ಅಭಿಪ್ರಾಯ / ಸಲಹೆಗಳು

     ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:39/2021 ಕಲಂ: 379 IPC.

             ಮಹಮದ್ ಜಾಪರ ಸಂಶಿ ಸಾ ಹಾವೇರಿ ಸುಭಾಶ ಸರ್ಕಲ್ ದಿನಾಂಕ: 03-04-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 04-04-2021  ಬೆಳ್ಳಿಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಇವರ ಮನೆ ಮುಂದೆ ನಿಲ್ಲಿಸಿದ  HF DELUXE DRUM SELF CAST ಕಂಪನಿಯ ಮೋಟರ್ ಸೈಕಲ್ಲ ನಂಬರ KA-27/EQ5891 ಚೆಸ್ಸಿ ನಂ- MBLHAW136L5M81892   ಮತ್ತು ಇಂಜೆನ್ ನಂಬರ HA11EWL5M01703 ಗಾಡಿಯ ಬಣ್ಣ BLACK ಇದ್ದು ಗಾಡಿಯ ಅಂದಾಜು ಮೌಲ್ಯ ಅಃಕಿಃ 50,000/- ರೂ ಕಿಮ್ಮತ್ತಿನ ಮೋಟರ ಸೈಕಲ್ಲನ್ನು ಯಾರೋ ಕಳ್ಳರು ಹ್ಯಾಂಡಲ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:64/2021 ಕಲಂ: The SC & ST (Prevention of Atrocities) Amendment Act 2015 (U/s-3(2)(va)); PROTECTION OF CHILDREN FROM SEXUAL OFFENCES ACT 2012 (U/s-11,12) 363 IPC .

                 ಐಶ್ವರ್ಯ ತಂದೆ ರಂಗಪ್ಪ ತಿಪ್ಪಣ್ಣನವರ ವಯಾ: 15 ವರ್ಷ,10 ತಿಂಗಳು ಜಾತಿ ಹಿಂದೂ ವಾಲ್ಮೀಕಿ ಸಾ ; ಕ್ಯಾತನಕೇರಿ, ತಾ ; ರಟ್ಟಿಹಳ್ಳಿ ಇವಳನ್ನು ಶಿವರಾಜ ಮಂಜಪ್ಪ ನಾಮಧೇವ ಇವನು  ದಿನಾಂಕ ; 16-04-2021 ರಂದು ಮುಂಜಾನೆ 10-30 ಗಂಟೆಗೆ ಬಾಲಕಿಯು ತಮ್ಮ ವಾಸದ ಮನೆಯಲ್ಲಿ ಒಬ್ಬಳೇ ಇದ್ದಾಗ ಬಾಲಕೀಯ ಮನೆಗೆ ಹೋಗಿ ಯಾವುದೋ ಉದ್ದೇಶದಿಂದ ಬಾಲಕಿಗೆ ಆಶೆ ಆಮಿಶ್ಯೆ ತೋರಿಸಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಇಂಡಸಗಟ್ಟಿ ಗ್ರಾಮದಲ್ಲಿ ಹೋಗುವಾಗ ರಂಗಪ್ಪ ಇವರ ದೊಡ್ಡ ಮಗಳು ರಂಜಿತಾ ಇವಳು ನೋಡಿ ಅವರನ್ನು  ಕರೆದುಕೊಂಡು ತನ್ನ ಮನೆಗೆ ಹೋಗಿ ಇಟ್ಟುಕೊಂಡು ಸಂಗತಿಯನ್ನು ಹೇಳಿದ್ದುಬಾಲಕೀಯು ಪರಿಶಿಷ್ಠ ಪಂಗಡದ ಜಾತಿಗೆ ಸೇರಿದವಳು ಅಂತಾ ಗೊತ್ತಿದ್ದರೂ ಸಹ ಅಪಹರಣ ಮಾಡಿಕೊಂಡು ಹೋರಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:80/2021 ಮಹಿಳೆ ಕಾಣೆ.

             ಗೌರವ್ವ ಉಮೇಶ ಲಮಾಣಿ ವಯಾ 41 ಸಾ ಬೈರಾಪೂರ  ಇವರು ದಿನಾಂಕ: 27-01-2021 ರಂದು 11-00 ಗಂಟೆಯ ಸುಮಾರಿಗೆ ಹೊಲದಿಂದ ಮನೆಗೆ ಹೋಗುತ್ತೇನೆ ಅಂತಾ ತಿಳಿಸಿ ಹೋದವಳು ಮನೆಗೆ  ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಉಮೇಶ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ವ್ಯಕ್ತಿ ಸಾವು.

                 ರವಿಚಂದ್ರ ನೀಲಪ್ಪ ಕೊತಂಬರಿ ವಯಾ: 37 ಸಾ|| ಪಾಣಿಗಟ್ಟಿ ಇವರು ತನ್ನ ಅಣ್ಣ ಮನೆ ಕಟ್ಟುತ್ತಿದ್ದು ಅದಕ್ಕೆ ನೀರು ಹಾಯಿಸಲು ಅಂತಾ ಹೋಗಿ ಹಾಪ್ ಹೆಚ್.ಪಿ ಮೋಟಾರಗೆ ಕರೆಂಟ ವಾಯರ ಸಹಾಯದಿಂದ ತೆಗೆದುಕೊಂಡಿದ್ದು ಇತ್ತು. ನಂತರ  ವಾಯರನ್ನು ತಪ್ಪಿಸಲು ಅಂತಾ ಹೋದಾಗ ಆಕಸ್ಮಾತಾಗಿ ಬಲ ಮುಂಗೈಗೆ ಕರೆಂಟ ಶಾಖ ತಗುಲಿದ್ದು ಅವನನ್ನು ತಕ್ಷಣವೇ ಶಿಗ್ಗಾಂವ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೊರಿಸಿದಾಗ ಅವರು ಪರೀಕ್ಷಿಸಿ ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 22-04-2021 12:59 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ