ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:71/2021 ಮಹಿಳೆ ಕಾಣೆ.

                ಮಂಜುಳಾ ತಂದೆ ಸೋಮಪ್ಪ ಅಮರಾವತಿ ವಯಸ್ಸು:- 18 ವರ್ಷ 08 ತಿಂಗಳು ಉದ್ಯೋಗ:ಹಿಂದೂ ವಾಲ್ಮಿಕಿ ಉದ್ಯೋಗ: ವಿದ್ಯಾರ್ಥೀನಿ ಸಾ:ಹಲಗೇರಿ ತಾ:ರಾಣೇಬೆನ್ನೂರ ಇವಳು ದಿನಾಂಕ:16-05-2021 ರಂದು 14-30 ಗಂಟೆ ಸುಮಾರಿಗೆ ತನ್ನ ವಾಸದ ಮನೆಯಿಂದ ತನ್ನ ಗೆಳತಿ ದೀಪಾ ತಂದೆ ರಾಮಪ್ಪ ಮಣಿಗೇರ ಇವಳ ಮನೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದವಳು  ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿ ಕಾಣೆಯಾದವಳ ಚಹರೆಃ 4 ಅಡಿ 8 ಇಂಚು, ದುಂಡು ಮುಖ, ಸಾಧಾರಣ ಮೈಕಟ್ಟು, ಸಾದಾ ಗಪ್ಪು ಮೈಬಣ್ಣ, ನೀಟಾದ   ಮೂಗು, ತಲೆಯಲ್ಲಿ ಕಪ್ಪು ಕೂದಲು ಇರುತ್ತವೆ. ಎಡಗೈ  ಮೊಣಕೈ ಹತ್ತಿರ Deepa ಅಂತಾ ಹಚ್ಚೆ ಅದೆ ಹಾಗೂ ಹಣೆಯಲ್ಲಿ ಸಣ್ಣ ಚುಕ್ಕೆ ಅದೆ, ಬಟ್ಟೆಗಳು: ಮನೆಯಿಂದ ಹೋಗುವಾಗ ಬಾದಾಮಿ ಬಣ್ಣದ ಚೂಡಿದಾರ ಹಾಕಿಕೊಂಡು ಹೋಗಿರುತ್ತಾಳೆ ಮಾತನಾಡುವ ಭಾಷೆ: ಕನ್ನಡ ಬಾಷೆ ಮಾತನಾಡುತ್ತಾರೆ. ಪಡಿತರ ಚೀಟಿ ನಂ: ಬಿಪಿಎಲ್-ಆರ್ ಬಿ ಎನ್-14139034 ಆಧಾರ್ ಕಾರ್ಡ ನಂ: 634270378582 ಈ ರೀತಿ ಚಹರೆಪಟ್ಟಿಯುಳ್ಳ ಮಂಜುಳಾ ತಂದೆ ಸೋಮಪ್ಪ ಅಮರಾವತಿ ಇವಳನ್ನು ಹುಡುಕಿಕೊಡಲು ಠಾಣೆಯಲ್ಲಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:84/2021 ವ್ಯಕ್ತಿ ಕಾಣೆ.

                 ಬಸವರಾಜ ಗುಡ್ಡಪ್ಪ ಕಮ್ಮಾರ ವಯಾ: 36 ಸಾ|| ರಾಣೆಬೇನ್ನುರ ಇವನು ಮಾನಸಿಕ ಅಸ್ವಸ್ತನಿದ್ದು ದಿನಾಂಕ; 11/05/2021 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೋದವನು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವನನ್ನು ಈವರೆಗೂ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗನನ್ನು ಹುಡುಕಿಕೊಡಬೇಕೆಂದು ಇಂದ್ರಮ್ಮ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 85/2021 ಕಲಂ: 379 IPC.

              ದಿನಾಂಕ:07-05-2021 ರಂದು ರಾತ್ರಿ 23-00 ಗಂಟೆಯಿಂದ ದಿನಾಂಕ:08-05-2021 ರಂದು ಬೆಳಗಿನ ಜಾವ 04-00 ಗಂಟೆಯ ನಡುವಿನ ಅವಧಿಯಲ್ಲಿ ಸುಹಿಲ ಬಳಿಗಾರ ಸಾ|| ರಾಣೆಬೇನ್ನೂರ ಇತನು ತನ್ನ ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ಮಾರುತಿ ನಗರದ ತನ್ನ ಮನೆಯ ಹೊರಗೆ ನಿಲ್ಲಿಸಿದ್ದ ಬಜಾಜ್ ಪಲ್ಸರ್ ಎನ್.ಎಸ್-200 ಮೋಟಾರ ಸೈಕಲ್ ನಂ: ಕೆಎ-68/ಎಚ್ – 5078 ಇದರ ಇಂಜಿನ ನಂಬರ:JLYCKF37527 ಚಾಸ್ಸೀಸ್ ನಂಬರ: MD2A36FY0KCD36015 ನೇದ್ದು ಅ:ಕಿ:50,000/-ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 18-05-2021 01:18 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ