ಅಭಿಪ್ರಾಯ / ಸಲಹೆಗಳು

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:128/2021  ಕಲಂ: 380,454,457 IPC.

              ದಿನಾಂಕ; 12-07-2021 ರಂದು ಸಾಯಂಕಾಲ 07-00 ಘಂಟೆಯಿಂದ ದಿನಾಂಕ; 13-07-2021 ರಂದು ಬೆಳಿಗ್ಗೆ 10-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹಾನಗಲ್ಲ ಶಹರದ ಪಾಳಾ ಕ್ರಾಸ್ ಹತ್ತಿರ ತಡಸ-ಶಿವಮೊಗ್ಗ ರಸ್ತೆಯ ಪಕ್ಕದಲ್ಲಿರುವ ಮಹಮದಜಮಿಲ ಮೆಹಬುಬಲಿ ಮುಲ್ಲಾ ಸಾ|| ಹಾನಗಲ್ಲ ಇವರ ಬಾಬತ್ತ ಪಂಚರ ಗ್ಯಾರೇಜ ಅಂಗಡಿಯ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಅಂಗಡಿಯ ಒಳಗಡೆ ಇಟ್ಟಿದ್ದ 1) ಒಂದು ಎಲ್ಜಿ ಕಂಪೆನಿಯ ಏರ್ ಕಂಪ್ರೆಸ್ಸರ ಅ;ಕಿ; 15,000/- ರೂಗಳು, 2) 06 ಲಾರಿ ಜಾಕಗಳು ಅ;ಕಿ; 6000/- ರೂಗಳು, 3) 40 ಮೋಟಾರ್ ಸೈಕಲ್ಲ ಟ್ಯೂಬಗಳು ಅ;ಕಿ; 9600/- ರೂಗಳು, 4) 01 ಗ್ರೀಸ್ ಗನ್ ಅ;ಕಿ; 6000/- ರೂಗಳು, 5) 10 ಕಬ್ಬಿಣದ ಲಿವರಗಳು ಅ;ಕಿ; 2000/- ರೂಗಳು, 6) 01 ಬಾಕ್ಸ ಪಾನಾ ಸೆಟ್ ಅ;ಕಿ; 5000/- ರೂಗಳು, 7) 01 ಹೀಟ್ ಪಂಚರ ಮಷೀನ ಅ;ಕಿ; 2000/- ರೂಗಳು ಹೀಗೆ ಒಟ್ಟು 45,600/- ರೂಗಳು ಕಿಮ್ಮತ್ತಿನ ಪಂಚರ ಗ್ಯಾರೇಜಿನ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2021  ವ್ಯಕ್ತಿ ಸಾವು.

              ಆಂಜನೇಯಪ್ಪ ತಂದೆ ಮಂಜಪ್ಪ ಮೇಗಳಮನಿ ವಯಾ 29 ವರ್ಷ ಸಾ|| ನದಿಹರಳಹಳ್ಳಿ ತಾ|| ರಾಣೆಬೆನ್ನೂರ ಈತನು ಗೌಂಡಿ ಕೆಲಸ ಮಾಡುತ್ತಿದ್ದು ದಿನಾಂಕ 16/07/2021  ರಂದು 12-30 ಗಂಟೆಯ ಸುಮಾರಿಗೆ ಕೋಡಿಯಾಲ ಹೊಸಪೇಟೆ ಗ್ರಾಮದ ಬಸಪ್ಪ ಚಿನ್ನಣ್ಣನವರ ಇವರು ಮನೆ ಕಟ್ಟಲು ಪ್ಲಿಂತ್ ಹಾಕಿರುವ ಜಾಗದಲ್ಲಿ ನಿಂತು ತನ್ನ ಮೇಸ್ತ್ರಿಗೆ ಕಾಯುತ್ತಿದ್ದಾಗ ಪಕ್ಕದ ಮನೆಯ ಗೋಡೆಯು ಸತತ ಒಂದು ವಾರದ ಮಳೆಯಿಂದ ಶಿಥಿಲಗೊಂಡು ಇವನ ಮೇಲೆ ಬಿದ್ದಿದ್ದು ಅವನನ್ನು ಚಿಕಿತ್ಸೆಗಾಗಿ ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲ ಮಾಡಿ ಹೆಚ್ಚಿನ ಉಪಚಾರಕ್ಕೆ ಡಾವಣಗೇರಿ ಎಸ್.ಎಸ್.ಆಸ್ಪತ್ರೆಗೆ ಹೋಗಿ ಉಪಚಾರಕ್ಕೆ ದಾಖಲ ಮಾಡಿದಾಗ ಚಿಕಿತ್ಸೆಯಿಂದ ಚೇತರಿಸಿಕೊಳ್ಳದೇ ಮೃತಪಟ್ಟಿದ್ದು ಇವರ ಸಾವಿನಲ್ಲಿ ಬೇರೆನು ಸಂಶಯ ಇರುವುದಿಲ್ಲಾ ಅಂತಾ ಮಂಗಳಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021  ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

             ಪಂಡಪ್ಪ ಗಂಗಪ್ಪ ಮಾಸನಕಟ್ಟಿ ವಯಾ:50 ಸಾ|| ಕೊಣನಕೇರಿ ಇವರು ದಿನಾಂಕ: 11-07-2021 ರಂದು 22-00 ಗಂಟೆ ಸುಮಾರಿಗೆ ತನ್ನ ಮತ್ತು ಲಾವಣಿ ಜಮೀನಿಗೆ ಅಂತಾ ಕೈಗಡ ಮತ್ತು ಬ್ಯಾಂಕದಲ್ಲಿ ಮಾಡಿದ ಸಾಲ ಹೇಗೆ ತಿರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯಲ್ಲಿ ಭತ್ತಕ್ಕೆ ಹೊಡೆಯುವ ಕೀಟ ನಾಶಕ ಎಣ್ಣೆಯನ್ನು ಸೇವನೆ ಮಾಡಿ ಉಪಚಾರಕ್ಕೆ ಶಿಗ್ಗಾಂವ ಮತ್ತು ಹುಬ್ಬಳ್ಳಿ ಕಿಮ್ಸ್  ಆಸ್ಪತ್ರೆಯಲ್ಲಿ ದಾಖಲಿಸಿದ್ದು ಉಪಚಾರ ಫಲಿಸದೇ ದಿನಾಂಕ: 17/07/2021 ರಂದು ಸಾಯಂಕಾಲ 6-40 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ವಿನ: ಆತನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲಾ ಅಂತಾ ಮೃತನ ಪತ್ನಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021  ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ಬಸವರಾಜ ತಂದೆ ರಾಮಪ್ಪ ಹಂಪಣ್ಣನವರ ವಯಾ- 50 ವರ್ಷ ಜಾತಿ- ಹಿಂದೂ ಲಿಂಗವಂತ ಉದ್ಯೋಗ- ವ್ಯವಸಾಯ ಸಾ: ಕೂಸನೂರ ತಾ: ಹಾನಗಲ್ಲ ಇವರು ದಿನಾಂಕ: 01-07-2021 ರಂದು ಮುಂಜಾನೆ 07-00 ಘಂಟೆ ಸುಮಾರಿಗೆ ಮನೆಯಲ್ಲಿ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿ ವಾಪಾಸ ಮನೆಗೆ ಬಾರದೇ ಇದ್ದರಿಂದಾ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದು ಇತ್ತು. ಆದರೆ ಬಸವರಾಜ ಇವನು ತನಗೆ ಇದ್ದ ಅನಾರೋಗ್ಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ; 01/07/2021 ರಂದು ಮುಂಜಾನೆ 07-00 ಘಂಟೆಯಿಂದಾ ದಿನಾಂಕ: 17-07-2021 ರ ಮುಂಜಾನೆ 09-00 ಘಂಟೆಯ ನಡುವಿನ ಅವಧಿಯಲ್ಲಿ ಕ್ರೀಮಿನಾಶಕ ವಿಷ ಸೇವನೆ ಮಾಡಿ ಕುಸನೂರ ಗ್ರಾಮದ ಸಂತೋಷ ಶಾಂತಪ್ಪ ಹಂಪಣ್ಣನವರ ಇವರ ಜಮೀನದಲ್ಲಿ  ಮರಣ ಹೊಂದಿದ್ದು ಮೃತನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ರಮೇಶ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2021  ಮಹಿಳೆ ಸಾವು.

              ಮಂಜವ್ವ ಶಿವಪ್ಪ ಕರಡಿ ವಯಾ:52 ಸಾ|| ನೀರಲಗಿ ಇವಳು ದಿನಾಂಕ: 16/07/2021 ರಂದು ಮಧ್ಯಾಹ್ನ ನೀರಲಗಿ ಗ್ರಾಮದ ಹತ್ತಿರ ಇರುವ ವರದಾ ನದಿಗೆ ಬಟ್ಟೆ ತೊಳೆಯಲು ಹೋಗಿ ನದಿಯಲ್ಲಿ ಮದ್ಯಾಹ್ನ 03-30 ಗಂಟೆಗೆ ಆಕಸ್ಮಾತ್ ಕಾಲು ಜಾರಿ ಬಿದ್ದು ನದಿಯಲ್ಲಿ ಮುಳಗಿದ್ದು ದಿನಾಂಕ: 17/07/2021 ರಂದು ಮಧ್ಯಾಹ್ನ  03-00 ಗಂಟೆಗೆ ಮೃತಳ ಶವ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 28-07-2021 12:21 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ