ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:28/2021 ಕಲಂ: 379 IPC.

                ಹಾವೇರಿ ಶಹರ ಪೊಲೀಸ್ ಠಾಣಾ ಹದ್ದಿ ಪೈಕಿ, ಹಾವೇರಿ ಶಹರದ ತಾರಾಪ್ಲಾಜಾದಲ್ಲಿರುವ ಶಿವಸಾಗರ ಹೋಟೆಲ್ ಕಂಪೌಂಡ ಒಳಗೆ ದಿನಾಂಕಃ 31-01-2021 ರಂದು ಬೆಳ್ಳಿಗೆ 11-00 ಗಂಟೆಯಿಂದ ಸಾಯಂಕಾಲ 5-00 ನಡುವಿನ ಅವಧಿಯಲ್ಲಿ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ ರಾಜಸಾಬ ಗುಂದಗಟ್ಟಿ ಇವರು ಹೊಂಡಾ ಕಂಪನಿಯ ಸಿ ಬಿ ಸೈನ್ ಮೋಟರ್ ಸೈಕಲ ನಂ: ಕೆಎ-27/ಇಎ-3509 ಅದರ ಚಸ್ಸಿ ನಂ: ME4JC36JFD7473283 ಇಂಜಿನ್ ನಂ: JC36E77719112 ಕಪ್ಪು ಬಣ್ಣ ಅ.ಕಿ: 20,000/-ರೂ ಗಾಡಿಯ ಮಾಡಲ್ 2013 ಇದನ್ನು ಯಾರೋ ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:36/2021 ವ್ಯಕ್ತಿ ಕಾಣೆ.

                ಹೊನ್ನಪ್ಪ ನಾಗಪ್ಪ ಕರೆತಿಮ್ಮಣ್ಣನವರ ವಯಾ: 50 ಸಾ|| ರಾಣೆಬೇನ್ನೂರ  ಇವರು ದಿನಾಂಕ: 07-02-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 08-02-2021 ರಂದು ಬೆಳಗಿನ 5-30 ಗಂಟೆಯ ನಡುವಿನ ಅವಧಿಯಲ್ಲಿ ತಾವು ವಾಸದ ಮನಯಿಂದ ಯಾರಿಗೂ ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದು, ಹೊನ್ನಪ್ಪನವರ ಮನೆಯವರು ಈವರೆಗೂ ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಸಿಕ್ಕಿರದೆ ಇದ್ದ ಕಾರಣ ಠಾಣೆಗೆ ಹಾಜರಾಗಿ ಹೊನ್ನಪ್ಪನನ್ನು ಹುಡುಕಿಕೊಡಬೇಕೆಂದು ಪ್ರಕಾಶ ಪಿರ್ಯದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ಚಾಭಾವಿಕ ಮರಣ ಸಂಖ್ಯೆ:08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

             ಮಂಜುನಾಥ ತಂದೆ ಗುಡ್ಡಪ್ಪ ತಮ್ಮನಗೌಡ್ರ, 43 ವರ್ಷ, ಜ್ಯಾತಿ: ಹಿಂದೂ ವಾಲ್ಮಿಕಿ, ಉದ್ಯೋಗ: ಕೂಲಿ ಕೆಲಸ, ಸಾ: ಕುಣಿಮೆಳ್ಳಿಹಳ್ಳಿ ಹಾಲಿ ವಸ್ತಿ ಅಗಡಿ ಗ್ರಾಮ, ತಾ: ಹಾವೇರಿ. ಈತನು ತನಗಿದ್ದ ಬಿಪಿ ಕಾಯಿಲೆ ಹಾಗೂ ಲಕ್ವಾ ಸೇಕದಿಂದ ಬಳಲಿ ಮನನೊಂದು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ; 17-03-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 18-03-2021 ರ ಮುಂಜಾನೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಅಗಡಿ ಗ್ರಾಮದ ಬಸವರಾಜ ಶಿವಣ್ಣನವರ, ಇವರ ಹೊಸದಾಗಿ ಕಟ್ಟುತ್ತಿರುವ ತೋಟದ ಮನೆಯ ಮೆಟ್ಟಿಲುಗಳ ಹತ್ತಿರ ಮೇಲ್ಚಾವಣಿಯ ಕಬ್ಬಿಣದ ರಾಡಿಗೆ ತನ್ನ ಲುಂಗಿಯಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಿನಹ ಈತನ ಸಾವಿನಲ್ಲಿ ಯಾರ ಮೇಲೆಯೂ ಸಂಶಯ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 20-03-2021 06:39 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ