಶುರಾಮಪ್ಪ ಕೊಳುರು ವಯಾ: 21 ಸಾ|| ರಾಣೆಬೇನ್ನೂರ ಇವಳು ದಿನಾಂಕ; 17/05/2021 ರಂದು ಮದ್ಯಾಹ್ನ 12-30 ಗಂಟೆಯಿಂದ 13-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವಳನ್ನು ಈವರೆಗೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ನಿರ್ಮಲಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ :01/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

              ಸಂತೋಷ ತಂದೆ ಮಹಾವೀರ ಖಡ್ಡೇಣ್ಣನವರ ವಯಾ:33 ವರ್ಷ ಜಾತಿ:ಜೈನ್ ಉದ್ಯೋಗ:ಬಿರ್ಲಾ ಕಂಪನಿಯಲ್ಲಿ ಇಂಜಿನೇಯರ ಸಾ:ಕಲ್ಲೋಳ ತಾ:ಚಿಕ್ಕೂಡಿ ಜಿಲ್ಲಾ ಬೆಳಗಾವಿ ಹಾಲಿ:ಕುಮಾರಪಟ್ಟಣಂ ಸ್ಟಾಫ್ ಕಾಲೋನಿ ಇವರು ತಮ್ಮ ಮಗಳಾದ ನಯೋನಿಕ ಇವಳಿಗೆ ಮೈಯಲ್ಲಿ ಹುಷಾರು ಇಲ್ಲದ್ದರಿಂದ ಹಾಗೂ ಬಿರ್ಲಾ ಕಂಪನಿಯಲ್ಲಿ 10 ವರ್ಷ ಸೇವೆಯನ್ನು ಸಲ್ಲಿಸಿದರು ನನಗೆ ಯಾವುದೇ ಮುಂಬಡ್ತಿಯನ್ನು ನೀಡಿರುವುದಿಲ್ಲಾ ಮತ್ತು ನನಗೆ ಜನರಲ್ ಸಿಪ್ಟ್ ಕರ್ತವ್ಯಕ್ಕೆ ನೇಮಕ ಮಾಡಿ ಅಂತಾ ಕೇಳಿದರು ನೇಮಕ ಮಾಡುತ್ತಿಲ್ಲಾ ಅಂತಾ ಇವರು ಮನಸ್ಸಿಗೆ ಬೇಜಾರ ಮಾಡಿಕೊಂಡು ದಿನಾಂಕ:18/05/2021 ರಂದು  ಮದ್ಯಾಹ್ನ 02-00 ಗಂಟೆಯಿಂದ ಸಂಜೆ 06-30 ನಡುವಿನ ಅವದಿಯಲ್ಲಿ ಕುಮಾರಪಟ್ಟಣಂ ಸ್ಟಾಫ್ ಕಾಲೋನಿಯಲ್ಲಿರುವ ನಮ್ಮ ವಸತಿ ಗೃಹ ನಂಬರ್ ಜೆ2 ಬ್ಲಾಕ್ 11  ನೇದ್ದರ ಮನೆಯ ಬೇಡ್ ರೂಮ್ನಲ್ಲಿ  ತನ್ನಷ್ಟಕ್ಕೆ ತಾನೇ ಮೇಲ್ಚಾವಣಿಯಲ್ಲಿರುವ  ಸಿಲಿಂಗ್ ಫ್ಯಾನ್ಗೆ ಪ್ಲಾಸ್ಟಿಕ್ ಹಗ್ಗದಿಂದ ಕೊರಳಿಗೆ ಉರುಲು ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಗಂಡನ ಸಾವಿನಲ್ಲಿ ಬೇರೆ ಸಂಶಯ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ :15/2021 ವ್ಯಕ್ತಿ ಆತ್ಮಹತ್ಯೆ.

              ದೇವರಾಜ ತಂದೆ ಜಗದೇವಪ್ಪ ಹಾದಿಮನಿ ವಯಾ: 29 ವರ್ಷ, ಜಾತಿ: ಹಿಂದೂ-ರಡ್ಡಿ, ಉದ್ಯೋಗ: ವ್ಯವಸಾಯ ಸಾ: ಎರೇಕುಪ್ಪಿ ತಾ: ರಾಣೇಬೆನ್ನೂರು ಇವನು ಕಳೆದ 3-4 ವರ್ಷಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಅಸ್ವಸ್ತನಾಗಿ ಯಾರೊಂದಿಗೂ ಬೆರೆಯದೇ ಸರಿಯಾಗಿ ಮಾತನಾಡದೇ ಬಂದು ದಿನಾಂಕ: 18-05-2021 ರಂದು ಮುಂಜಾನೆ 07-30 ಗಂಟೆಯಿಂದ 08-00 ಗಂಟೆ ನಡುವಿನ ಅವಧಿಯಲ್ಲಿ ತಮ್ಮ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೇ ತನ್ನ ಮೈಮೇಲೆ ಪೆಟ್ರೋಲ ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಮರಣ ಹೊಂದಿದ್ದು ಅದೆ ವಿನಃ ಅವನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತನ ತಂದೆಯು ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಯಿಸಿದ್ದು ಇರುತ್ತದೆ.

 

 

 

ಇತ್ತೀಚಿನ ನವೀಕರಣ​ : 19-05-2021 06:15 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ